Chikkamagaluru: ಕೊನೆಯ ಸುತ್ತಿನ ಎತ್ತಿನಗಾಡಿ ಸ್ಪರ್ಧೆಯಲ್ಲಿ, ನೊಗ ಬಡಿದು ಯುವಕ ಸ್ಥಳದಲ್ಲೇ ಸಾವು!!!

Bullock cart race at chikkamagaluru youth dies on the spot

Chikkamagaluru: ಎತ್ತಿನಗಾಡಿ ಸ್ಪರ್ಧೆಯೊಂದರಲ್ಲಿ ನೊಗ ಬಡಿದು ಯುವಕನೋರ್ವ ಮೃತಪಟ್ಟ ಘಟನೆಯೊಂದು ನಡೆದಿದೆ (Chikkamagaluru). ಈ ಘಟನೆ ನಿನ್ನೆ ಶನಿವಾರ ನಡೆದಿದ್ದು, ಈ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.

ಮೃತ ಯುವಕನನ್ನು ಭರತ್‌ (25) ಎಂದು ಗುರುತಿಸಲಾಗಿದೆ.

ಜೋಡಿ ಎತ್ತಿನ ಗಾಡಿ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕೊನೆಯ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಈ ದುರದೃಷ್ಟಕರ ಘಟನೆ ನಡೆದಿದೆ. ಅಂತಿಮ ಸ್ಪರ್ಧೆಯಲ್ಲಿ ನೊಗ ಹಿಡಿಯಲು ಭರತ್‌ ಹೋಗಿದ್ದ ಸಂದರ್ಭ ವೇಗವಾಗಿ ಎತ್ತಿನ ಗಾಡಿ ನೊಗ ತಲೆಗೆ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Viral News: ಐಫೋನ್‌ ಕೊಡಿಸಲ್ಲ ಎಂದ ಪೋಷಕರ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದ ಬಾಲಕರು! ಕೊನೆಗೆ ಪತ್ತೆಯಾದದ್ದೆಲ್ಲಿ ಗೊತ್ತೇ?

Leave A Reply

Your email address will not be published.