Kolar : ಕೋಲಾರದಲ್ಲಿ BJP ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ ! ಪ್ರತಿಭಟನೆ ಬಿಟ್ಟು ಎದ್ದು, ಬಿದ್ದು ಓಡಿದ ನಾಯಕರು !

Share the Article

Kolar: ಕರ್ನಾಟಕ ಕಾಂಗ್ರೆಸ್‌ (congress) ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ (bjp) ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ(Bengaluru) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (yadiyurappa) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಂತೆಯೇ ಕೋಲಾರದಲ್ಲಿಯೂ (Kolar) BJP ಪ್ರತಿಭಟನೆ ನಡೆಸಿದೆ.

ಆದರೆ, ಕೋಲಾರದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಹೆಚ್ಚೇನು ದಾಳಿ ನಡೆಸಿದ್ದು, ನಾಯಕರೆಲ್ಲಾ ಪ್ರತಿಭಟನೆ ಬಿಟ್ಟು ಎದ್ದು, ಬಿದ್ದು ಓಡಿದ್ದಾರೆ‌‌. ಏಕಾಏಕಿ ಹೆಜ್ಜೇನು ದಾಳಿಯಿಂದ ಬೆಚ್ಚಿಬಿದ್ದ ಬಿಜೆಪಿ ನಾಯಕರು ಹಾಗೂ ಸ್ಥಳದಲ್ಲಿದ್ದ ಇನ್ನಿತರರು ಸ್ಥಳದಿಂದ ಓಡಿಹೋಗಿದ್ದಾರೆ.

ಸಂಸದ ಎಸ್. ಮುನಿಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ಮತ್ತು ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು ದಿಕ್ಕಾಪಾಲಾಗಿ ಓಡಿರುವ ಘಟನೆ ಬೆಳಕಿಗೆ ಬಂದಿದೆ. ಕೆಲವರು ಹೆಜ್ಜೇನು ದಾಳಿಯ ಪರಿಣಾಮ ಜಿಲ್ಲಾಸ್ಪತ್ರೆಗೆ ದಾಖಲಾಗಿ, ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

Leave A Reply