EPFO Intrest: ಖಾಸಗೀ ನೌಕರರೇ ಇತ್ತ ಗಮನಿಸಿ- PF ಬಡ್ಡಿದರ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್!
Good news for the 'private employees' of the state EPFO interest rate update

EPFO Interest: ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಗಳೇ ಇತ್ತ ಗಮನಿಸಿ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ.ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುವಂತ ಉದ್ಯೋಗಿಗಳಿಗೆ ಭವಿಷ್ಯ ನಿಧಿ ವಂತಿಕೆಯನ್ನು(EPFO Intrest)ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಪಿಎಫ್ ನಿಗದಿ ಮಾಡಲಾಗಿದ್ದು, ಉದ್ಯೋಗಿಗಳು ಕಂಪನಿಯಿಂದ ಕಡಿತ ಮಾಡಿದ ಹಣವನ್ನು ಖಾತೆಗೆ ಜಮಾ ಪ್ರಕ್ರಿಯೆ ನಡೆಯಲಿದೆ.

ಪಿಎಫ್ ಖಾತೆಗೆ ಜಮಾ ಮಾಡಿದಂತ ಹಣದ ಬಡ್ಡಿ ದರವನ್ನು ಇದೀಗ ರಾಜ್ಯ ಸರ್ಕಾರದಿಂದ ಶೇ.7.1ರಷ್ಟು ನಿಗದಿ ಮಾಡಲಾಗಿದೆ. ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ ಧಾಯಪುಲೆ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು 01-07-2023 ರಿಂದ 30-09-2023ರವರೆಗಿನ ಅವಧಿಗೆ ವಾರ್ಷಿಕ ಶೇ.7.1ಕ್ಕೆ ಬಡ್ಡಿದರವನ್ನು ನಿಗದಿ ಮಾಡಲಾಗಿದೆ.