Gokulastami Special Food: ಕೃಷ್ಣನ ಭಕ್ತಿಯೊಂದಿಗೆ ದಾಖಲೆ ಬರೆದ ಕರಾವಳಿ ಮಹಿಳೆ !! ಈಕೆ ತಯಾರಿಸಿದ ಬಗೆ ಬಗೆಯ ಖಾದ್ಯಗಳ ಸಂಖ್ಯೆ ಕೇಳಿದ್ರೆ ನೀವೇ ಶಾಕ್ !!

Mangaluru news gokulashtami special food Mangaluru doctor shares his patient prepared 88 dishes on Janmashtami

Gokulastami Special Food: ಶ್ರೀ ಕೃಷ್ಣ ಜನ್ಮಾಷ್ಟಮಿಯು ಹಿಂದೂ ಹಬ್ಬಗಳ ಪ್ರಮುಖ ಹಬ್ಬಗಳ ಪೈಕಿ ಒಂದಾಗಿದೆ. ಈಗಾಗಲೇ ದೇಶಾದ್ಯಂತ ಬಹಳ ಅದ್ದೂರಿಯಾಗಿ ಉತ್ಸಾಹದಿಂದ ಗೋಕುಲಾಷ್ಟಮಿಯನ್ನು ಆಚರಿಸಲಾಗಿದ್ದು, ಈ ಹಬ್ಬವು ಭಗವಾನ್​ ವಿಷ್ಣುವಿನ ಅವತಾರವಾದ ಕೃಷ್ಣನ ಜನ್ಮದಿನವನ್ನು ನೆನಪಿಸುವ ಹಬ್ಬವಾಗಿದೆ. ಅಲ್ಲದೇ ಹಬ್ಬದ ದಿವಸದಂದು ಹಲವಾರು ಬಗೆಯ ತಿಂಡಿ ತಿನಿಸುಗಳನ್ನು ಕೃಷ್ಣನಿಗೆ ಅರ್ಪಿಸುವುದು ವಾಡಿಕೆ.

ಇದೀಗ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಭಕ್ತೆಯೊಬ್ಬರು ಶ್ರೀ ಕೃಷ್ಣನಿಗೆ 88 ಬಗೆಯ ಖಾದ್ಯ (Gokulastami Special Food) ಅರ್ಪಿಸಿದ್ದು , ಇದರ ಪೊಟೋವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ತಮ್ಮ ಎಕ್ಸ್​ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯಗಳ ಫೋಟೋವೊಂದನ್ನು ಎಕ್ಸ್​ನಲ್ಲಿ ಹಾಕಿದ್ದು, ಈ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ.

ಡಾ. ಪದ್ಮನಾಭ್ ಕಾಮತ್ ಅವರು ತಮ್ಮ ಎಕ್ಸ್​ ಟ್ವಿಟ್ಟರ್ ಪೋಸ್ಟ್​ನಲ್ಲಿ, ಅಲಂಕಾರಗೊಂಡ ದೇವರ ಮಂಟಪ, ಕೃಷ್ಣನ ಮುಂದೆ ಅಚ್ಚುಕಟ್ಟಾಗಿ ಇರಿಸಿದ 88 ಬಗೆಯ ಖಾದ್ಯ ಗಳು , ಮಧ್ಯ ಭಕ್ತೆ ಕುಳಿತಿರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಶೀರ್ಷಿಕೆಯಾಗಿ “ಅವರ ಬಗ್ಗೆ ಮತ್ತು ಅವರಿಗೆ ಭಗವಂತ ಶ್ರೀಕೃಷ್ಣನ ಮೇಲಿರುವ ಶ್ರದ್ಧೆ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ನನ್ನ ಬಳಿ ಹಲವಾರು ಸಮಯದಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಯಾಗಿದ್ದು, ಅವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ಸೆಪ್ಟೆಂಬರ್ 6 ಬುಧವಾರದಂದು 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮಲ್ಲಿ ಇಂಥ ವಿಶೇಷ ನಾಣ್ಯಗಳೇನಾದರೂ ಇದೆಯಾ? ಹಾಗಿದ್ರೆ ಮಾರಾಟ ಮಾಡಿ, ಲಕ್ಷ ಲಕ್ಷ ಹಣ ಪಡೆಯಿರಿ

Leave A Reply

Your email address will not be published.