IAS ರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಮ್ಮೆ ಸಂಕಷ್ಟ- ಬಟಾ ಬಯಲಾಯ್ತು ಮತ್ತೊಂದು ಸತ್ಯ!!

National news IAS officer Rohini sindhuri once again under controversy

Rohini Sindhuri: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ನಡುವಿನ ರಂಪಾಟ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಮನೆ ಮಾತಾಗಿತ್ತು. ಆದರೆ, ಇದೀಗ ಮತ್ತೇ ರೋಹಿಣಿ ಸಿಂಧೂರಿ(Rohini Sindhuri) ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಸೂರು ಡಿ.ಸಿ. ಆಗಿದ್ದ ಸಮಯದಲ್ಲಿ ನಿಯಮ ಉಲ್ಲಂಘಿಸಿದ್ದರು ಎನ್ನುವ ಆರೋಪ ಇದೀಗ ಬುಗಿಲೆದ್ದಿದೆ.

ಹೌದು, ರೋಹಿಣಿ ಸಿಂಧೂರಿ, ಮೈಸೂರು ಡಿಸಿ ಆಗಿದ್ದಾಗ ನಿಯಮಗಳನ್ನು ಮೀರಿ ಹಣಕಾಸು ಇಲಾಖೆ ಅನುಮತಿ ಪಡೆಯದೇ ಹಣ ಖರ್ಚು ಮಾಡಿದ್ದು, ಅವರು ಡಿಸಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯನ್ನು ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಮಾಡಿದ್ದು, ಹಗರಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖಾ ವರದಿ ಪ್ರಕಾರ ಶಿಸ್ತುಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಪತ್ರ ಬರೆದಿದ್ದು, ಈ ಪತ್ರದಲ್ಲಿ ಪ್ರಾಥಮಿಕ ತನಿಖಾ ವರದಿಯ ಅಂಶವನ್ನೂ ಉಲ್ಲೇಖ ಮಾಡಲಾಗಿದೆ.

ಪತ್ರದಲ್ಲಿ ಮುಖ್ಯವಾಗಿ ಡಿಸಿ ನಿವಾಸ ನವೀಕರಣಕ್ಕೆ ಬಳಸಿದ ಹಣಕ್ಕೆ ಆರ್ಥಿಕ ಇಲಾಖೆ ಅನುಮತಿಸಿಲ್ಲ ಎನ್ನುವ ಅಂಶವೂ ಸೇರಿದೆ. ಇನ್ನು ಬಟ್ಟೆ ಬ್ಯಾಗ್ ಖರೀದಿಯಲ್ಲೂ ಯಾವ ನಿಯಮವನ್ನೂ ಪಾಲಿಸಿಲ್ಲ. ಹೀಗಾಗಿ ಶಿಸ್ತುಕ್ರಮ ಜರುಗಿಸಿ ಎಂದು ಸರ್ಕಾರಕ್ಕೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಹಿಂದೂ ಧರ್ಮವನ್ನು ಕೆದಕುವವರಿಗೆ, ಮುಸ್ಲಿಂ ಹುಟ್ಟಿನ ಬಗ್ಗೆ ಕೇಳುವ ಧೈರ್ಯವಿದೆಯೇ? ಪರಮೇಶ್ವರ್‌ಗೆ ಟಾಂಗ್ ನೀಡಿದ ಯತ್ನಾಳ್‌

Leave A Reply

Your email address will not be published.