Sunny Leone: ‘ಕೇರಳ ಕುಟ್ಟಿ’ಯಾಗಿ ಸೀರೆಯಲ್ಲಿ ಮಿಂಚಿದ ಪಡ್ಡೆ ಹುಡುಗರ ಪೋರಿ ಸನ್ನಿ ಲಿಯೋನ್ ! ನೋಡಲು ಎರಡು ಕಣ್ಣು ಸಾಲದೆಂದ ನೆಟಿಜೆನ್ಸ್ !!

Entertainment Bollywood news actress Sunny Leone in saree look in Kozhikode

Share the Article

Sunny Leone: ಖ್ಯಾತ ನಟಿ ಸನ್ನಿ ಲಿಯೋನ್ ಬಗ್ಗೆ ಹೆಚ್ಚಾಗಿ ಏನು ಹೇಳಬೇಕಿಲ್ಲ. ಯಾಕೆಂದರೆ ಸನ್ನಿ ಲಿಯೋನ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹುಡುಗರಂತೂ ಸನ್ನಿ ಲಿಯೋನ್ ಎಂದರೆ ಹುಚ್ಚೆದ್ದು ಕುಣಿಯುತ್ತಾರೆ. ಸನ್ನಿ ಲಿಯೋನ್ (Sunny Leone) ಹುಡುಗರ ಕ್ರಶ್ ಎಂದೇ ಹೇಳಬಹುದು. ಸದ್ಯ ಸನ್ನಿ ಲಿಯೋನ್ ‘ಕೇರಳ ಕುಟ್ಟಿ’ಯಾಗಿ ಸೀರೆಯಲ್ಲಿ ಮಿಂಚಿದ್ದು, ನೋಡಲು ಎರಡು ಕಣ್ಣು ಸಾಲದು!!!.

ಭಾನುವಾರ ಕೇರಳದ ಕೋಝಿಕ್ಕೋಡ್‌ಗೆ ಆಗಮಿಸಿದ್ದ ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ಕ್ಯಾಲಿಕಟ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ‘ಫ್ಯಾಶನ್ ರೇಸ್ – ವಿನ್ ಯುವರ್ ಪ್ಯಾಶನ್’ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದರು. ಸನ್ನಿ ಲಿಯೋನ್‌ ವೇದಿಕೆಯಿಂದಲೇ ತನ್ನ ಎಲ್ಲಾ ಅಭಿಮಾನಿಗಳಿಗೆ ಓಣಂ ಹಬ್ಬದ ಶುಭಾಶಯ ತಿಳಿಸಿ, ವಿಕಲಾಂಗ ಮಕ್ಕಳೊಂದಿಗೆ ರಾಂಪ್‌ ವಾಕ್‌ ಮಾಡಿದರು.

Sunny Leone

ಸನ್ನಿ ಲಿಯೋನ್‌ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿರುವ ಫೋಟೋ (Sunny Leone photos) ಹಾಗೂ ವಿಡಿಯೋಗಳು ವೈರಲ್‌ ಆಗಿದೆ. ಸನ್ನಿ ಲಿಯೋನ್‌ ಬಿಳಿ ಬಣ್ಣ ಹಾಗೂ ಚಿನ್ನದ ಬಣ್ಣದ ಅಂಚು ಹೊಂದಿದ್ದ ಸೀರೆ ಧರಿಸಿ, ತಲೆಗೆ ಮಲ್ಲಿಗೆ ಹೂವನ್ನು ಮುಡಿದುಕೊಂಡು ಸಾಂಪ್ರದಾಯಿಕವಾಗಿ ಬಂದಿದ್ದರು. ಸಾಂಪ್ರದಾಯಿಕ ಕೇರಳ ಕಸುವು ಸೀರೆಯಲ್ಲಿ ಸ್ಟೇಜ್‌ಗೇರಿದ ಸನ್ನಿ ಲಿಯೋನ್‌ರನ್ನು ಅವರ ಕೇರಳ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Sunny Leone

ಸದಾ ‘ಹಾಟ್‌’ ಅವತಾರಗಳಲ್ಲೇ ಕಾಣಿಸಿಕೊಳ್ಳುವ ಸನ್ನಿ ಈ ಬಾರಿ ಅಂದವಾದ ಸೀರೆ ಉಟ್ಟು ಅಭಿಮಾನಿಗಳಿಗೆ ಕಾಣಿಸಿದ್ದಾರೆ. ನೆಟ್ಞಿಗರಂತು ಸನ್ನಿಯನ್ನು ಕಂಡು ಕಳೆದೇ ಹೋಗಿದ್ದಾರೆ. ಸನ್ನಿ ಲಿಯೋನ್‌ರನ್ನು ಸಾಂಪ್ರದಾಯಿಕ ಕೇರಳ ಸೀರೆಯಲ್ಲಿ ಕಂಡು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ಗಳ ಮಳೆ ಸುರಿಸಿದ್ದಾರೆ.

Sunny Leone

ಇದನ್ನೂ ಓದಿ: Rajanikanth: ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಲಿದು ಬಂದ ರಾಜ್ಯಪಾಲ ಪಟ್ಟ ?! ಯಾವ ರಾಜ್ಯ ಗೊತ್ತಾ ? ಏನಿದು ಹೊಸ ಗುಡ್ ನ್ಯೂಸ್?

Leave A Reply