Madhya Pradesh: ಪುಸ್ತಕ ಮಾರುತ್ತಿದ್ದ ಮುಸ್ಲಿಂನ ಮೇಲೆ ಹಲ್ಲೆ- ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ!!
Madhya Pradesh news attack on Muslim book seller at Madhya Pradesh video goes viral
Madhya Pradesh: ಮಧ್ಯಪ್ರದೇಶದ(Madhya Pradesh) ಉಜ್ಜಯಿನಿಯ ಪುಸ್ತಕೋತ್ಸವದಲ್ಲಿ ಹಿಂದೂ ಮಹಿಳೆಯರ ಗುಂಪೊಂದು ಮುಸ್ಲಿಂ ಪುಸ್ತಕ ಮಾರಾಟಗಾರನ ಮೇಲೆ ಹಲ್ಲೆ ಮಾಡಿದ ಪ್ರಕರಣ ವರದಿಯಾಗಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು,ಕೆಲ ಬಲ್ಲ ಮೂಲಗಳ ಮಾಹಿತಿ ಅನುಸಾರ, ವಕಾರ್ ಸಲೀಂ ಎಂಬ ಸಂತ್ರಸ್ತ ಫೆಸ್ಟ್‌ನಲ್ಲಿ ಪುಸ್ತಕ ಮಳಿಗೆಯನ್ನು ಹಾಕಿದ್ದರು. ಮಹಿಳೆಯರ ಗುಂಪು ಪುಸ್ತಕ ವಿತರಣೆಯ ಬಗ್ಗೆ ವಿಚಾರಿಸಿದ ಸಂದರ್ಭ ಮಾರಾಟಗಾರ ಪುಸ್ತಕ (Books)ಕೊಂಡುಕೊಳ್ಳಲು ಬಂದವರ ದೂರವಾಣಿ ಸಂಖ್ಯೆ (Phone Number)ಕೇಳಿದ್ದಾನೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಮಹಿಳೆಯರ ಗುಂಪು (Ladies)ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.
ಸಲೀಂ ತಮ್ಮ ಮುಖ್ಯ ಕಛೇರಿ ಗುರುದಾಸ್‌ಪುರದಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಪುಸ್ತಕ ಮೇಳಕ್ಕಾಗಿ ಗ್ವಾಲಿಯರ್‌ನಿಂದ ಉಜ್ಜಯಿನಿಗೆ ಪ್ರಯಾಣ ಬೆಳೆಸಿರುವ ಕುರಿತು ಕೂಡ ಸಂತ್ರಸ್ತ ವಕಾರ್ ಸಲೀಂ ಮಳಿಗೆಯ(Book Stall)ಬಗ್ಗೆ ವಿವರಣೆ ನೀಡಿದ ವೀಡಿಯೋ ಕೂಡ ವೈರಲ್ ಆಗಿದೆ. ಆದರೆ, ಪುಸ್ತಕ ಮಾರಾಟಗಾರ ಹೇಳುವುದನ್ನು ಕೇಳಲು ಕೂಡ ವ್ಯವಧಾನವಿಲ್ಲದೆ ಮಹಿಳೆಯರು ಪುಸ್ತಕ ಮಾರಾಟಗಾರನಿಗೆ ಕಪಾಳಮೋಕ್ಷ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಆದ ವೀಡಿಯೊದಲ್ಲಿ ಸಲೀಮ್ ಘಟನೆಯ ಬಗ್ಗೆ ವಿವರಿಸುವುದನ್ನು ಕೇಳಬಹುದಾಗಿದ್ದು, ವಾಗ್ವಾದ ಮಾಡುತ್ತಿದ್ದ ದುರ್ಗಾ ವಾಹಿನಿ ಗುಂಪಿನ ಮಹಿಳೆಯೊಬ್ಬರು ಕೆಟ್ಟ ಉದ್ದೇಶದಿಂದಲೇ ವ್ಯಕ್ತಿ ತನ್ನ ನಂಬರ್ ಕೇಳಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.