WordPad : ಮರೆಯಾಗಲಿದೆಯಾ 30 ವರ್ಷ ಉಚಿತ ಸೌಲಭ್ಯ ನೀಡಿದ ವರ್ಡ್ ಪ್ಯಾಡ್ ?? ಈ ಕುರಿತು ಮೈಕ್ರೋಸಾಫ್ಟ್ ಹೇಳಿದ್ದೇನು?

WordPad: ಮೈಕ್ರೋಸಾಫ್ಟ್(Microsoft)ಇನ್ನು ಮುಂದೆ ವರ್ಡ್ಪ್ಯಾಡ್ಗೆ ಯಾವುದೇ ಅಪ್ಡೇಟ್ ನೀಡುವುದಿಲ್ಲ ಎಂದು ಘೋಷಿಸಿದೆ. ಸುಮಾರು ಮೂರು ದಶಕಗಳಿಂದ ವಿಂಡೋಸ್‌ (Windows) ಬಳಕೆದಾರರ ನೆಚ್ಚಿನ ವರ್ಡ್‌ಪ್ಯಾಡ್ (WordPad) ಅನ್ನು ಮೈಕ್ರೋಸಾಫ್ಟ್‌ (Microsoft windows) ತೆಗೆದುಹಾಕುತ್ತಿದೆ.

 

1995ರಲ್ಲಿ ವಿಂಡೋಸ್ 95 ಜೊತೆಗೆ ಪರಿಚಯಿಸಲಾಗಿದ್ದ ವರ್ಡ್ ಪ್ಯಾಡ್ ಸುಮಾರು 30 ವರ್ಷಗಳಿಂದ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ಭಾಗವಾಗಿದೆ.ಉಚಿತ ಬೇಸಿಕ್ ವರ್ಡ್ ಪ್ರೊಸೆಸರ್ (Word processor) ಆಗಿರುವ ವರ್ಡ್‌ಪ್ಯಾಡ್ ಇನ್ನೂ ಮುಂದೆ ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಭವಿಷ್ಯದ ಆವೃತ್ತಿಗಳಲ್ಲಿ WordPad ಇರುವುದಿಲ್ಲ ಎಂದು ಮೈಕ್ರೋಸಾಫ್ಟ್ ಅಧಿಕೃತವಾಗಿ ಹೇಳಿದೆ.ಇದಕ್ಕೆ ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್ ವರ್ಡ್ ಅನ್ನು ಬಳಕೆ ಮಾಡುವಂತೆ ಸಲಹೆ ನೀಡಿದೆ. ವರ್ಡ್ ಪ್ಯಾಡ್ಗಿಂತ ತುಂಬಾ ವೈಶಿಷ್ಟ್ಯಗಳನ್ನು ಒಳಗೊಂಡ ಜೊತೆಗೆ ಬಳಸಲು ಸುಲಭವಾದ ಎಂಎಸ್ ವರ್ಡ್ 1995 ರಿಂದ ವಿಂಡೋಸ್ನೊಂದಿಗೆ ಲಭ್ಯವಾಗುತ್ತಿದೆ.

 

Microsoftನ ಅಧಿಕೃತ ಪ್ರಕಟಣೆ ಹೇಗಿದೆ ಎಂದು ಗಮನಿಸಿದರೆ,

“WordPad ಅನ್ನು ಇನ್ನು ಮುಂದೆ ನವೀಕರಿಸಲಾಗುವುದಿಲ್ಲ ಮತ್ತು ವಿಂಡೋಸ್‌ನ ಭವಿಷ್ಯದ ಆವೃತ್ತಿಯಲ್ಲಿ ಇದನ್ನು ತೆಗೆದುಹಾಕಲಾಗುತ್ತದೆ. .doc ಮತ್ತು .rtfನಂತಹ ಪಠ್ಯ ದಾಖಲೆಗಳನ್ನು ರಚಿಸಿ ಕಾಪಾಡಿಕೊಳ್ಳಲು ಅಥವಾ ಸೇವ್ ಮಾಡಲು Microsoft Word, Windows Notepad ಅಂತಹ ಸರಳ ಪ್ರೊಸೆಸರ್‌ಗಳನ್ನು ನಾವು ಶಿಫಾರಸು ಮಾಡುತ್ತೇವೆ.ʼʼ ಎಂದು ಹೇಳಿದೆ.

 

WordPad ಅನ್ನು ಅಧಿಕೃತವಾಗಿ ತೆಗೆದುಹಾಕುವ ಮೂಲಕ Microsoft ಪರ್ಯಾಯ ವರ್ಡ್‌ ಪ್ರೊಸೆಸರ್‌ ಆಗಿರುವ Microsoft Word ಅನ್ನು ಪ್ರಮೋಟ್‌ ಮಾಡಲಿದ್ದು,ಇದು ಪಾವತಿ ಫೀಚರ್‌ ಆಗಿದ್ದು, ವರ್ಡ್‌ಪ್ಯಾಡ್‌ ಹೊಂದಿರದ ಹಲವಾರು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಇದು Office 365 ಚಂದಾದಾರಿಕೆಯ ಭಾಗವಾಗಿದೆ. ವಿಂಡೋಸ್ 7 ರಿಬ್ಬನ್ ಯುಐ ಆವೃತ್ತಿಯ ನಂತರ ವರ್ಡ್‌ಪ್ಯಾಡ್‌ ಅನ್ನು ನವೀಕರಣ ಮಾಡಿಲ್ಲ. AI- ಚಾಲಿತ ವೈಶಿಷ್ಟ್ಯಗಳನ್ನೊಳಗೊಂಡಿರಲಿರುವ ಅತ್ಯಾಧುನಿಕ Windows 12 ಆವೃತ್ತಿ ಶೀಘ್ರದಲ್ಲಿ ಬರಲಿದ್ದು, ಅದರಲ್ಲಿ ವರ್ಡ್‌ಪ್ಯಾಡ್‌ ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ.

Leave A Reply

Your email address will not be published.