SBI ನಿಂದ ಕೋಟಿಗಟ್ಟಲೆ ಗ್ರಾಹಕರಿಗೆ ಭರ್ಜರಿ ಉಡುಗೊರೆ, ಈಗ ಯುಪಿಐ ಮೂಲಕ ಈ ಸೌಲಭ್ಯದ ಪ್ರಯೋಜನ ಪಡೆಯಿರಿ
ದೇಶದ ಅತಿ ದೊಡ್ಡ ಸರಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟೊಂದನ್ನು ನೀಡಿದೆ. ತನ್ನ ಡಿಜಿಟಲ್ ರೂಪಾಯಿಯಲ್ಲಿ UPI ಇಂಟರ್‌ಆಪರೇಬಿಲಿಟಿ ಸೇವೆಯನ್ನು ಜಾರಿಗೆ ತಂದಿದೆ ಎಂದು ಸೋಮವಾರ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಟಲ್ ರೂಪಾಯಿಯನ್ನು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಂದರೆ CBDC ಎಂದು ಕರೆಯಲಾಗುತ್ತದೆ. ಇದರಿಂದ ಜನರು ಡಿಜಿಟಲ್ ಕರೆನ್ಸಿಯಲ್ಲಿ ಪಾವತಿ ಮಾಡುವುದು ಸುಲಭವಾಗುತ್ತದೆ. ಆಕ್ಸಿಸ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಮೊದಲು ಈ ಸೌಲಭ್ಯವನ್ನು ಪ್ರಾರಂಭ ಮಾಡಿತ್ತು.
ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅಭೂತಪೂರ್ವ ಅನುಕೂಲತೆಯನ್ನು ಒದಗಿಸುವುದು ಗುರಿ ಎಂದು ಹೇಳಿಕೆ ನೀಡಿದೆ. ಈ ಸೌಲಭ್ಯವನ್ನು ಎಸ್‌ಬಿಐ ಅಪ್ಲಿಕೇಶನ್‌ನಿಂದ ಇ-ರೂಪಾಯಿ ಮೂಲಕ ಪ್ರವೇಶಿಸಬಹುದು. UPI QR ಕೋಡ್‌ನ್ನು ಸುಲಭವಾಗಿ ಸ್ಕ್ಯಾನ್ ಮಾಡುವ ಮೂಲಕ ಯಾವುದೇ ತೊಂದರೆಯಿಲ್ಲದೆ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಇ ರೂಪಾಯಿಯು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಡಿಜಿಟಲ್ ಕರೆನ್ಸಿಯಾಗಿದೆ. ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ ನೋಟುಗಳು ಮತ್ತು ನಾಣ್ಯಗಳ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ರೂಪವಾಗಿದೆ. ಇದಕ್ಕಾಗಿ ನೀವು ವ್ಯಾಲೆಟ್‌ನಲ್ಲಿ ಹಣವನ್ನು ಅಪ್‌ಲೋಡ್ ಮಾಡಬೇಕು. ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಎಸ್‌ಬಿಐ ಅಪ್ಲಿಕೇಶನ್‌ನ ಮೈನ್ ಪೇಜ್‌ಗೆ ಹೋಗಿ ಲೋಡ್ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಎಸ್‌ಬಿಐ ನಲ್ಲಿ ನಿಮ್ಮ ಲಿಂಕ್ ಮಾಡಿದ ಖಾತೆಯಿಂದ ಹಣವನ್ನು ವರ್ಗಾಯಿಸುವ ಆಯ್ಕೆ ಕಾಣುತ್ತದೆ. ಒಮ್ಮೆ ಹಣ ಅಪ್ಲೋಡ್ ಮಾಡಿದ ನಂತರ, ನೀವು ಬೇರೆ ಬೇರೆ ಯುಪಿಐ ಮೂಲಕ ಹಣವನ್ನು ವರ್ಗಾಯಿಸಬಹುದು.