Pythons and girl Video: ಅಬ್ಬಬ್ಬಾ.. ರಾಶಿ ರಾಶಿ, ದೈತ್ಯ ಹಾವುಗಳ ಜೊತೆ ರೋಮ್ಯಾನ್ಸ್ ಮಾಡುತ್ತಾಳಂತೆ ಈಕೆ !! ಅಷ್ಟಕ್ಕೂ ಇದೇನಿದು ವಿಚಿತ್ರ ಅಂತೀರಾ?! ಇಲ್ಲಿದೆ ನೋಡಿ ಭಯಾನಕ ವಿಡಿಯೋ

Viral video news girls sleeping with many pythons video goes viral

Share the Article

Pythons and girl Video: ಹಾವು ಎಂದರೆ ಬಹುತೇಕರಿಗೆ ಭಯವೇ ಹೆಚ್ಚು. ಹಾಗಿರುವಾಗ ಈ ಒಂದು ದೃಶ್ಯ ನೋಡಿದಾಗ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುವಂತೆ ಮಾಡುತ್ತೆ. ಅದಲ್ಲದೆ ಒಂದು ಸಣ್ಣ ಹಾವಿಗೆ ಭಯ ಬೀಳುವ ನಾವು ರಾಶಿ ರಾಶಿ ಹಾವನ್ನು ಅಪ್ಪಿಕೊಂಡು ಮಲಗುವುದು ಅಸಾಧ್ಯವೇ ಸರಿ. ಆದರೆ ಇಲ್ಲೊಬ್ಬಳಿಗೆ ಹಾವುಗಳು ತನ್ನ ಹಾಸಿಗೆಯ ಮೇಲೆ ತೆವಳುತ್ತಾ ಇದ್ದರೆ ಮಾತ್ರ ನಿದ್ದೆ ಬರುತ್ತದೆಯಂತೆ.

ಇತ್ತೀಚಿಗೆ ಅಪಾಯಕಾರಿ ಪ್ರಾಣಿಗಳನ್ನು ಕೂಡಾ ಸಾಕುಪ್ರಾಣಿಗಳನ್ನಾಗಿ ಮಾಡಿಬಿಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಆದರೂ ಹೀಗೆ ಈ ಅಪಾಯಕಾರಿ ಜೀವಿಗಳನ್ನು ಮನೆಯಲ್ಲಿ ಸಾಕುವವರು ಅದರೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುವುದು ಹೆಚ್ಚಾಗಿ ಕಾಣಬಹುದು.

ಅಂತೆಯೇ ಹಾವು ಎಂದರೆ ಯಾವುದೋ ಸಣ್ಣ ಪುಟ್ಟ ಹಾವುಗಳಲ್ಲ. ದೈತ್ಯಾಕಾರದ ಹೆಬ್ಬಾವುಗಳನ್ನು ಹಾಸಿಗೆಯಲ್ಲಿ ತನ್ನ ಪಕ್ಕ ಬಿಟ್ಟುಕೊಂಡೆ ಈಕೆ ಮಲಗುತ್ತಾಳೆ. ಹಾವುಗಳು ತನ್ನ ಹಾಸಿಗೆಯ ಮೇಲೆ ತೆವಳುತ್ತಾ ಇದ್ದರೆ ಮಾತ್ರ ಈ ಬಾಲಕಿಗೆ ನಿದ್ದೆ ಬರುತ್ತದೆಯಂತೆ. ಈಕೆಯ ವಿಡಿಯೋ ವೈರಲ್ ಆಗಿದ್ದು, ಕುತೂಹಲ ಮತ್ತು ಭಯ ಉಂಟುಮಾಡಿದೆ.

ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ (Instagram) ನ @Snakemasterexotis ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ವಿಡಿಯೋ ದಲ್ಲಿ ಹುಡುಗಿಯು ಹಲವಾರು ದೈತ್ಯ ಹಾವುಗಳನ್ನು ಪಕ್ಕದಲ್ಲಿ ಇರಿಸಿಕೊಂಡು ಮಲಗಿರುವುದನ್ನು (Pythons and girl Video) ಕಾಣಬಹುದು. ಕೆಲವು ಹಾವುಗಳು ಹುಡುಗಿಯ ಮೈಯನ್ನೇ ಸುತ್ತಿಕೊಂಡಿವೆ. ಈ ವಿಡಿಯೋವನ್ನು ನೋಡುವಾಗ ಭಯ, ಎನಿಸಿದರು ಈ ಹುಡುಗಿ ಪ್ರತೀ ದಿನ ಮಲಗುವುದೇ ಈ ರೀತಿಯಂತೆ.

ಇದನ್ನೂ ಓದಿ: ಮೊಬೈಲ್ ಬಳಕೆದಾರರೇ ಗಮನಿಸಿ- ಸಿಮ್ ಕಾರ್ಡ್‌ ಗೆ ಬಂತು ಹೊಸ ನಿಯಮ !! ಕೂಡಲೇ ಅಲರ್ಟ್ ಆಗಿ ಇದೊಂದು ಕೆಲಸ ಮಾಡಿ, ಇಲ್ಲಾಂದ್ರೆ ಬೀಳುತ್ತೇ 10 ಲಕ್ಷ ದಂಡ

Leave A Reply