ಮೊಬೈಲ್ ಬಳಕೆದಾರರೇ ಗಮನಿಸಿ- ಸಿಮ್ ಕಾರ್ಡ್‌ ಗೆ ಬಂತು ಹೊಸ ನಿಯಮ !! ಕೂಡಲೇ ಅಲರ್ಟ್ ಆಗಿ ಇದೊಂದು ಕೆಲಸ ಮಾಡಿ, ಇಲ್ಲಾಂದ್ರೆ ಬೀಳುತ್ತೇ 10 ಲಕ್ಷ ದಂಡ

Sim card new rule if this work not completed before October 1st you will be fined

SIM CARD New Rule: ಸರ್ಕಾರವು ಸಿಮ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (SIM CARD New Rule) ಜಾರಿಗೆ ತಂದಿದೆ. ಇತ್ತೀಚಿಗೆ ಅನೇಕ ಜನರು ಒಂದೇ ಸಮಯದಲ್ಲಿ ಅನೇಕ ಮೊಬೈಲ್‌ಗಳನ್ನು ಬಳಸುತ್ತಾರೆ. ಬಹುತೇಕರು ಡ್ಯುಯಲ್ ಅಥವಾ ಟ್ರಿಪಲ್ ಸಿಮ್ ಅನ್ನು ಬಳಸಬಹುದು. ಇದನ್ನು ಅನೈತಿಕ ಚಟುವಟಿಕೆ, ಅಥವಾ ದುರ್ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ದೇಶಾದ್ಯಂತ ಸಿಮ್ ಕಾರ್ಡ್‌ಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ (DoT) ಮಹತ್ವದ ಸುತ್ತೋಲೆ ಹೊರಡಿಸಿದೆ.

ಹೌದು, ಮುಖ್ಯವಾಗಿ ಗ್ರಾಹಕರ ಸುರಕ್ಷಿತ ಮತ್ತು ವಿಶ್ವಾಸಾರ್ಹತೆ ನಿಟ್ಟಿನಲ್ಲಿ ಹೊಸ ಸಿಮ್ ಕಾರ್ಡ್ ಅನ್ನು ಖರೀದಿಸುವ ಮತ್ತು ಸಕ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಾದ ನಿಯಮವನ್ನು ಪರಿಚಯಿಸಿದೆ.

ಸದ್ಯ ದೂರಸಂಪರ್ಕ ಇಲಾಖೆ (DoT) ಸಿಮ್ ಕಾರ್ಡ್‌ಗಳ ಬಳಕೆಯನ್ನು ನಿಯಂತ್ರಿಸಲು ಸಿಮ್ ಕಾರ್ಡ್‌ಗಳ ಖರೀದಿಗೆ ಸಂಬಂಧಿಸಿದಂತೆ ಎರಡು ಸುತ್ತೋಲೆಗಳನ್ನು ಹೊರಡಿಸಿದೆ.
ಈ ಹೊಸ ನಿಯಮಗಳ ಉದ್ದೇಶವು ಸಿಮ್ ಕಾರ್ಡ್‌ಗಳನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುವುದರ ಜೊತೆಗೆ ಮೋಸಗಾರರು ಫೋನ್ ಪ್ರವೇಶಿಸುವುದನ್ನು ತಡೆಯುವುದಾಗಿದೆ.

ದೂರಸಂಪರ್ಕ ಇಲಾಖೆ (DoT) ಸಿಮ್ ಕಾರ್ಡ್‌ಗಳ ನಿಯಮಾನುಸಾರ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಅಂಗಡಿಗಳು, ಅಂಗಡಿಯಲ್ಲಿ ಕೆಲಸ ಮಾಡುವ ಜನರು ಅಥವಾ ಸಿಮ್ ಕಾರ್ಡ್ ವಿತರಿಸುವವರು ಸಿಮ್ ಕಾರ್ಡ್ ಖರೀದಿಸುವ ವ್ಯಕ್ತಿಯ ದಾಖಲೆ ಮತ್ತು ಹಿನ್ನೆಲೆಯನ್ನು ವಿಸ್ತರವಾಗಿ ಪರಿಶೀಲಿಸಬೇಕು. ಒಂದೊಮ್ಮೆ ಈ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೆ ಅಂತಹ ವಿತರಕರಿಗೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ನಿಗಾ ಇಡಬೇಕಾಗಿರುವುದು ಅವಶ್ಯಕವಾಗಿದೆ. ಮಾತ್ರವಲ್ಲ, ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಅಂಗಡಿಗಳು ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿವೆಯೇ ಎಂಬುದನ್ನೂ ಕಂಪನಿಗಳು ದೃಢಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ದೂರಸಂಪರ್ಕ ಇಲಾಖೆ (DoT) ಪ್ರಕಾರ, ವಂಚನೆಯ ಸಿಮ್ ಕಾರ್ಡ್‌ಗಳ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಈ ಹೊಸ ನಿಯಮಗಳನ್ನು ಅಕ್ಟೋಬರ್ 01, 2023ರಿಂದ ಜಾರಿಗೆ ಬರಲಿವೆ. ಇದಕ್ಕಾಗಿ, ಸೆಪ್ಟೆಂಬರ್ 30, 2023ರ ಮೊದಲು ಸಿಮ್ ಕಾರ್ಡ್ ಕಂಪನಿಗಳು ತಮ್ಮ ಎಲ್ಲಾ ಮಾರಾಟ ಕೇಂದ್ರಗಳನ್ನು (POS) ನೊಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಒಂದುವೇಳೆ ಅಕ್ಟೋಬರ್ 01, 2023ರ ಬಳಿಕ ನಿಮ್ಮ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್ ಕಳೆದು ಹೋದರೆ, ಇಲ್ಲವೇ ನಿಮ್ಮ ಸಿಮ್ ಕಾರ್ಡ್ ಹಾನಿಗೊಳಗಾಗಿದ್ದರೆ ನೀವು ಹೊಸ ಸಿಮ್ ಕಾರ್ಡ್ ಪಡೆಯಲು ವಿವರವಾದ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಈ ರಾಜ್ಯಗಳಲ್ಲಿ ಪೊಲೀಸ್ ಪರಿಶೀಲನೆ ನಂತರವೇ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ. ಮುಖ್ಯವಾಗಿ ಅಸ್ಸಾಂ, ಕಾಶ್ಮೀರ ಮತ್ತು ಈಶಾನ್ಯದಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ಟೆಲಿಕಾಂ ಆಪರೇಟರ್‌ಗಳು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳು ಪೊಲೀಸ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸ್ಮಾರ್ಟ್ ಫೋನ್ ಬಳಕೆದಾರರಿಗೆ ಬಿಗ್ ಶಾಕ್ ನೀಡಿದ `ಗೂಗಲ್’- ಜಿಮೇಲ್, ಯೂಟ್ಯೂಬ್ ಖಾತೆಗಳು ಡಿಲೀಟ್ !! ಕಾರಣವೇನು?

Leave A Reply

Your email address will not be published.