Rishab Shetty: ಮುಂದಿನ ಜನ್ಮದಲ್ಲಿ ಏನಾಗಬೇಕೆಂಬ ಮಹದಾಸೆ ವ್ಯಕ್ತಪಡಿಸಿದ ಕಾಂತಾರ ನಟ ನಿರ್ದೇಶಕ ರಿಷಬ್ ಶೆಟ್ಟಿ!!!

Sandalwood news Udupi news Actor Rishabh Shetty has revealed his wish for the next birth

Share the Article

Rishab Shetty : ಕಾಂತಾರ ನಟ, ಕರಾವಳಿಯ ನಿರ್ದೇಶ, ದೇವ ವಿದೇಶವೇ ಹೆಮ್ಮೆ ಪಡುವಂತೆ ಮಾಡಿದ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಪಾಣರ ನಲಿಕೆ ಸಮುದಾಯದ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಲ್ಲಿ ತಾವು ಮುಂದಿನ ಜನ್ಮದಲ್ಲಿ ಏನಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮ್ಮೇಳನದಲ್ಲಿ ರಿಷಬ್‌ ಮೊದಲ ಬಾರಿಗೆ ಭಾಗಿಯಾಗಿದ್ದು, ಪಾಣಾರ ನಲಿಕೆ ಸಮುದಾಯದ ಹಿರಿಯ ನರ್ತಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅವರು ತಾವು ಮುಂದಿನ ಜನ್ಮದಲ್ಲಿ ಏನಾಗಬೇಕು ಎಂಬ ಆಸೆಯನ್ನು ಮುಂದಿಟ್ಟಿದ್ದಾರೆ. ಮುಂದಿನ ಜನ್ಮವೊಂದಿದ್ದರೆ ನಾನು ಪಾಣರ ಸಮುದಾಯದಲ್ಲಿ ಹುಟ್ಟು ಆಸೆ ಇದೆ, ಪಾಣಾರನಾಗಿ ದೈವದ ಚಾಕರಿ ಮಾಡುವಂತಾಗಲಿ, ಗುಳಿಗ-ಅಣ್ಣಪ್ಪ ಸ್ವಾಮಿಯ ಸೇವೆ ಮಾಡುವಂತಾಗಲಿ ಎಂಬ ಆಸೆ ಇದೆ ಎಂದು ರಿಷಬ್‌ ಶೆಟ್ಟಿ (Rishab Shetty) ಹೇಳಿದ್ದಾರೆ.

ಅಷ್ಟು ಮಾತ್ರವಲ್ಲದೇ, ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಅಮೆರಿಕಾದ ಮ್ಯೂಸಿಯಂನಲ್ಲಿ ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ನೆಲದ ದೈವ ದೇವರ ಶಕ್ತಿ ಎಂದಿದ್ದಾರೆ. ಪಾಣರ ಸಮುದಾಯದ ಮಕ್ಕಳಲ್ಲಿ ಶಿಕ್ಷಣ ಜೊತೆ ಆಚಾರ ವಿಚಾರ ಮುಂದುವರಿಯಲಿ. ಸಮುದಾಯಕ್ಕೆ ಸರಕಾರಕ್ಕೆ ಮನವರಿಕೆ ಮಾಡುತ್ತೇನೆ ಎಂದು ಉಡುಪಿ ರಾಜಾಂಗಣದಲ್ಲಿ ನಟ ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಆತ್ಮೀಯರಿಂದ ದೊರೆಯಲಿದೆ ಶುಭ ಸುದ್ದಿ!!! ಸಾಲ ಬೇಕೆಂದವರಿಗೆ ತತ್ಕ್ಷಣವೇ ಲಭ್ಯ ಸಾಧ್ಯ!!!

Leave A Reply