Madhya Pradesh: ಗಂಡನ ಜೊತೆ ರಾತ್ರಿಯಿಡೀ ಆತನತ್ರ ಮಾತನಾಡುತ್ತಾ ಕುಳಿತಿದ್ದ ಹೆಂಡತಿ! ಬೆಳಗ್ಗೆದ್ದಾಗ ತಿಳಿಯಿತು ದುರಂತ ಸತ್ಯ!!!

Share the Article

Madhya Pradesh: ಪತಿ ಸಾವನ್ನಪ್ಪಿದ್ದಾನೆ (death) ಎಂಬುದು ತಿಳಿಯದೆ ಮೃತ ಪತಿಯೊಂದಿಗೆ ಪತ್ನಿಯೊಬ್ಬಳು ರಾತ್ರಿಯಿಡೀ ಮಾತನಾಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಸಾಂಸ್ಕೃತಿಕ ನಗರಿ ಜಬಲ್‌ಪುರದಲ್ಲಿ ನಡೆದಿದೆ.

ಮಾಯಾ ಠಾಕೂರ್​ ಮತ್ತು ಆಕೆಯ ಪತಿ ಶಂಕರ್​ ಹಲವು ವರ್ಷಗಳಿಂದ ಫುಟ್‌ಪಾತ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಮಹಿಳೆಯು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್​​ ವಿದ್ಯಾರ್ಥಿನಿಯರಿಗೆ ಅಡುಗೆ ಮಾಡಿಕೊಟ್ಟು ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಳು.

ಶುಕ್ರವಾರ ರಾತ್ರಿ ಮಹಿಳೆಯ ಪತಿಯು ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ. ಆದರೆ, ಮಹಿಳೆಗೆ ಪತಿ ಸತ್ತಿದ್ದಾನೆ ಎಂಬುದೇ ತಿಳಿದಿರಲಿಲ್ಲ. ಹಾಗಾಗಿ ಮಹಿಳೆ ರಾತ್ರಿಯಿಡೀ ತನ್ನ ಸತ್ತ ಪತಿಯೊಂದಿಗೆ ಕುಳಿತು ಮಾತನಾಡುತ್ತಿದ್ದಳು. ಮುಂಜಾನೆಯ ವೇಳೆ ತಾನು ರಾತ್ರಿಯಿಡೀ ಮಾತನಾಡಿದರೂ ಪತಿ ಪ್ರತಿಕ್ರಿಯಿಸದಿದ್ದನ್ನು ಕಂಡು ಆಕೆ ಆತನ ಬಳಿ ತೆರಳಿದ್ದಾಳೆ. ಪತಿಯನ್ನು ನೋಡಿದಾಕೆಗೆ ಆಶ್ಚರ್ಯ ಕಾದಿತ್ತು. ಆತ ಸಾವನ್ನಪ್ಪಿದ್ದ. ಮಹಿಳೆ ದಿಕ್ಕು ತೋಚದೆ ಪತಿಯ ಪಕ್ಕದಲ್ಲಿಯೇ ಕುಳಿತುಬಿಟ್ಟಳು.

ಸ್ಥಳೀಯರು ಈ ಮಾಹಿತಿಯನ್ನು ಪೊಲೀಸರಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಪತಿಯ ಅಂತ್ಯಕ್ರಿಯೆಗೂ ಮಹಿಳೆ ಬಳಿ ಹಣವಿರದ ಕಾರಣ ಸಮಾಜ ಸೇವಕರು ಪತಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

Leave A Reply