Home Entertainment Kichcha Sudeep birthday: ಆರು ವರ್ಷಗಳ ನಂತರ ಕಿಚ್ಚ ಸುದೀಪ್‌ರಿಂದ ದರ್ಶನ್‌ ಗುಣಗಾನ! ಹುಟ್ಟು ಹಬ್ಬದ...

Kichcha Sudeep birthday: ಆರು ವರ್ಷಗಳ ನಂತರ ಕಿಚ್ಚ ಸುದೀಪ್‌ರಿಂದ ದರ್ಶನ್‌ ಗುಣಗಾನ! ಹುಟ್ಟು ಹಬ್ಬದ ಸಂದರ್ಭದಲ್ಲಿ ಸಹನಟನ ಕುರಿತು ಏನಂದ್ರು ಸುದೀಪ್‌?

Hindu neighbor gifts plot of land

Hindu neighbour gifts land to Muslim journalist

ಇಂದು ತಮ್ಮ ಹುಟ್ಟಿದ ದಿನ ಆಚರಿಸಿಕೊಳ್ಳುತ್ತಿರುವ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್‌ ಅವರಿಗೆ ಶುಭಾಶಯ ಕೋರಲು ಜನರು ಸಾಗರೋಪಾದಿಯಲ್ಲಿ ಬಂದು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. ಕಿಚ್ಚ ಸುದೀಪ್‌ ಅವರ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ಮಾಧ್ಯಮವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದು, ತನ್ನ ಸಹ ನಟ ದರ್ಶನ್‌ ಕುರಿತು ಕೂಡಾ ಮಾತಾಡಿದ್ದಾರೆ. ಬನ್ನಿ ಅವರೇನು ಮಾತನಾಡಿದ್ದಾರೆ ತಿಳಿಯೋಣ.

ಇತ್ತೀಚೆಗೆ ಸುದೀಪ್‌ ಮತ್ತು ದರ್ಶನ್‌ ಅವರು ಸುಮಲತಾ ಅವರ ಹುಟ್ಟಿದ ಹಬ್ಬದಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಅವರು ತಮ್ಮ ಹುಟ್ಟಿದ ಹಬ್ಬದಂದು ರಿಯಾಕ್ಟ್‌ ಮಾಡಿದ್ದಾರೆ. ಹಾಗೂ ಬಹಳ ಕೂಲಾಗಿ, ಸಂತೋಷದಿಂದಲೇ ಕೆಲವೊಂದು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ದರ್ಶನ್‌ ಒಳ್ಳೆಯ ಕಲಾವಿದ. ಹಾಗೆನೇ ದರ್ಶನ್‌ ಹಾಗೂ ಮಾಧ್ಯಮದ ನಡುವೆ ಇದ್ದ ಕೆಲವೊಂದು ಭಿನ್ನಾಭಿಪ್ರಾಯ ದೂರವಾಗಿದ್ದು, ಇದು ಒಳ್ಳೆಯ ವಿಷಯ. ನನಗೆ ಅವರ ಮೇಲೆ ಕೋಪ ಇಲ್ಲ. ನಾವಿಬ್ಬರು ಒಂದಾಗೋದಿಕ್ಕೆ ಸ್ವಲ್ಪ ಸಮಯ ಬೇಕು ಎಂಬ ಮಾತನ್ನು ಕಿಚ್ಚ ಸುದೀಪ್‌ ಹೇಳಿದ್ದಾರೆ.

ದರ್ಶನ್‌ ಮೇಲೆ ನನಗೆ ಕೋಪ ಇಲ್ಲ. ಕೆಲವೊಂದು ಪ್ರಶ್ನೆ ದರ್ಶನ್‌ ಗೂ ಇದೆ, ಹಾಗೆ ನನಗೂ ಇದೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದರೆ ಒಪ್ತೀನಿ ಎಂದು ಸುದೀಪ್‌ ಹೇಳಿದ್ದಾರೆ. ನಾವಿಬ್ಬರು ಮೆಚ್ಯೂರ್ಡ್‌ ಪೀಪಲ್‌, ಇಬ್ಬರು ಬೇರೆ ಬೇರೆ ಮೈಂಡ್‌ಸೆಟ್‌ ಹೊಂದಿದ್ದೇವೆ. ಮತ್ತೆ ಒಂದಾದರೆ ಖುಷಿಯ ವಿಷಯ ಎಂದು ಹೇಳಿದ್ದಾರೆ.

ಅಂತು ಆರು ವರ್ಷಗಳ ಬಳಿಕ ತಮ್ಮ ಹುಟ್ಟಿದ ಹಬ್ಬದಂದು ತಮ್ಮ ಸಹ ನಟ ದರ್ಶನ್‌ ಕುರಿತು ಬಹಳ ಖುಷಿಯಿಂದ ಮಾತನಾಡಿದ್ದಾರೆ ಕಿಚ್ಚ ಸುದೀಪ್‌. ಇಬ್ಬರು ಶ್ರೇಷ್ಠ ಕಲಾವಿದರ ಮಧ್ಯೆ ಇರುವ ಕಂದಕ ದೂರವಾಗಿ ಮತ್ತೆ ಒಂದಾಗುವ ಕಾಲ ಬರಲಿ, ಒಂದೇ ಸಿನಿಮಾದಲ್ಲಿ ದಿಗ್ಗಜರು ನಟಿಸಲಿ ಎಂದು ನಮ್ಮ ಹಾರೈಕೆ.