Free tailoring machine scheme: ನೀವು ಸ್ವಾವಲಂಬಿಯಾಗಬೇಕೇ? ಇಲ್ಲಿದೆ ನಿಮಗೊಂದು ಸುವರ್ಣವಕಾಶ,ಉಚಿತ ಹೊಲಿಗೆಯಂತ್ರ ವಿತರಣೆ! ಅರ್ಜಿ ಸಲ್ಲಿಸಿ!!!

Free tailoring machine scheme

Free tailoring machine scheme: ಸ್ವಂತ ಉದ್ಯೋಗ ಮಾಡಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ನೀವು ಕೂಡ ಸ್ವಾವಲಂಬಿಯಾಗಬೇಕಾದರೆ, ಇಲ್ಲಿದೆ ನಿಮಗೊಂದು ಸುವರ್ಣವಕಾಶ. ಹೌದು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮತ್ತು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ (free tailoring machine scheme) ಮಾಡಲು ಅರ್ಜಿ ಅಹ್ವಾನಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ!!.

2023-24ನೇ ಸಾಲಿಗೆ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಯೋಜನೆ ಮತ್ತು ಜಿಲ್ಲಾ ಉದ್ಯಮ ಕೇಂದ್ರ ಬಂಡವಾಳ ಹೂಡಿಕೆ ಯೋಜನೆಯಡಿ ಮರಗೆಲಸ, ಗಾರೆಕೆಲಸ, ಕ್ಷೌರಿಕ, ದೋಬಿ, ಕಮ್ಮಾರಿಕೆ ಮತ್ತು ಹೊಲಿಗೆಯಂತ್ರ ಕಸುಬಿನ ಸುಧಾರಿತ ಉಪಕರಣ ಹಾಗೂ ಸಾಲ ಸಹಾಯಧನ ಪಡೆಯಲು ಆಸಕ್ತಿಯುಳ್ಳ ಗ್ರಾಮಾಂತರ ಪ್ರದೇಶದ ವೃತ್ತಿನಿರತ ಕಸುಬುದಾರರು
ಅರ್ಜಿ ಸಲ್ಲಿಸಬಹುದು.

ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತಉಪಕರಣ ಸರಬರಾಜು ಯೋಜನೆಗೆ ದಾಖಲಾತಿಗಳು :-

• ಮರಗೆಲಸ, ದೋಬಿ, ಗಾರೆಕೆಲಸ, ಕಮಾರಿಕೆ, ಕ್ಷೌರಿಕ ಮತ್ತು ಹೊಲಿಗೆಯಂತ್ರ ಕಸುಬಿನ ಕುಶಲಕರ್ಮಿಯಾಗಿದ್ದರೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ ಬೇಕು.
• ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
• ಜಾತಿ ಪ್ರಮಾಣ ಪತ್ರ.
• ಆದಾಯ ದೃಢೀಕರಣ ಪತ್ರ (in PDF file) (SC, ST)

ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಗೆ ದಾಖಲಾತಿಗಳು :-
• ಆದಾಯ ದೃಢೀಕರಣ ಪತ್ರ,
• ಬ್ಯಾಂಕ್ ಪಾಸ್ ಪುಸ್ತಕ
• ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
• ಜಾತಿ ಪ್ರಮಾಣ ಪತ್ರ.
• ನಡೆಸುತ್ತಿರುವ ಕಸುಬಿನ ಬಗ್ಗೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ) ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ ಬೇಕು.

ಪ್ರಮುಖ ದಿನಾಂಕಗಳು ಹಾಗೂ ಅರ್ಜಿ ಸಲ್ಲಿಕೆ:-

• ಮೈಸೂರು ಜಿಲ್ಲೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ –
04 ಸೆಪ್ಟೆಂಬರ್ 2023, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
• ಮಂಡ್ಯ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10 ಸೆಪ್ಟೆಂಬರ್ 2023, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
• ಚಿಕ್ಕಮಗಳೂರು : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 15 ಸೆಪ್ಟೆಂಬರ್ 2023, ಅರ್ಜಿಗೆ ಇಲ್ಲಿ ಕ್ಲಿಕ್ ಮಾಡಿ
ತುಮಕೂರು : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಆಗಸ್ಟ್ 2023, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

 

Leave A Reply

Your email address will not be published.