Interesting News: ನೀವ್ ಊರ್ ಬಿಟ್ರಿ ಅಂದ್ರೆ ನಿಮ್ ಆಯಸ್ಸು 12 ವರ್ಷ ಜಾಸ್ತಿ ಆಯ್ತು ಅಂತಲೇ ಅರ್ಥ, ಏನಿದೆ ಅಲ್ಲಿ ಅಂತದ್ದು?

Intresting News: ಆಯಸ್ಸು (Age) ಮೊದಲೇ ನಿರ್ಧರಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇತ್ತೀಚೆಗಂತೂ ಸಾವಿನ ಸಂಖ್ಯೆ ಬಾರಿ ಹೆಚ್ಚಾಗಿದೆ. ಅದರಲ್ಲೂ ಹೃದಯಾಘಾತಕ್ಕೆ ತುತ್ತಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ನೀವು ಈ ಊರನ್ನ ಬಿಟ್ರೆ, ಅಲ್ಲಿಂದ ಹೊರಟು ಹೋದರೆ ನಿಮ್ಮ ಆಯಸ್ಸು 12 ವರ್ಷ ಜಾಸ್ತಿ ಆಯ್ತು ಅಂತಲೇ ಅರ್ಥ. ಏನಪ್ಪಾ ಇದು ಊರನ್ನು ಬಿಡುವುದರಿಂದ ಆಯಸ್ಸು ಕೂಡ ಹೆಚ್ಚಾಗುತ್ತಾ ? ಹೀಗೂ ಇದ್ಯಾ? ಇಷ್ಟಕ್ಕೂ ಆ ಊರು ಯಾವುದು? ಅಲ್ಲಿ ಅಂತದೇನಿದೆ? ಎಂಬಿತ್ಯಾದಿ (Intresting News) ಪ್ರಶ್ನೆಗೆ ಇಲ್ಲಿದೆ ನೋಡಿ ಮಾಹಿತಿ!!!.

 

ರಾಷ್ಟ್ರ ರಾಜಧಾನಿ ದೆಹಲಿ (Delhi) ವಿಶ್ವದಲ್ಲೇ ಅತ್ಯಂತ ಮಾಲಿನ್ಯ (pollution) ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೆಹಲಿಯ ವಾಯುವಿನ ಗುಣಮಟ್ಟ ಮತ್ತಷ್ಟು ಕುಸಿದಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನವಿರುವ ನಗರ ಎನಿಸಿದೆ. ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ (ಇಪಿಐಸಿ) ಬಿಡುಗಡೆ ಮಾಡಿರುವ ‘ವಾಯು ಗುಣಮಟ್ಟ ಜೀವನ ಸೂಚ್ಯಂಕ’ (ಎಕ್ಯುಎಲ್‌ಐ) ಕುರಿತ ವರದಿಯಲ್ಲಿ ಹಲವು ಅಂಶಗಳಿವೆ.

 

ವಾರ್ಷಿಕ ಸರಾಸರಿ ಪಾರ್ಟಿಕ್ಕುಲೇಟ್ ಮಾಲಿನ್ಯ ಮಟ್ಟ ಒಂದು ಘನ ಮೀಟರ್‌ಗೆ 5 ಮೈಕ್ರೋ ಗ್ರಾಮ್‌ಗಳಷ್ಟಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) ಹೇಳುತ್ತದೆ. ಆದರೆ, ಭಾರತದ 130 ಕೋಟಿ ಜನರು ಈ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸೂಚ್ಯಂಕ ಹೇಳುತ್ತದೆ. ವಿಶ್ವಸಂಸ್ಥೆ ತಿಳಿಸಿರುವ ಮಿತಿ ಮೀರಿದರೆ ಸೂಕ್ಷ್ಮವಾದ ಕಣಗಳ ಮಾಲಿನ್ಯವು ಜನರ ಸರಾಸರಿ ಜೀವಿತಾವಧಿಯನ್ನು (5.3) ವರ್ಷಗಳಷ್ಟು ಕಡಿಮೆ ಮಾಡಲಿದೆ ಎಂದು ಅಧ್ಯಯನ ತಿಳಿಸಿದೆ.

 

ದೆಹಲಿಯಲ್ಲಿ 1.80 ಕೋಟಿ ಜನರು ವಾಸಿಸುತ್ತಿದ್ದಾರೆ. ಮಾಲಿನ್ಯ ಮಟ್ಟವು ಇದೇ ರೀತಿ ಮುಂದುವರಿದರೆ ಅಲ್ಲಿನ ನಿವಾಸಿಗಳು ತಮ್ಮ ಜೀವಿತಾವಧಿಯಲ್ಲಿ 11.9 ವರ್ಷಗಳನ್ನು ಕಳೆದುಕೊಳ್ಳಲಿದ್ದಾರೆ. ಸದ್ಯ ಇರುವ ಮಾಲಿನ್ಯ ಮಟ್ಟವು ಮುಂದುವರಿದರೆ ಹಾಗೂ ರಾಷ್ಟ್ರೀಯ ಮಾರ್ಗಸೂಚಿಗೆ ಹೋಲಿಸಿದರೆ, ತಮ್ಮ ಜೀವಿತಾವಧಿಯ 8.5 ವರ್ಷಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಕ್ಯುಎಲ್‌ಐ ಹೇಳಿದೆ. ಪಂಜಾಬ ಪಠಾಣ್‌ಟ್ ಈ ವಲಯದ ಕನಿಷ್ಠ ಮಾಲಿನ್ಯದ ಜಿಲ್ಲೆಗಳು. ಇಲ್ಲಿ ಸೂಕ್ಷ್ಮವಾದ ಕಣಗಳ ಮಾಲಿನ್ಯವು ವಿಶ್ವ ಆರೋಗ್ಯ ಸಂಸ್ಥೆಯ ಮಿತಿಗಿಂತ 7 ಪಟ್ಟು ಹೆಚ್ಚಿದೆ. ಇದೇ ಸ್ಥಿತಿ ಮುಂದುವರಿದರೆ, ಇಲ್ಲಿನ ಜನರು ತಮ್ಮ ಜೀವಿತಾವಧಿಯ 3.1 ವರ್ಷವನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ. ಹಾಗಾಗಿ ದೆಹಲಿಯಿಂದ ಹೊರಟರೆ ನಿಮ್ಮ ಆಯಸ್ಸು ಕಮ್ಮಿಯಾಗೊಲ್ಲ, ಹೆಚ್ಚಾದಂತೆ ಲೆಕ್ಕಾ!!!.

ಇದನ್ನೂ ಓದಿ : ದ್ವಿಚಕ್ರ ವಾಹನ ಸವಾರರೇ ಇತ್ತ ಗಮನಿಸಿ ಹೆಲ್ಮೆಟ್ ಧರಿಸದಿದ್ದವರ ಮೇಲೆ ಕ್ಯಾಮರಾ ಕಣ್ಣು!!

Leave A Reply

Your email address will not be published.