Government New Rule: ವಧು ಸಣ್ಣ ವಯಸ್ಸಿನವಳಾಗಿದ್ದರೆ ದಂಪತಿಗೆ ಸಿಗುತ್ತೆ ನಗದು ಪುರಸ್ಕಾರ ; ಸರ್ಕಾರದ ಘೋಷಣೆ !!!

China: ಚೀನಾದಲ್ಲಿ (China) ವಧು ಕಿರಿಯ ವಯಸ್ಸಿನವಳಾಗಿದ್ದರೆ ದಂಪತಿಗೆ ನಗದು ಪುರಸ್ಕಾರ ಸಿಗುತ್ತದೆ. ಹೌದು, ಯುವಜನರನ್ನು ಮದುವೆಯಾಗಲು (Marriage) ಪ್ರೋತ್ಸಾಹಿಸುವ ಕ್ರಮವಾಗಿ ವಧು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ದಂಪತಿಗೆ 137 ಡಾಲರ್ ನಗದು ಪುರಸ್ಕಾರ ನೀಡುವ ಯೋಜನೆಯನ್ನು ಚಾಂಗ್ಷಾನ್ ನಗರ ಘೋಷಿಸಿದೆ.

ಚೀನಾದ ಕಾನೂನುಬದ್ಧ ವಿವಾಹದ ವಯಸ್ಸಿನ ಮಿತಿಯು ಪುರುಷರಿಗೆ 22 ವರ್ಷ ಮತ್ತು ಮಹಿಳೆಯರಿಗೆ (women’s) 20 ವರ್ಷವಾಗಿದೆ. ಆದರೆ ಮದುವೆಯಾಗುವ ಜೋಡಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರದ ಕಾರ್ಯನೀತಿಯಿಂದಾಗಿ ಒಂಟಿ ಮಹಿಳೆಯರಿಗೆ ಮಗುವನ್ನು ಹೊಂದಲು ಕಷ್ಟಕರವಾಗಿದೆ. 2022ರಲ್ಲಿ ಚೀನಾದಲ್ಲಿ ಮದುವೆಯ ಪ್ರಮಾಣ 6.8 ದಶಲಕ್ಷಕ್ಕೆ ಕುಸಿದಿದ್ದು ಇದು ದಾಖಲೆಯ ಕನಿಷ್ಟ ಮಟ್ಟವಾಗಿದೆ.

ಕಾರಣ, ಹಲವು ಮಹಿಳೆಯರು ಶಿಶುಪಾಲನಾ ವೆಚ್ಚ ಹೆಚ್ಚಿರುವುದು ಹಾಗೂ ವೃತ್ತಿಜೀವನಕ್ಕೆ ತೊಡಕಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ. ಜನರ ವಿಶ್ವಾಸ ಕಡಿಮೆಯಾಗಿರುವುದು. ಚೀನಾದ ಅರ್ಥವ್ಯವಸ್ಥೆಯ ಸ್ಥಿರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳವೂ ಚೀನಾದ ಯುವಜನತೆ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಹಿಂಜರಿಯುತ್ತಿರುವ ಪ್ರಮುಖ ಅಂಶವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆ ಚೀನಾ ವಧು (bride) ಕಿರಿಯ ವಯಸ್ಸಿನವಳಾಗಿದ್ದರೆ ದಂಪತಿಗೆ ನಗದು ಪುರಸ್ಕಾರ ಘೋಷಿಸಿದೆ. ಈ ನಗದು ಯೋಜನೆಯ ಉದ್ದೇಶವೇನೆಂದರೆ, ಸೂಕ್ತ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು ಮಗುವನ್ನು ಹೆರುವುದನ್ನು ಉತ್ತೇಜಿಸುವುದಾಗಿದೆ‌. ಅಲ್ಲದೆ, ಮಕ್ಕಳನ್ನು ಹೊಂದಿರುವ ದಂಪತಿಗೆ ಶಿಶುಪಾಲನೆ ಮತ್ತು ಶಿಕ್ಷಣ (education) ಸಬ್ಸಿಡಿಯನ್ನು ಈ ಯೋಜನೆ ಹೊಂದಿದೆ.

Leave A Reply

Your email address will not be published.