Karwar: ಕರಾವಳಿಯಲ್ಲಿ ಬಲೆಗೆ ಬಿದ್ದ ದೊಡ್ಡ ಗಾತ್ರದ ಬಂಗುಡೆ! ಎಷ್ಟು ಕೆಜಿ ಗೊತ್ತೇ!?
Mangaluru news bangude fish the biggest fish on the Karwar cost
Karwar: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪದ ಅತೀ ಉದ್ದದ ಹಾಗೂ ಹೆಚ್ಚು ತೂಕದ ಬಂಗಡೆ ಮೀನು(Bangude Fish)ಮೀನುಗಾರರ ಬಲೆಗೆ ಬಿದ್ದಿದ್ದು, ನೋಡುಗರಿಗೆ ಅಚ್ಚರಿ ಮೂಡಿಸಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ(Karwar) ಬೈತಖೋಲ ಬಂದರಿನಲ್ಲಿ ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ಬಂಗುಡೆ ಮೀನು ಬಲೆಗೆ ಬಿದ್ದು, ನೋಡುಗರಿಗೆ ಅಚ್ಚರಿ ಮೂಡಿಸಿದೆ.ಬೈತಕೋಲದ ಆನಂದ ರಾಮ ಹರಿಕಂತ್ರ ಅವರು ಆಳಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭ ಅವರ ಬಲೆಗೆ ಈ ಮೀನು ಬಿದ್ದಿದೆ ಎನ್ನಲಾಗಿದೆ. ಈ ಬಂಗುಡೆ ಮೀನು ಬರೋಬ್ಬರಿ 1.23 ಕೆಜಿ ತೂಕವಿದ್ದು, 19 ಇಂಚು ಉದ್ದ ಮತ್ತು 4.5 ಇಂಚು ಅಗಲವಿದೆ.
ಕಾರವಾರದ ಆಳ ಸಮುದ್ರದಲ್ಲಿ (Beach)ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ ಪಾತಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗಡೆ ಮೀನು ದೊರೆತಿದ್ದು, ಇದನ್ನು ಕಂಡು ಮೀನುಗಾರರೆಲ್ಲ ಅಚ್ಚರಿಗೆ ಒಳಗಾಗಿದ್ದಾರೆ. ಆನಂದು ರಾಮಾ ಹರಿಕಂತ್ರ ಅವರಿಂದ ಈ ಬಂಗಡೆ ಮೀನನ್ನು ಪಡೆದುಕೊಂಡ ನವೀನ ಹರಿಕಂತ್ರ ಎನ್ನುವ ವ್ಯಕ್ತಿ ಈ ಬಂಗುಡೆ ಮೀನನ್ನು ಮೀನುಗಾರರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ. ಈ ಬಂಗುಡೆ ಮೀನನ್ನು ನವೀನ ಹರಿಕಂತ್ರ ಎನ್ನುವವರು ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ನೀಡಿದ್ದು, ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.
ಈವರೆಗೆ ಲಭ್ಯವಾಗದಂತಹ ಬೃಹತ್ ಗಾತ್ರದ ಬಂಗುಡೆ ಮೀನು ಕಾರವಾರದ ಅರಬ್ಬಿ ಸಮುದ್ರದಲ್ಲಿ ದೊರೆತದ್ದು ನೋಡುಗರಿಗೆ ಅಚ್ಚರಿ ವಿಸ್ಮಯ ಮೂಡಿಸಿದೆ. ಇಲ್ಲಿಯವರೆಗೆ ಈ ರೀತಿ ಬೃಹತ್ ಬಂಗುಡೆ ಮೀನು ಕರಾವಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಇಲ್ಲವೆಂದು ಕರ್ನಾಟಕ ವಿಶ್ವ ವಿದ್ಯಾನಿಲಯದ ಕಡಲ ವಿಜ್ಞಾನ ವಿಭಾಗ ಮಾಹಿತಿ ನೀಡಿದೆ.ಸದ್ಯ, ದೊಡ್ಡ ಗಾತ್ರದ ಬಂಗುಡೆ ಮೀನನ್ನು ಸಾರ್ವಜನಿಕರ ವೀಕ್ಷಣೆಯ ಸಲುವಾಗಿ ಕಾರವಾರ ಕಡಲವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗುವ ಕುರಿತು ವಿನಾಯಕ ರವರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜನಸಾಮಾನ್ಯರೇ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಕಿಸೆ ಖಾಲಿಯಾಗಲಿದೆಯೇ? ಬನ್ನಿ ಏನೆಲ್ಲಾ ನಿಯಮ ಬದಲಾವಣೆ ತಿಳಿಯೋಣ!