Home latest Changes in September 2023: ಜನಸಾಮಾನ್ಯರೇ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಕಿಸೆ ಖಾಲಿಯಾಗಲಿದೆಯೇ? ಬನ್ನಿ ಏನೆಲ್ಲಾ...

Changes in September 2023: ಜನಸಾಮಾನ್ಯರೇ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಕಿಸೆ ಖಾಲಿಯಾಗಲಿದೆಯೇ? ಬನ್ನಿ ಏನೆಲ್ಲಾ ನಿಯಮ ಬದಲಾವಣೆ ತಿಳಿಯೋಣ!

Changes in September 2023

Hindu neighbor gifts plot of land

Hindu neighbour gifts land to Muslim journalist

Changes in September 2023: ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಹೈರಾಣಾಗಿ ಹೋಗಿದ್ದಾರೆ. ಒಂದೆಡೆ ವಿದ್ಯುತ್ ದರ ಹೆಚ್ಚಳ, ಹಾಲಿನ ದರ ಏರಿಕೆ, ಟೊಮ್ಯಾಟೋ, ಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಮುಂದಿನ ತಿಂಗಳು ಏನೆಲ್ಲ ಬದಲಾವಣೆ (Changes in September 2023) ಆಗಲಿದೆ.ಸೆಪ್ಟೆಂಬರ್‌ ತಿಂಗಳ ಹೊಸ್ತಿಲಿಗೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದರ ಜೊತೆಗೆ ಇನ್ನೇನು ಶಾಕ್ ಕಾದಿದೆ ಎಂದು ಸಾಮಾನ್ಯ ಜನತೆ ಚಿಂತಿಸುವ ಸ್ಥಿತಿ ಎದುರಾಗಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಹಣಕಾಸು ವಿಷಯದಲ್ಲಿ ಯಾವುದೆಲ್ಲ ಬದಲಾವಣೆಗಳಾಗಲಿವೆ? ನೀವೇನಾದರೂ ಈ ಬಗ್ಗೆ ತಿಳಿಯದೇ ಹೋದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಸೆಪ್ಟೆಂಬರ್‌ ತಿಂಗಳ ಪ್ರಮುಖ ಹಣಕಾಸು ಬದಲಾವಣೆಗಳು ಹೀಗಿವೆ:

# 2,000 ರೂಪಾಯಿ ನೋಟು ಬದಲಾವಣೆಗೆ ಅಂತಿಮ ದಿನ:
ಆರ್‌ಬಿಐ (RBI )2 ಸಾವಿರ ರೂಪಾಯಿ ನೋಟು ಬದಲಾವಣೆಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದು, ಈ ಸೆಪ್ಟೆಂಬರ್‌ 30ರ ಮೊದಲು ನೀವು ನೋಟು ಬದಲಾವಣೆ ಮಾಡಿಕೊಳ್ಳಬಹುದು. 2023, ಮೇ 23 ರಿಂದ ಆರ್‌ಬಿಐ 2000 ರೂ. ಮುಖಬೆಲೆಯ ನೋಟುಗಳನ್ನು ಠೇವಣಿ ಇಲ್ಲವೇ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಸುಗಮ ಮತ್ತು ಅಡಚಣೆಯಿಲ್ಲದೆ ಒಂದು ಬಾರಿಗೆ ರೂ.20,000 ದವರೆಗೆ ವಿನಿಮಯ ಮಾಡಲು ನೆರವಾಗುವ ಸಲುವಾಗಿ ಸರಳ ವಿಧಾನಗಳನ್ನು ಅನುಸರಿಸಲು ಆರ್ ಬಿ ಐ ಎಲ್ಲ ಬ್ಯಾಂಕ್ ಗಳಿಗೆ ಮಾಹಿತಿ ನೀಡಿದೆ.

# ಎಸ್‌ಬಿಐ ವಿ ಕೇರ್‌
ಹಿರಿಯ ನಾಗರಿಕರಿಗೆ ವಿ ಕೇರ್‌ ಸ್ಪೇಷಲ್‌ ಫಿಕ್ಸಡ್‌ ಡೆಪಾಸಿಟ್ ಮಾಡಲು ಸೆಪ್ಟೆಂಬರ್‌ 30 2023 ಕೊನೆಯ ದಿನವಾಗಿದ್ದು, ಈ ಹೂಡಿಕೆ ಮಾಡಿರುವ ಹಿರಿಯ ನಾಗರಿಕರಿಗೆ ಹೆಚ್ಚುವರಿ ಎಫ್‌ಡಿ ಬಡ್ಡಿದರ ಲಭ್ಯವಾಗಲಿದೆ.

# ಸಣ್ಣ ಉಳಿತಾಯ ಯೋಜನೆಗಳಿಗೆ ಪಾನ್‌ ಆಧಾರ್‌ ಲಿಂಕ್‌
ಸೆಪ್ಟೆಂಬರ್‌ ತಿಂಗಳಲ್ಲಿ ಗ್ರಾಹಕರು ಸಣ್ಣ ಉಳಿತಾಯ ಖಾತೆಗಳ ಪಾನ್‌ ಆಧಾರ್‌ ಲಿಂಕ್‌ ಮಾಡಿಕೊಳ್ಳಬೇಕಾಗಿದ್ದು, ಸೆಪ್ಟೆಂಬರ್‌ 30ರೊಳಗೆ ಆಧಾರ್‌ ಸಂಖ್ಯೆ ನೀಡದೆ ಹೋದಲ್ಲಿ ಈ ಖಾತೆಗಳು ಕ್ಯಾನ್ಸಲ್ ಆಗಲಿದೆ.

# ಆಧಾರ್‌ ಕಾರ್ಡ್‌ ಉಚಿತ ಅಪ್‌ಡೇಟ್‌
ಸೆಪ್ಟೆಂಬರ್‌ 14ರವರೆಗೆ ಉಚಿತವಾಗಿ ಆಧಾರ್‌ ಕಾರ್ಡ್‌ ಮಾಹಿತಿ ಅಪ್‌ಡೇಟ್‌ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅನುವುಮಾಡಿಕೊಟ್ಟಿದೆ. ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಯಿದ್ದರು ಉಚಿತವಾಗಿ ಮಾಡಿಕೊಳ್ಳಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ, ಆದಷ್ಟು ಬೇಗ ನಿಮ್ಮ ಆಧಾರ್ ಸಂಬಂಧಿತ ಕಾರ್ಯಗಳನ್ನು ಮುಗಿಸಿಕೊಳ್ಳಿ.

# ಆಕ್ಸಿಸ್‌ ಬ್ಯಾಂಕ್‌ನ ಮ್ಯಾಗ್ನಸ್‌ ಕ್ರೆಡಿಟ್‌ ಕಾರ್ಡ್‌ನ ನಿಯಮ ಬದಲಾವಣೆ
ಸೆಪ್ಟೆಂಬರ್‌ 1 2023ರಿಂದ ಆಕ್ಸಿಸ್‌ ಬ್ಯಾಂಕ್‌ನ ಮ್ಯಾಗ್ನಸ್‌ ಕ್ರೆಡಿಟ್‌ ಕಾರ್ಡ್‌ನ ನಿಯಮ ಬದಲಾವಣೆಯಾಗಲಿದ್ದು, ಆಕ್ಸಿಸ್‌ ಬ್ಯಾಂಕ್‌ನ ಮ್ಯಾಗ್ನಸ್‌ ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ ಪ್ರತಿ 200 ರೂಪಾಯಿ ವಿನಿಯೋಗ ಮಾಡಿದರೆ 12 ಎಡ್ಜ್‌ ರಿವಾರ್ಡ್‌ ಪ್ರಾಯಿಂಟ್‌ ಲಭ್ಯವಾಗುತ್ತದೆ. ಸೆಪ್ಟೆಂಬರ್‌ 1ರಿಂದ ಹೊಸ ಕಾರ್ಡ್‌ ಹೊಂದಿರುವವರಿಗೆ ವಾರ್ಷಿಕ ಶುಲ್ಕವು 12,500 ಮತ್ತು ಜಿಎಸ್‌ಟಿ ಆಗಿದ್ದು, ಹಳೆಯ ಗ್ರಾಹಕರಿಗೆ 10 ಸಾವಿರ ರೂ ಮತ್ತು ಜಿಎಸ್‌ಟಿ ಇರಲಿದೆ ಎಂದು ವರದಿಗಳು ಮಾಹಿತಿ ನೀಡಿವೆ.

# ಐಡಿಬಿಐ ಅಮೃತ ಮಹೋತ್ಸವ ಎಫ್‌ಡಿ
ಐಡಿಬಿಐ ಅಮೃತ ಮಹೋತ್ಸವ ಪ್ರಯುಕ್ತವಾಗಿ ಸ್ಥಿರ ಠೇವಣಿಗೆ ಬ್ಯಾಂಕ್‌ ಹೆಚ್ಚಿನ ಬಡ್ಡಿದರ ಒದಗಿಸುತ್ತದೆ. 375 ದಿನಗಳ ಎಫ್‌ಡಿ ಹೂಡಿಕೆಗೆ ಹೆಚ್ಚುವರಿ ಬಡ್ಡಿದರ ಲಭ್ಯವಾಗಲಿದೆ.

ಇದನ್ನೂ ಓದಿ: Sanadalwood News: ಧ್ರುವ ಸರ್ಜಾ ನನ್ನನ್ನು ನೋಡಿಕೊಳ್ಳುವ ಅವಶ್ಯಕತೆ ಇಲ್ಲ! ಹಿಂಗ್ಯಾಕಂದ್ರು ಮೇಘನಾ?