KPSC Recruitment 2023: ಕಮರ್ಷಿಯಲ್ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ 230 ಹುದ್ದೆಗೆ ಅರ್ಜಿ ಆಹ್ವಾನ!

Government job news KPSC recruitment 2023 and apply for 230 commercial tax inspector posts

KPSC Recruitment 2023: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ (KPSC Recruitment 2023)ಖಾಲಿ ಇರುವ 230 ಟ್ಯಾಕ್ಸ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ವಿವರ:
ಇಲಾಖೆಯ ಹೆಸರು – ವಾಣಿಜ್ಯ ತೆರಿಗೆಗಳ ಇಲಾಖೆ
ಹುದ್ದೆ – ವಾಣಿಜ್ಯ ತೆರಿಗೆ ಪರಿವೀಕ್ಷಕರು
ಖಾಲಿ ಹುದ್ದೆಗಳ ಸಂಖ್ಯೆ- 230

ಕರ್ನಾಟಕ ಲೋಕ ಸೇವಾ ಆಯೋಗ (KPSC Recruitment 2023) ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ (Commercial Taxes Department) ಖಾಲಿ ಇರುವ 230 ವಾಣಿಜ್ಯ ತೆರಿಗೆ ಪರಿವೀಕ್ಷಕರ (Commercial Tax Officer Recruitment) ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆನ್ಲೈನ್ (Online) ಮುಖಾಂತರ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.

ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತದಲ್ಲಿ ಕಾನೂನುಬದ್ಧವಾಗಿ ರಚಿತವಾಗಿರುವ ವಿಶ್ವವಿದ್ಯಾಲಯದಲ್ಲಿ ಅಭ್ಯರ್ಥಿಗಳು ಗಣಿತ ಅಥವಾ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರಬೇಕು. ಇಲ್ಲವೇ ವಾಣಿಜ್ಯ ಪದವಿ ಅಥವಾ ಸರ್ಕಾರ ಘೋಷಿಸಿರುವ ತತ್ಸಮಾನ ಪದವಿಯನ್ನು ಪಡೆದುಕೊಂಡಿರಬೇಕು.

ಆಯೋಗವು ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರ ನಿಯಮಗಳು ಹಾಗೂ ತಿದ್ದುಪಡಿ ನಿಯಮ 2022ರನ್ವಯ ಈ ಕೆಳಕಂಡ ಉಳಿಕೆ ಮೂಲ ವೃಂದದ ಗ್ರೂಪ್ ‘ಸಿ’ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಅನುಗುಣವಾಗಿ ನಿಗದಿತ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷವಾಗಿದೆ. ಇನ್ನು ಪ್ರವರ್ಗ 2 ಎ, 2ಬಿ, 3ಎ, 3ಬಿ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ 38 ವರ್ಷ ಮೀರಿರಬಾರದು. ಅದೇ ರೀತಿ, ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ 1 ಅಭ್ಯರ್ಥಿಗಳು 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಶುಲ್ಕ ಗಮನಿಸಿದರೆ, ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಪಾವತಿ ಮಾಡಬೇಕಾಗುತ್ತದೆ. ಪ್ರವರ್ಗ 2 ಎ, 3 ಎ, 3 ಬಿಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಕನ್ನಡ ಭಾಷಾ ಪರೀಕ್ಷೆಯು ನವೆಂಬರ್ 4 2023ರಂದು ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯು ನವೆಂಬರ್ 5 ರಂದು ನಡೆಯಲಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್ ಸಿ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ : KMF Recruitment 2023: ಉದ್ಯೋಗಾಂಕ್ಷಿಗಳೇ ಗಮನಿಸಿ, KMF ನಲ್ಲಿ ಭರ್ಜರಿ ಉದ್ಯೋಗಾವಕಾಶ: ಮಾಸಿಕ ವೇತನ 97,000 ! ಇಂದೇ ಅರ್ಜಿ ಸಲ್ಲಿಸಿ!

Leave A Reply

Your email address will not be published.