Ahmedabad: ಆಟವಾಡುತ್ತ ಎಲ್’ಇಡಿ ಬಲ್ಬ್ ನುಂಗಿದ 9 ತಿಂಗಳ ಮಗು ; ಮುಂದೇನಾಯ್ತು ?
Madhya Pradesh news nine month old baby swallows LED bulb at Ahmedbad
Ahmedabad: ಪುಟ್ಟ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ಮಕ್ಕಳು ತಿಳಿಯದೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕುತ್ತಾರೆ. ಮಕ್ಕಳು ತಿಳಿಯದೆ ಹಾವು, ಕಪ್ಪೆ ಇತ್ಯಾದಿ ಜೀವೀಗಳೊಡನೆ ಆಡುವ ಆಘಾತಕಾರಿ ಘಟನೆಗಳೂ ಬೆಳಕಿಗೆ ಬಂದಿದೆ.
ಇದೀಗ ಅಂತಹದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಪುಟ್ಟ ಮಗು ಆಟವಾಡುತ್ತಿದ್ದ ವೇಳೆ ಎಲ್‌ಇಡಿ ಬಲ್ಬನ್ನು (LED bulb) ನುಂಗಿರುವ ಆಘಾತಕಾರಿ ಘಟನೆ ಅಹಮದಾಬಾದ್ ನಲ್ಲಿ (Ahmedabad) ನಡೆದಿದೆ.
ಮಧ್ಯಪ್ರದೇಶದ (madhya pradesh) ರತ್ಲಾಮ್ ಮೂಲದ 9 ತಿಂಗಳ ಮಗು ಆಟಿಕೆ ಮೊಬೈಲ್ ಫೋನ್ ನೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಅದರಲ್ಲಿದ್ದ ಆಂಟೇನಾದಲ್ಲಿ ಸಣ್ಣ ಎಲ್‌ಇಡಿ ಬಲ್ಬ್ ಅಳವಡಿಸಲಾಗಿತ್ತು. ಹಾಗೇ ಆಟವಾಡುತ್ತಾ ಮಗು ಸಣ್ಣ ಎಲ್‌ಇಡಿ ಬಲ್ಬ್ ಅನ್ನು ತೆಗೆದು ಬಾಯಿಗೆ ಹಾಕಿಕೊಂಡಿದೆ.
ಬಳಿಕ ಮಗುವಿಗೆ ಉಸಿರಾಡಲು ಆಗುತ್ತಿರಲಿಲ್ಲ. ಮಗು ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದಾಗ ಇದನ್ನು ಪೋಷಕರು ಗಮನಿಸಿದ್ದಾರೆ. ತಕ್ಷಣ ಭಯದಿಂದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಮಗುವನ್ನು ಪರೀಕ್ಷಿಸಿ, ಎಕ್ಸ್ ರೇ ಮಾಡಿದಾಗ ಮಗು ಎಲ್‌ಇಡಿ ಬಲ್ಬ್ ನುಂಗಿರುವುದು ತಿಳಿದುಬಂದಿದೆ. ನಂತರ ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಶ್ವಾಸಕೋಶದಲ್ಲಿದ್ದ ಎಲ್ ಇಡಿ ಬಲ್ಸ್ ಹೊರತೆಗೆಯಲಾಗಿದೆ.
ಸದ್ಯ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Rain Alert: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಈ ದಿನದವರೆಗೆ ಭಾರೀ ಮಳೆಯಾಗಲಿದೆ ! ಹವಾಮಾನ ಇಲಾಖೆ ಮುನ್ಸೂಚನೆ !!!