BPL Card: ಬಿಪಿಎಲ್‌ ರೇಷನ್‌ ಕಾರ್ಡ್‌ದಾರರೇ ಸಚಿವರಿಂದ ನಿಮಗೊಂದು ಭರ್ಜರಿ ಗುಡ್‌ ನ್ಯೂಸ್‌! ಕಾರ್ಡ್‌ ರದ್ದು ಸದ್ಯಕ್ಕಿಲ್ಲ!

ration card news updates no dicision is taken on cancellation of bpl card who have car

Share the Article

ಇತ್ತೀಚೆಗೆ ಬಿಪಿಎಲ್‌ ಕಾರ್ಡ್‌ ಹೊಂದಿರುವವರ ಕುರಿತು ಹಲವು ಮಾಹಿತಿಗಳು ವರದಿಯಾಗುತ್ತಿತ್ತು. ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ, ಎಚ್ಚರ ವಹಿಸಿ ಎಂಬ ಮಾಹಿತಿಗೆ ಈಗ ಆಹಾರ ಸಚಿವ ಕೆ.ಎಚ್‌ ಮುನಿಯಪ್ಪ ಅವರು ಉತ್ತರ ನೀಡಿದ್ದಾರೆ. ಬಿಪಿಎಲ್‌ ಕಾರ್ಡ್‌ ರದ್ದಾಗುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದವರು ವೈಟ್‌ ಬೋರ್ಡ್‌ ಕಾರ್ಡ್‌ ಹೊಂದಿದ್ದರೆ ರೇಷನ್‌ ಕಾರ್ಡ್‌ ರದ್ದು ಮಾಡುವ ಪ್ರಶ್ನೆಗೆ ಸಚಿವರು ಗುಡ್‌ ನ್ಯೂಸ್‌ ನೀಡಿದ್ದಾರೆ.

ರೇಷನ್‌ ಕಾರ್ಡ್‌ಗಾಗಿ ಒಂದು ವರ್ಷದಿಂದ ಪೆಂಡಿಂಗ್‌ ಇರುವ ಮೂರು ಲಕ್ಷ ಅರ್ಜಿಗಳನ್ನು ಪರಿಶೀಲನೆ ಮಾಡಿ, ಅರ್ಹ ಫಲಾನುಭವಿಗಳನ್ನು ಪರಿಶೀಲಿಸುತ್ತೇವೆ ಎಂದು ಹಾಸನದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಆಹಾರ ಸಚಿವರು ತಿಳಿಸಿದ್ದಾರೆ.

ಹಾಗೆನೇ ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಕಾರು ಹೊಂದಿದ್ದರೆ ಕಾರ್ಡ್‌ ರದ್ದಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ಬಿಪಿಎಲ್‌ ನವರು ಸಣ್ಣ ಕಾರು ಇಟ್ಟುಕೊಂಡಿರುತ್ತಾರೆ. ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Leave A Reply