Home Jobs Job Opportunities: KSRTC, BMTC ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಯ ಒಟ್ಟು 13 ಸಾವಿರ ಹುದ್ದೆಗಳಿಗೆ...

Job Opportunities: KSRTC, BMTC ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಯ ಒಟ್ಟು 13 ಸಾವಿರ ಹುದ್ದೆಗಳಿಗೆ ಶೀಘ್ರ ಭರ್ತಿ! ಸಾರಿಗೆ ಸಚಿವರು ನೀಡಿದ್ರು ಬಿಗ್‌ ಅಪ್ಡೇಟ್‌!!!

KSRTC BMTC recruitment

Hindu neighbor gifts plot of land

Hindu neighbour gifts land to Muslim journalist

KSRTC BMTC recruitment: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 13 ಸಾವಿರ ಚಾಲಕ(Driver), ಚಾಲಕ ಕಮ್ ನಿರ್ವಾಹಕರ ಹುದ್ದೆಗಳ(KSRTC BMTC recruitment) ಭರ್ತಿಗೆ ಸರ್ಕಾರದಿಂದ ಅನುಮೋದನೆ ಲಭ್ಯವಾಗಿದ್ದು, ಆರ್ಥಿಕ ಇಲಾಖೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿರುವ ಕುರಿತಂತೆ ಸಾರಿಗೆ ಸಚಿವ (Minister of Transport of Karnataka)ರಾಮಲಿಂಗಾರೆಡ್ಡಿ(Ramalinga Reddy) ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ(KSRTC), ಬಿಎಂಟಿಸಿ(BMTC )ಸೇರಿದಂತೆ ಎಲ್ಲ ಸಾರಿಗೆ ಸಂಸ್ಥೆಗಳು ಸೇರಿ ಒಟ್ಟು 13,000 ಡ್ರೈವರ್, ಕಂಡಕ್ಟರ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ವಿದ್ಯಾರ್ಹತೆ ಗಮನಿಸಿದರೆ, ಚಾಲಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಮತ್ತು ಚಾಲಕ ಕಮ್ ನಿರ್ವಾಹಕ ಹುದ್ದೆಗಳಿಗೆ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ. ಭಾರಿ ವಾಹನ ಚಾಲನ ಪರವಾನಗಿ (ಹೆವಿ ಡ್ರೈವಿಂಗ್ ಲೈಸನ್ಸ್‌) ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಿದವರಿಗೆ ಬಸ್ ಚಾಲನೆ ಕುರಿತು ಪರೀಕ್ಷೆ ನಡೆಯಲಿದ್ದು,ಮೆರಿಟ್‌ ಆಧಾರದಲ್ಲಿ ಸ್ಕಿಲ್ ಟೆಸ್ಟ್‌ಗೆ ಶಾರ್ಟ್‌ ಲಿಸ್ಟ್‌ ಮಾಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 13 ಸಾವಿರ ಚಾಲಕ(Driver), ಚಾಲಕ ಕಮ್ ನಿರ್ವಾಹಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅನುಮೋದನೆ ಲಭ್ಯವಾಗಿದ್ದು, ಈ ಕುರಿತು ರಾಜ್ಯ ಸರ್ಕಾರವು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ. ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದ್ದು, ಇದರ ಜೊತೆಗೆ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯ ಮಂತ್ರಿಗಳು 500 ಕೋಟಿ ರೂ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ! 6 ಮಂದಿ ಭಾರತೀಯ ಯಾರ್ತಾರ್ಥಿ ಸೇರಿ 7 ಮಂದಿ ಭೀಕರ ಸಾವು!