FCI Recruitment 2023: ಭಾರತೀಯ ಆಹಾರ ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ! 5000 ಹುದ್ದೆಗಳ ಭರ್ತಿ! ಮಾಸಿಕ 30 ಸಾವಿರವರೆಗೆ ವೇತನ!

Central Government jobs food corporation of India recruitment 2023 application invitation for 5000 post in fci recruitment

Share the Article

FCI Recruitment 2023 :ಭಾರತೀಯ ಆಹಾರ ನಿಗಮ (Food Corporation of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತೀಯ ಆಹಾರ ನಿಗಮ ಇಲಾಖೆಯು 5000 ಹುದ್ದೆಗಳ ನೇಮಕಾತಿಗಾಗಿ(FCI Recruitment 2023) ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸಹಾಯಕ ಗ್ರೇಡ್-II (AG II), ಜೂನಿಯರ್ ಅಕೌಂಟೆಂಟ್ (JA), ಮತ್ತು ವೈಜ್ಞಾನಿಕ ಸಹಾಯಕ (SA) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

FCI ನೇಮಕಾತಿ 2023 ವಿವರಗಳು ಹೀಗಿವೆ:
ಇಲಾಖೆಯ ಹೆಸರು – ಭಾರತೀಯ ಆಹಾರ ನಿಗಮ
ಖಾಲಿ ಹುದ್ದೆಗಳು – ವಾಚ್ಮ್ಯಾನ್, ಸಹಾಯಕ ಜನರಲ್ ಮ್ಯಾನೇಜರ್, ಮ್ಯಾನೇಜರ್, ವರ್ಗ III,
ಒಟ್ಟು ಪೋಸ್ಟ್ – 5000
ಅಧಿಕೃತ ಜಾಲತಾಣ – https://fci.gov.in/

FCI ನೇಮಕಾತಿ 2023 ಅರ್ಹತಾ ಮಾನದಂಡ
# ಭಾರತೀಯ ಪ್ರಜೆಗಳಾಗಿರಬೇಕು.
# ಅರ್ಜಿ ಸಲ್ಲಿಸುವ ವ್ಯಕ್ತಿ ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
# ಅರ್ಜಿ ಸಲ್ಲಿಸುವ ವ್ಯಕ್ತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು.

ಎಫ್ ಸಿಐ ಹುದ್ದೆಗಳಿಗೆ ಅರ್ಹತೆ ಹೀಗಿದೆ:ಪದವಿ, ಡಿಪ್ಲೊಮಾ, B.Tech/ ಎಂಜಿನಿಯರಿಂಗ್, 8ನೇ ತರಗತಿ (ವಾಚ್ ಮ್ಯಾನ್ ಹುದ್ದೆಗೆ) ಎಫ್ ಸಿಐ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 25 ರಿಂದ 27 ವರ್ಷದ ವಯೋಮಿತಿ ನಿಗದಿ ಪಡಿಸಲಾಗಿದೆ.ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ www.fci.gov.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆ ಆಗಸ್ಟ್ 2023ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 2023ರವರೆಗೆ ಅರ್ಜಿ ಸಲ್ಲಿಸಬಹುದು. ಈ ಕುರಿತ ಅಧಿಸೂಚನೆ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಪರೀಕ್ಷೆಯು ಡಿಸೆಂಬರ್ 2023ರಲ್ಲಿ ನಡೆಯುವ ಸಾಧ್ಯತೆ ಇದೆ.FCI ನೇಮಕಾತಿ 2023 ರ ಪ್ರಕಾರ, ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ ಗಮನಿಸಿದರೆ,ಎಸ್ಸಿ, ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇದರ ಜೊತೆಗೆ, ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.250 ನಿಗದಿ ಮಾಡಲಾಗಿದೆ. ಮಾಸಿಕ 10, 000ದಿಂದ 30,000 ವರೆಗೆ ವೇತನ ಸಿಗಲಿದೆ.

ಇದನ್ನೂ ಓದಿ: Education News: ವಿದ್ಯಾರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ! 11 ಮತ್ತು 12ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಬೋರ್ಡ್ ಪರೀಕ್ಷೆ: ಶಿಕ್ಷಣ ಸಚಿವಾಲಯ ಸೂಚನೆ!

Leave A Reply