ದೇವಸ್ಥಾನಕ್ಕೆ ಗಂಡನನ್ನು ಕರೆದುಕೊಂಡ ಹೋದ ಪತ್ನಿ, ತೋಟಕ್ಕೆ ಹೋಗಿ ಮೋಜು ಮಾಡುವ ಅಂದಳು! ಅಷ್ಟೇ ನಂತರ ಗಂಡ ಏನಾದ?
Andhra Pradesh news married women killed her husband with the help of paramour both arrested in anakapalle
Andhra Pradesh : ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಗಾಲು ಹಾಕುತ್ತಿದ್ದಾನೆ ಎಂದು ಅನುಮಾನಿಸಿ (illicit relation)ಪತ್ನಿ ಮಾಡಿದ ಕಾರ್ಯ ತಿಳಿದರೆ ಅಚ್ಚರಿ ಆಗೋದು ಗ್ಯಾರಂಟಿ.
ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಪತ್ನಿಯೊಬ್ಬಳು ಪತಿಯ ಬಳಿ ಕೇಳಿಕೊಂಡಿದ್ದಾಳೆ. ದೇವಾಲಯಕ್ಕೆ ಹೋಗಿ ಹಿಂತಿರುಗುವ ಹೊತ್ತಿಗೆ ಒಂದು ತೋಟದ ಬಳಿ ನಿಲ್ಲಿಸುವಂತೆ ಕೇಳಿಕೊಂಡ ಪತ್ನಿ ಅಲ್ಲೇ ಕಾಲ ಹರಣ ಮಾಡಿ ಗಂಡನ ತಲೆಯನ್ನು ಮಡಿಲಲ್ಲಿ ಇಟ್ಟುಕೊಂಡು ನೇವರಿಸುತ್ತಾ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ (Murder) ಮಾಡಿದ್ದಾಳೆ.
ಅನಕಾಪಲ್ಲಿ(Anakapalle, Andhra Pradesh ) ಜಿಲ್ಲೆಯ ಗೋಲುಗೊಂಡ ಮಂಡಲದ ಮಲ್ಲಂಪೇಟೆಯ ಗುಡಿವಾಡ ಅಪ್ಪಲನಾಯ್ಡು ಮತ್ತು ಜಾನಕಿ ದಂಪತಿಗಳಾಗಿದ್ದಾರೆ. ಈ ನಡುವೆ ಮಡದಿ ಜಾನಕಿಗೆ ಹಳೆ ಕೇದಿಪೇಟೆಯ ಚಿಂತಲ ರಾಮು ಎಂಬ ವ್ಯಕ್ತಿ ಮೇಲೆ ಪ್ರೀತಿ ಹುಟ್ಟುಕೊಂಡಿದೆ. ಇದರ ನಡುವೆ, ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ಪತಿಗೆ ಅನುಮಾನ ವ್ಯಕ್ತವಾಗಿದ್ದು, ಹೀಗಾಗಿ, ಮಡದಿ ತನಗೆ ಯಾವುದೇ ಅಕ್ರಮ ಸಂಬಂಧದ ನಂಟಿಲ್ಲ ಎಂಬುದನ್ನು ಪತಿಗೆ ನಂಬಿಸಲು ಪತಿಯನ್ನೇ ಹೆಚ್ಚು ಪ್ರೀತಿಸುವ ಹಾಗೆ ನಾಟಕವಾಡಿದ್ದಾಳೆ.
ಜಾನಕಿ ತನ್ನ ಪತಿಗೆ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡವಾಗುತ್ತಿದ್ದಾನೆ ಎಂದು ಇದೇ ತಿಂಗಳ 20ರಂದು ಕೋಟವುರತ್ಲ ಮಂಡಲದ ಪಾಮುಳವಾಕ ಗ್ರಾಮದ ಪಟ್ಟಲಮ್ಮನ ತಾಯಿ ದೇವಸ್ಥಾನಕ್ಕೆ ಹೋಗಬೇಕೆಂದು ನಟಿಸಿ ಜಾನಕಿ ಪತಿಗೆ ಬೇಡಿಕೆ ಇಟ್ಟಿದ್ದಾಳೆ. ಪತಿ ಅಪ್ಪಲನಾಯ್ಡು ಪತ್ನಿ ಸುಧಾರಿಸಿದ್ದಾಳೆ ಎಂದುಕೊಂಡು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿದ ವೇಳೆ ತಾಂಡವ ರಸ್ತೆಗೆ ಹೋಗಿ ಮೋಜು ಮಸ್ತಿ ಮಾಡೋಣ ಎಂದು ಹೇಳಿ ಗೋಡಂಬಿ ತೋಟದಲ್ಲಿ ಇಬ್ಬರೂ ನವ ಪ್ರೇಮಿಗಳಂತೆ ಕುಳಿತಿದ್ದಾರೆ.
ಗಂಡನ ತಲೆಯನ್ನು ತೆಗೆದುಕೊಂಡು ತನ್ನ ಮಡಿಲಲ್ಲಿ ಇಟ್ಟುಕೊಂಡವಳ ಹಿಂದಿನ ಸಂಚನ್ನು ಅರಿಯದೇ ಅಪ್ಪಲನಾಯ್ಡು ತನ್ನ ಹೆಂಡತಿ ತನ್ನನ್ನು ಪ್ರೀತಿಸುತ್ತಾಳೆ ಎಂದೆ ಭ್ರಮೆಯಲ್ಲೇ ಇದ್ದ. ಆದರೆ, ಪತಿಯನ್ನು ತಲೆಯ ಮೇಲೆ ಮಲಗಿಸಿಕೊಂಡ ಮಡದಿ ಪತಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದಾಳೆ. ಹೀಗಾಗಿ, ಜಾನಕಿಯ ಗೆಳೆಯ ರಾಮು ಹಿಂದಿನಿಂದ ಬಂದು ಸುತ್ತಿಗೆಯಿಂದ ಅಪ್ಪಲನಾಯ್ಡು ತಲೆಗೆ ಬಲವಾಗಿ ಹೊಡೆದಿದ್ದು,ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ತಾನೂ ಕಲ್ಲಿನಿಂದ ಹೊಡೆದು ಕೊಂದಿದ್ದಾಳೆ.
ಆ ನಂತರ ಜಾನಕಿ-ರಾಮ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದು, ಕೊಲೆಯನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಪತಿ ಅಪ್ಪಲನಾಯ್ಡು ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡು ಶವವನ್ನು ತೋಟದಿಂದ ರಸ್ತೆಗೆ ಎಳೆದುತಂದಿದ್ದಾರೆ. ರಸ್ತೆಯಲ್ಲಿ ಶವ ಇಟ್ಟು, ಪಕ್ಕದಲ್ಲೇ ದ್ವಿಚಕ್ರವಾಹನ ಬಿದ್ದಿರುವ ದೃಶ್ಯವನ್ನು ಸೃಷ್ಟಿ ಮಾಡಿದ್ದಾರೆ. ಜಾನಕಿ ರಸ್ತೆಯಲ್ಲಿ ಅಳುವ ನಾಟಕವಾಡಿ ತನ್ನ ಪತಿ ರಸ್ತೆ ಅಪಘಾತದಲ್ಲಿ ಸತ್ತಿದ್ದಾನೆ ಎಂದು ದಾರಿಹೋಕರಿಗೆ ಮನವರಿಕೆ ಮಾಡಲು ಪ್ರಯತ್ನಪಟ್ಟಿದ್ದಾರೆ. ಈ ನಡುವೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಆಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ಮೃತನ ದೇಹದ ಮೇಲಿದ್ದ ಗಾಯಗಳನ್ನ ಗಮನಿಸಿದ ಸಂದರ್ಭ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಘಟನಾವಳಿಗಳು ಅವರಲ್ಲಿ ಅನುಮಾನ ಮೂಡಿಸಿದೆ. ಹೀಗಾಗಿ, ತನಿಖೆ ನಡೆಸಿದ ಸಂದರ್ಭ ಅಪ್ಪಲನಾಯುಡು ಅವರನ್ನು ಕೊಲೆ ಮಾಡಲಾಗಿದೆ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ. ಜಾನಕಿಯ ಗೆಳೆಯ ರಾಮನನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ಆದಿರಾಜ್ ಸಿಂಗ್ ರಾಣಾ ತಿಳಿಸಿದ್ದಾರೆ.
ಇದನ್ನೂ ಓದಿ: ಸರಕಾರಿ ನೌಕರರಿಗೆ ಬಂಪರ್ ಸಿಹಿ ಸುದ್ದಿ! ಇನ್ನು ಇವರಿಗೆ ಲಭಿಸಲಿದೆ 2ವರ್ಷ ಹೆಚ್ಚುವರಿ ಪಾವತಿ ರಜೆ!