GST Reward Scheme: ಸೆಪ್ಟೆಂಬರ್ 1 ಹೊಸ ಯೋಜನೆ ಜಾರಿ! ಯಾವ್ಯಾವ ರಾಜ್ಯಗಳಲ್ಲಿ ? ಇಲ್ಲಿದೆ ನೋಡಿ

Central government to launch Mera bill Mera Adhikar GST reward scheme in 6 states from September 1

GST Reward Scheme: ಈಗಂತೂ ಎಲ್ಲ ಕಡೆ ಜಿಎಸ್‌ಟಿಯದ್ದೇ ಪಾರುಪತ್ಯ. ಹೋಟೆಲ್ ಬಿಲ್‌ (Hotel Bill), ಶಾಪಿಂಗ್‌ ಬಿಲ್‌ (Shopping Bill), ಆಸ್ಪತ್ರೆ ಬಿಲ್‌ (Hospital Bill) ಹೀಗೆ ಪ್ರತಿಯೊಂದಕ್ಕೂ ಜಿಎಸ್‌ಟಿ (GST) ಹಾಕಲಾಗುತ್ತದೆ. ಆದರೆ, ಇನ್ನೂ ಮುಂದೆ ಶಾಪಿಂಗ್‌ ಮಾಡಿ, ಬಿಲ್ ಅಪ್‌ಲೋಡ್ ಮಾಡಿದ್ರೆ ಸಾಕು ನೀವು ಬರೋಬ್ಬರಿ 1 ಕೋಟಿವರೆಗೆ ಬಹುಮಾನ ಗೆಲ್ಲಬಹುದು!! ಅರೇ, ಇದೇನಿದು ಅಂತಾ ಯೋಚಿಸುತ್ತಿದ್ದೀರಾ ?

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಬಹುನಿರೀಕ್ಷಿತ ‘ಮೇರಾ ಬಿಲ್ ಮೇರಾ ಅಧಿಕಾರ’ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ಧತೆ ಮಾಡುತ್ತಿದೆ ಎನ್ನಲಾಗಿದೆ. ‘ಮೇರಾ ಬಿಲ್ ಮೇರಾ ಅಧಿಕಾರ’ ಯೋಜನೆ ಮೂಲಕ ಜನರು ಭರ್ಜರಿ ಬಹುಮಾನಗಳನ್ನು ಲಕ್ಕಿ ಡ್ರಾ ಮೂಲಕ ಗೆಲ್ಲಲು ಉತ್ತಮ ಅವಕಾಶ ದೊರೆಯಲಿದೆ. ಮೇರಾ ಬಿಲ್ ಮೇರಾ ಅಧಿಕಾರ ಯೋಜನೆಯ ಮೂಲಕ ಸರಕು ಮತ್ತು ಸೇವಾ ತೆರಿಗೆ (GST)ಅಡಿಯಲ್ಲಿ ಖರೀದಿಸಿದ ಸರಕುಗಳ GST ಇನ್ವಾಯ್ಸ್ ಅನ್ನು ಅಪ್ಲೋಡ್ ಮಾಡುವ ಮುಖಾಂತರ ನಗದು ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ಗ್ರಾಹಕರು ತಾವು ಖರೀದಿಸಿದ ವಸ್ತುಗಳ ಮೂಲಕ ಬಿಲ್‌ಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹ ನೀಡುವ ಜೊತೆಗೆ ಹೆಚ್ಚಿನ ವ್ಯಾಪಾರಿಗಳು ಇದನ್ನು ಅನುಸರಿಸಲು ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಹೆಚ್ಚು ಹೆಚ್ಚು GST ಇನ್‌ವಾಯ್ಸ್‌ಗಳು ಸಲ್ಲಿಕೆಯಾದಲ್ಲಿ ಉದ್ಯಮಿಗಳ ತೆರಿಗೆ ವಂಚನೆ ತಪ್ಪಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.

‘ಮೇರಾ ಬಿಲ್ ಮೇರಾ ಅಧಿಕಾರ್’ ಇನ್ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಸರ್ಕಾರವು ಸೆಪ್ಟೆಂಬರ್ 1 ರಿಂದ ಪ್ರಾರಂಭ ಮಾಡಲಾಗುತ್ತದೆ. ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು 10,000 ರೂಪಾಯಿಗಳಿಂದ 1 ಕೋಟಿ ರೂಪಾಯಿಯವರೆಗೆ ನಗದು ಬಹುಮಾನವನ್ನು ನೀಡುವ ಈ ಯೋಜನೆಯ ಪ್ರಯೋಜನ ನೀವು ಕೂಡ ಪಡೆಯಬಹುದು.

ಈ ಯೋಜನೆಯನ್ನು ಅಸ್ಸಾಂ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಪ್ರಾರಂಭಿಸಲಾಗುತ್ತದೆ. ಪುದುಚೇರಿ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರೀಯ ಆಡಳಿತ ಪ್ರದೇಶಗಳಲ್ಲಿ ಸಹ ಜಾರಿಗೆ ತರಲಾಗುತ್ತಿದೆ ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC)ಮಾಹಿತಿ ನೀಡಿದೆ.

ವ್ಯಾಪಾರದಿಂದ ಗ್ರಾಹಕನಿಗೆ (B2C) ಸರಕುಗಳು ಇಲ್ಲವೇ ಸೇವೆಗಳ ಖರೀದಿಗಳನ್ನು ಮಾಡುವ ಸಂದರ್ಭ ಮಾರಾಟಗಾರರಿಂದ ನಿಜವಾದ ಇನ್ವಾಯ್ಸ್ಗಳನ್ನು ಕೇಳಲು ನಾಗರಿಕರು ಮತ್ತು ಗ್ರಾಹಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಜಿಎಸ್ಟಿ ಇನ್ವಾಯ್ಸ್ಗಳ ಅಪ್ಲೋಡ್ನಲ್ಲಿ ನಗದು ಬಹುಮಾನಗಳನ್ನು ಗಳಿಸಲು ಇನ್ವಾಯ್ಸ್ ಇನ್ಸೆಂಟಿವ್ ಸ್ಕೀಮ್ ನ್ನು ಜಾರಿಗೆ ತರಲಾಗುತ್ತಿದೆ ಎಂದು ಸಿಬಿಐಸಿ ಟ್ವೀಟ್ ಮಾಡಿದ್ದು, ಗ್ರಾಹಕರಿಗೆ ಸರಕು ಮತ್ತು ಸೇವಾ ತೆರಿಗೆ (GST) ನೋಂದಾಯಿತ ಪೂರೈಕೆದಾರರು ನೀಡಿದ ಎಲ್ಲಾ ಇನ್ವಾಯ್ಸ್ಗಳು ‘ಮೇರಾ ಬಿಲ್ ಮೇರಾ ಅಧಿಕಾರ್’ ಯೋಜನೆಗೆ ಅರ್ಹವಾಗೊರುತ್ತವೆ. ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾಗಳನ್ನು ನಡೆಯಲಿದ್ದು, ವಿಜೇತರು ನಗದು ಬಹುಮಾನಗಳಿಗೆ ಅರ್ಹರಾಗುತ್ತಾರೆ.

ಒಬ್ಬ ವ್ಯಕ್ತಿಯು ತಿಂಗಳಿಗೆ ಗರಿಷ್ಠ 25 ಬಿಲ್‌ಗಳನ್ನು ಅಪ್‌ಲೋಡ್ ಮಾಡಬಹುದಾಗಿದ್ದು, ಪ್ರತಿ ಬಿಲ್‌ನ ಕನಿಷ್ಠ ಮೊತ್ತ 200 ರೂ. ಆಗಿರಬೇಕು ಎನ್ನಲಾಗಿದೆ. ‘ಮೇರಾ ಬಿಲ್ ಮೇರಾ ಅಧಿಕಾರ್’ ಮೊಬೈಲ್ ಅಪ್ಲಿಕೇಶನ್ ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಾಗಲಿದ್ದು, ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡಿದ ಇನ್ವಾಯ್ಸ್ ಮಾರಾಟಗಾರರ GSTIN, ಇನ್ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಹೊಂದಿರಬೇಕು.

ಇದನ್ನೂ ಓದಿ: New Tax Rule: ಲೈಫ್‌ ಇನ್ಶೂರೆನ್ಸ್‌ ಪಾಲಿಸಿ ಕುರಿತು ಹೊಸ ಆದಾಯ ತೆರಿಗೆ ನಿಯಮ ತಂದ ಸರಕಾರ!

Leave A Reply

Your email address will not be published.