Laptops To Students: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್, ಸಿಗಲಿದೆ ಉಚಿತ ಲ್ಯಾಪ್‌ಟಾಪ್- ಸಿಎಂ ಸಿದ್ದರಾಮಯ್ಯ ಆದೇಶ, ತಕ್ಷಣದಿಂದ ಜಾರಿ !
Education news Siddaramaiah order to give laptops to universities students
Laptops To Students:
ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ವಿದ್ಯಾರ್ಥಿಗಳಿಗೆ ಬಂಪರ್ ನ್ಯೂಸ್ ಕೊಟ್ಟಿದ್ದಾರೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ (Free Laptops) ವಿತರಿಸುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಇದೀಗ ತಾನೇ ಸಿದ್ದರಾಮಯ್ಯನವರು ಸರಣಿ ಟ್ವೀಟ್ ಮಾಡಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಂಚಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ (Laptops To Students) ಪ್ರಯೋಜನ ಸಿಗಲಿದೆ.
ಈ ಉಚಿತ ಲ್ಯಾಪ್ಟಾಪ್ ಸೌಲಭ್ಯವು ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ದೊರೆಯಲಿದ್ದು ಇದಕ್ಕೆ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳು ಅರ್ಹರಾಗಿರುವುದಿಲ್ಲ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಅನುಕೂಲ ವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯವು ಕೈಗಾರಿ ಕೋದ್ಯಮಿಗಳು ಬಯಸುವ ಮಟ್ಟದ ಪಠ್ಯಕ್ರಮ ರೂಪಿಸಿ ಅದನ್ನು ಇಂಜಿನಿಯರಿಂಗ್ ಪದವಿದರರಿಗೆ ಓದಿಸಿ ಆ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲು ಅನುವಾಗುವಂತೆ ಪಠ್ಯಕ್ರಮ ರೂಪಿಸ ಬೇಕೆಂದು ಇಂದಿನ ಸಭೆಯಲ್ಲಿ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಈ ಸೌಲಭ್ಯವು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗಲಿದೆ. ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗುವುದಿಲ್ಲ. ಎಸ್ಸಿ ಎಸ್ಟಿ ಮತ್ತು ಟಿ ಎಸ್ ಪಿ ಯೋಜನೆಯಡಿ ಉಚಿತ ಲ್ಯಾಪ್ಟಾಪ್ ವಿತರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಉದ್ದೇಶಕ್ಕಾಗಿ ಒಟ್ಟು 230 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿದೆ ಎನ್ನುವ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ: ಸ್ನಾನದ ಮನೆಗೆ ನುಗ್ಗಿದ ಯುವಕ; ಲೈಂಗಿಕ ಕಿರುಕುಳ! ಪ್ರಕರಣ ದಾಖಲು !!