Education News : ಪಠ್ಯಕ್ರಮದಲ್ಲಿ ಇನ್ನು ಮುಂದೆ ಲೈಂಗಿಕ ಶಿಕ್ಷಣ ಜಾರಿ: ಸರಕಾರದ ಆದೇಶ !

Education news Maharashtra education society to include new education system in curriculum

New education system: ಸಾಮಾನ್ಯವಾಗಿ ಪಠ್ಯಪುಸ್ತಕದಲ್ಲಿ ಕವಿಗಳ, ಸ್ವಾತಂತ್ರ್ಯ ಹೋರಾಟಗಾರರ (Freadom fighter) ಬಗ್ಗೆ ನೀಡಲಾಗಿರುತ್ತದೆ. ಮಕ್ಕಳು ಅದನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಇದೀಗ ಸರ್ಕಾರ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ (sex Education) ಜಾರಿಗೆ ತರಲು ಮುಂದಾಗಿದೆ.

ಹೌದು, ಮಹಾರಾಷ್ಟ್ರದ ಉಲ್ಹಾಸ್‌ನಗರದಲ್ಲಿರುವ ಶೈಕ್ಷಣಿಕ ಸಂಘವೊಂದು ಲೈಂಗಿಕ ಶಿಕ್ಷಣವನ್ನು ಸೇರಿಸುವಲ್ಲಿ ಮೊದಲಿಗರಾಗಿದೆ. ಈ ಪಠ್ಯಕ್ರಮ ಸೇರ್ಪಡೆಗೆ ಕಾರಣ OMG2 ಸಿನಿಮಾ. ಅಕ್ಷಯ್ ಕುಮಾರ್ (Akshay Kumar), ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅಭಿನಯದ ‘OMG 2’ ಕಳೆದ ವಾರ ಬಿಡುಗಡೆಯಾದಾಗಿನಿಂದ ಸದ್ದು ಮಾಡುತ್ತಿದೆ. ಈ ಚಿತ್ರವು ಭಾರತದಲ್ಲಿ ಲೈಂಗಿಕ ಶಿಕ್ಷಣದ (education) ಅಗತ್ಯವನ್ನು ಎತ್ತಿ ತೋರಿಸಿತು. ಬಿಡುಗಡೆಯಾದಾಗಿನಿಂದ, ಶಾಲಾ ಪಠ್ಯಕ್ರಮದಲ್ಲಿ (New education system) ವಿಷಯವನ್ನು ಸೇರಿಸಲು ಕೆಲವು ಪ್ರಮುಖ ಧ್ವನಿಗಳು ಕೇಳಿಬರುತ್ತಿವೆ.

ಕೆಲವು ದಿನಗಳ ಹಿಂದೆ, ರೇಖಾ ಠಾಕೂರ್ (ಕಾರ್ಯದರ್ಶಿ) ನೇತೃತ್ವದಲ್ಲಿ ಸಿಂಧು ಎಜುಕೇಶನ್ ಅಸೋಸಿಯೇಷನ್ ​​ಉಲ್ಲಾಸನಗರದಲ್ಲಿ OMG2 ನ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರದರ್ಶನದ ನಂತರ, ಸಂಘಟಕರು, ಸಿಂಧು ಎಜುಕೇಷನಲ್ ಸೊಸೈಟಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಮ್ಮ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನು ಸೇರಿಸಲು ಪ್ರಾರಂಭಿಸುವುದಾಗಿ ಘೋಷಿಸಿದರು. ”OMG2″ ನ ಬರಹಗಾರ ಮತ್ತು ನಿರ್ದೇಶಕ ಅಮಿತ್ ರೈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: Vijaykumar Gavit : ಐಶ್ವರ್ಯ ರೈ ರೀತಿ ಕಣ್ಣು ಬೇಕೇ? ಬಿಜೆಪಿ ಸಚಿವರ ಸಲಹೆ ಕೇಳಿ! ಟೀಕಿಸಿದ ನೆಟ್ಟಿಗರು!!!

Leave A Reply

Your email address will not be published.