Kantara 2: ಕಾಂತಾರ-2 ಸಿನಿಮಾ ಶೂಟಿಂಗ್‌ ಕುರಿತು ಬಿಗ್‌ ಅಪ್ಡೇಟ್‌! ಯಾವಾ ರಿಲೀಸ್‌ ಗೊತ್ತಾ?

Entertainment Sandalwood news actor Rishabh Shetty kantara-2 movie shooting to begin from November

Kantara-2 : ಬಾಕ್ಸ್ ಆಫೀಸಲ್ಲಿ ಗೆಲುವಿನ ಜಯಭೇರಿ ಬೀರಿ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಂಡ ‘ಕಾಂತಾರ’ (kantara) ದಾಖಲೆಗಳ ಮೇಲೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ. ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ರಿಲೀಸ್ ಆಗಿ, ಹಿಟ್ ಕೂಡ ಆಗಿದೆ. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಈ ಸಿನೆಮಾದ ಗೆಲುವಿನ ಬಳಿಕ ಇದೀಗ ರಿಷಬ್ ಶೆಟ್ರ (Rishab shetty) ತಂಡ ಕಾಂತಾರ 2 (Kantara-2) ಸಿನಿಮಾ ತಯಾರಿಯಲ್ಲಿದೆ.

ಕಾಂತಾರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಕಾಂತಾರ-2 ಬಗ್ಗೆ ದೇಶಾದ್ಯಂತ ಜನರಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ. ಕಾಂತಾರ ಇದೀಗ ಪಾರ್ಟ್-2 ಮೂಲಕ ಮೋಡಿ ಮಾಡಲು ರೆಡಿಯಾಗುತ್ತಿದೆ.
ಹಾಗಾದ್ರೆ ಕಾಂತಾರ ಸಿನಿಮಾ ಶೂಟಿಂಗ್ ಯಾವಾಗ ಶುರುವಾಗುತ್ತೆ?
ಯಾವಾಗ ರಿಲೀಸ್‌? ಇಲ್ಲಿದೆ ನೋಡಿ ಕಾಂತಾರ-2 ಸಿನಿಮಾ ಶೂಟಿಂಗ್‌ ಕುರಿತು ಬಿಗ್‌ ಅಪ್ಡೇಟ್‌.

ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾಗೆ ಕಥೆ ಬರೆದು ಮುಗಿಸಿದ್ದಾರೆ. ಅವರು ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂತಾರ 2 ಸಿನಿಮಾದ ಮೊದಲ ಭಾಗ ರಿಷಬ್ ಶೆಟ್ಟಿ ಅವರ ಹುಟ್ಟೂರು ಕುಂದಾಪುರದಲ್ಲಿ ನಡೆಯಲಿದ್ದು, ಸಿನಿಮಾದ ಉಳಿದ ಭಾಗದ ಚಿತ್ರೀಕರಣ ಮಂಗಳೂರಿನ ಆಸುಪಾಸಿನಲ್ಲಿ ನಡೆಯಲಿದೆ.

ಕಾಂತಾರ 2 ಸಿನಿಮಾದಲ್ಲಿ ಕಾಡು, ಹಳ್ಳಿ ಪ್ರದೇಶ, ನೀರು ಇರುವಂತಹ ಪ್ರದೇಶದಲ್ಲಿಯೇ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ. ಸಿನಿಮಾ ಬಜೆಟ್ ಹಾಗೂ ಸಿನಿಮಾ ಕಲಾವಿದರ ಸಂಖ್ಯೆಯೂ ಹೆಚ್ಚಾಗಲಿದೆ ಎನ್ನಲಾಗಿದೆ. ದೊಡ್ಡಮಟ್ಟದಲ್ಲಿ ಕಾಂತಾರ 2 ನಿರ್ಮಿಸಲು ಯೋಜಿಸಲಾಗಿದೆ. ಶೂಟಿಂಗ್ ಯಾವಾಗ ಸ್ಟಾರ್ಟ್ ?
ಸಿನಿಮಾ 4 ತಿಂಗಳ ಶೆಡ್ಯೂಲ್​ನಲ್ಲಿ ಶೂಟಿಂಗ್ ಆಗಲಿದೆ. 2024ರ ಮೊದಲ ಆರು ತಿಂಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಲು ನಿರ್ಧರಿಸಲಾಗಿದೆ. ಕಾಂತಾರ -2 ಸಿನಿಮಾವನ್ನು 2024ರ ಕೊನೆಯಲ್ಲಿ ರಿಲೀಸ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Kirik Keerthi: I want to come back… ನೀವು ಜೊತೇಲಿರಿ ಅಷ್ಟು ಸಾಕು, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುವೆ- ಕಿರಿಕ್ ಕೀರ್ತಿ ಹೊಸ ಪೋಸ್ಟ್ ವೈರಲ್ !

Comments are closed.