Chanakya niti: ಈ 3 ವಿಷಯಗಳನ್ನು ಹೆಂಡತಿ ಪತಿಗೆ ಹೇಳುವುದಿಲ್ಲವಂತೆ! ಏನದು ಗೊತ್ತೇ?
Chanakya niti these 3 Secret which wife should not reveal to her husband
Chanakya Niti: ಆಚಾರ್ಯ ಚಾಣಕ್ಯರ ನೀತಿಯು (Chanakya Niti), ಸುಂದರ ಬದುಕು ಮತ್ತು ಯಶಸ್ಸಿನ ಜೀವನಕ್ಕೆ ದಾರಿ ತೋರಿಸುತ್ತದೆ. ಚಾಣಕ್ಯ ದೇಶ ಕಂಡ ಮಹಾನ್ ವಿದ್ವಾಂಸರಾಗಿದ್ದು, ಅವರ ನೀತಿ-ನಿಯಮಗಳು ನಮ್ಮ ಬದುಕಿಗೆ ಬೇಕಾದ ಎಲ್ಲಾ ಮೌಲ್ಯಗಳನ್ನು ಒದಗಿಸುತ್ತವೆ ಎಂದರೆ ತಪ್ಪಾಗಲಾರದು.
ಮುಖ್ಯವಾಗಿ ಗಂಡ ಹೆಂಡತಿ ಸಂಬಂಧದಲ್ಲಿ ಹಲವಾರು ಬಾರಿ ಸಣ್ಣ ಪುಟ್ಟ ವಿಚಾರಗಳು ಬಂದು ಹೋಗುತ್ತವೆ. ಆದರೆ ಪತ್ನಿಯಾದವಳು ತನ್ನ ಗಂಡನೊಂದಿಗೆ ಎಲ್ಲವನ್ನು ಹಂಚಿಕೊಳ್ಳುವುದು ಒಳಿತಲ್ಲ ಎನ್ನಲಾಗಿದೆ.
ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವಿನ ನಂಬಿಕೆಯ ಬಂಧವಾಗಿದೆ. ಗಂಡ ಹೆಂಡತಿ ಪರಸ್ಪರ ಏನನ್ನೂ ಮರೆಮಾಡುವುದಿಲ್ಲ. ತಮ್ಮ ಪತಿಯ ಮೇಲಿನ ನಂಬಿಕೆಯಿಂದ ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳುತ್ತಾರೆ. ಆದರೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ಚಾಣಕ್ಯ.
ದಾಂಪತ್ಯ ಜೀವನ ಸುಖಮಯವಾಗಿರಲು ಮತ್ತು ದೀರ್ಘ ಕಾಲ ನಡೆಯಲು ಪತಿ-ಪತ್ನಿಯರು ಕೆಲವು ವಿಷಯಗಳನ್ನು ತಮ್ಮಲ್ಲಿ ಮಾತ್ರ ಇಟ್ಟುಕೊಳ್ಳಬೇಕು ಅದನ್ನು ಎಂದೂ ತಮ್ಮ ಸಂಗಾತಿಗೆ ತಿಳಿಸಬಾರದು ಎಂದು ಚಾಣಕ್ಯ ತಮ್ಮ ನೀತಿಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಮದುವೆಯಾದ ಆರಂಭವದಲ್ಲಿ ಅವಳು ತನ್ನ ಮನೆಯ ಜನರ ರಹಸ್ಯಗಳನ್ನು ಗಂಡನ ಮುಂದೆ ಪತಿಯ ಮುಂದೆ ಬಿಚ್ಚಿಡುತ್ತಾಳೆ. ಆದರೆ ಅದನ್ನು ಮಾಡಬಾರದು.
ಇದರಿಂದ ಆಕೆ ಯಾವುದೇ ರಹಸ್ಯವನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಇದರಿಂದ ಪತಿ ಅರ್ಥಮಾಡಿಕೊಳ್ಳುತ್ತಾನೆ. ಇದರಿಂದಾಗಿ ಅವನು ತನ್ನ ಗೌಪ್ಯ ವಿಚಾರ ನಿಮಗೆ ಹೇಳಲು ಹಿಂಜರಿಯುತ್ತಾನೆ. ಕೆಲವೊಮ್ಮೆ ಪತಿಯು ಪತ್ನಿಯ, ಹೆತ್ತವರ ದೌರ್ಬಲ್ಯವನ್ನು ಬಳಸಬಹುದು. ಇದರಿಂದಾಗಿ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡುತ್ತದೆ.
ಇನ್ನು ಹೆಂಡತಿ ತಾನು ಸಂಪಾದಿಸಿದ ಕೂಡಿಟ್ಟ ಹಣವನ್ನು ಗುಟ್ಟಾಗಿ ಇರಿಸಿಕೊಳ್ಳುವುದು ಉತ್ತಮ. ಇದು ಆಪತ್ಕಾಲದಲ್ಲಿ ಕುಟುಂಬದ ಸಹಾಯಕ್ಕೆ ಬರಬಹುದು. ಒಂದು ವೇಳೆ ಗಂಡನಿಗೆ ವಿಷಯ ತಿಳಿದರೆ ಈ ಹಣವನ್ನು ಯಾವುದಾದರೂ ಸಣ್ಣಪುಟ್ಟ ಕೆಲಸಕ್ಕೆ ಬಳಸಿಕೊಳ್ಳಬಹುದು.
ಆಚಾರ್ಯ ಚಾಣಕ್ಯರು ಮಹಿಳೆಯರಿಗೆ ಮಾಡಿದ ದಾನದ ಬಗ್ಗೆ ತಪ್ಪಾಗಿಯೂ ತಮ್ಮ ಪತಿಗೆ ತಿಳಿಸಬೇಡಿ ಎಂದು ಸಲಹೆ ನೀಡುತ್ತಾರೆ. ಹೇಳಿದರೆ ದಾನದ ಲಾಭ ಕಡಿಮೆಯಾಗುತ್ತದೆ. ಇದರೊಂದಿಗೆ ಪತಿ-ಪತ್ನಿಯರ ನಡುವೆ ಖರ್ಚಿನ ವಿಚಾರದಲ್ಲಿ ಜಗಳವೂ ಉಂಟಾಗಿ ದಾನದ ಮಹತ್ವವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ.
ಇದನ್ನೂ ಓದಿ: ರೋಮಿಯೋ – ಜೂಲಿಯೆಟ್ ಕಾನೂನು ಭಾರತದಲ್ಲಿ ಜಾರಿಯಾಗುತ್ತಾ? ಏನಿದು ಹೊಸ ಕಾನೂನು?
Comments are closed.