Home Jobs MESCOM Jobs: ಮೆಸ್ಕಾಂ ನಲ್ಲಿ ಭರ್ಜರಿ ಉದ್ಯೋಗವಕಾಶ! 200 ಹುದ್ದೆಗಳು, ಇಲ್ಲಿದೆ ಸಂಪೂರ್ಣ ವಿವರ!

MESCOM Jobs: ಮೆಸ್ಕಾಂ ನಲ್ಲಿ ಭರ್ಜರಿ ಉದ್ಯೋಗವಕಾಶ! 200 ಹುದ್ದೆಗಳು, ಇಲ್ಲಿದೆ ಸಂಪೂರ್ಣ ವಿವರ!

MESCOM Jobs

Hindu neighbor gifts plot of land

Hindu neighbour gifts land to Muslim journalist

MESCOM jobs: ಉದ್ಯೋಗಾಕಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (Mangalore Electricity Supply Company Limited) ಖಾಲಿ ಇರುವ ಒಟ್ಟು 200 ಅಪ್ರೆಂಟಿಸ್ (Apprentice) ಹುದ್ದೆಗಳನ್ನು(MESCOM Jobs) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಹುದ್ದೆಯ ಮಾಹಿತಿ:
ಗ್ರಾಜುಯೇಟ್ ಅಪ್ರೆಂಟಿಸ್- 70 ಹುದ್ದೆಗಳು ಖಾಲಿಯಿದ್ದು, ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್- 65 ಖಾಲಿಯಿದ್ದು, ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್- 65 ಖಾಲಿಯಿದೆ. ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 19/08/2023 ಆರಂಭಿಕ ದಿನವಾಗಿದ್ದು, ಸೆಪ್ಟೆಂಬರ್ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

(MESCOM Recruitment 2023)ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಬಿಇ/ಬಿ.ಟೆಕ್ ವಿದ್ಯಾರ್ಹತೆ ಬೇಕಾಗಿದ್ದು, ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಡಿಪ್ಲೊಮಾ ಮುಗಿಸಿರಬೇಕು. ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಬಿಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ ಮುಗಿಸಿರಬೇಕು.

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ. ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಮಾಸಿಕ ₹ 9,000 ವೇತನ ಸಿಗಲಿದೆ. ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಮಾಸಿಕ ₹ 8,000 ವೇತನ ದೊರೆಯಲಿದೆ. ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಮಾಸಿಕ ₹ 9, 000ವೇತನ ಸಿಗಲಿದೆ.

ಇದನ್ನೂ ಓದಿ: ಸುಳ್ಯ: ಆರಂತೋಡು ಗ್ರಾಮದ ವಿಎ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ!