Home Jobs ITI ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ! 1060 ಹುದ್ದೆ, ಆ.31 ರೊಳಗೆ ಅರ್ಜಿ ಸಲ್ಲಿಸಿ.

ITI ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ! 1060 ಹುದ್ದೆ, ಆ.31 ರೊಳಗೆ ಅರ್ಜಿ ಸಲ್ಲಿಸಿ.

HAL recruitment notification

Hindu neighbor gifts plot of land

Hindu neighbour gifts land to Muslim journalist

HAL recruitment notification: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (HAL) ಲ್ಲಿ ಖಾಲಿ ಇರುವ ಅಪ್ರೆಂಟಿಸ್‌ ಟ್ರೈನಿಗಳ ನೇಮಕ ಮಾಡಲು ನೋಟಿಫಿಕೇಶನ್‌(HAL recruitment notification) ಬಿಡುಗಡೆ ಮಾಡಿದೆ. ಹುದ್ದೆಗಳ ಸಂಖ್ಯೆ, ವೇತನ ಇತ್ಯಾದಿ ಕುರಿತು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಬೆಂಗಳೂರಿನ ಹೆಚ್‌ಎಎಲ್‌ ಕೇಂದ್ರದಲ್ಲಿ ಹುದ್ದೆಗಳ ಭರ್ತಿ ನಡೆಯಲಿದೆ. ಒಟ್ಟು 1060 ಅಪ್ರೆಂಟಿಸ್‌ ಟ್ರೈನಿಗಳ ಹುದ್ದೆ ಖಾಲಿ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2023. ಶೇ.70 ಅಂಕವನ್ನು ಎಸ್‌ಎಸ್‌ಎಲ್‌ಸಿಯಲ್ಲೂ, ಐಟಿಐ ಟ್ರೇಡ್‌ನಲ್ಲಿ ಶೇ.30 ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ಮಾಡಿ, ಆಯ್ಕೆ ಮಾಡಲಾಗುವುದು.

ವಿದ್ಯಾರ್ಹತೆ: ಫಿಟ್ಟರ್‌, ಟರ್ನರ್‌, ಮಷಿನಿಸ್ಟ್‌, ಇಲೆಕ್ಟ್ರೀಷಿಯನ್‌, ವೆಲ್ಡರ್‌, ಕೊಪಾ, ಫೌಂಡ್ರಿ ಮ್ಯಾನ್‌, ಶೀಟ್‌ ಮೆಟಲ್‌ ವರ್ಕರ್‌ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಈಗಾಗಲೇ ಯಾವುದೇ ಅಪ್ರೆಂಟಿಸ್‌ ತರಬೇತಿ ಪಡೆದವರು ಹಾಗೂ ಒಂದು ವರ್ಷದ ಕಾರ್ಯಾನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಈ ಹುದ್ದೆಗೆ ಅರ್ಜಿ ಸಲ್ಲಿಸಿದವರ ಹೆಸರನ್ನು ಶಾರ್ಟ್‌ ಲಿಸ್ಟ್‌ ಮಾಡಿ ಅವರ ಹೆಸರನ್ನು ಹೆಚ್‌ಎಎಲ್‌ ವೆಬ್‌ಸೈಟ್, ಎಸ್‌ಎಂಎಸ್‌, ಇಮೇಲ್‌, ಫೋನ್‌ ಕರೆಗಳ ಮೂಲಕ ತಿಳಿಸಲಾಗುವುದು. ಆಧಾರ್‌ ಕಾರ್ಡ್‌, ಮೀಸಲಾತಿ ಕೋರಿದಲ್ಲಿ ಅಗತ್ಯದಾಖಲೆ, ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ ಕಾರ್ಡ್‌, ಐಟಿಐ ಸರ್ಟಿಫಿಕೇಟ್‌, ವೈಯಕ್ತಿಕ ವಿವರಗಳು ಬೇಕು. ಟಿಟಿಐ, ಹೆಚ್‌ಎಎಲ್‌, ಬೆಂಗಳೂರು ಇಲ್ಲಿಗೆ ತಾತ್ಕಾಲಿಕವಾಗಿ ಆಯ್ಕೆಯಾದವರು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಮಾಸಿಕ ಸ್ಟೈಫಂಡ್‌ ಆಯ್ಕೆಯಾದವರಿಗೆ ನೀಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್‌ಎಎಲ್‌, ಟೆಕ್ನಿಕಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. – www.hal-india.co.in / www.apprenticeshipindia.org/candidate-registration ವೆಬ್‌ಸೈಟ್‌ಗೆ ಹೋಗಿ ಕೂಡಾ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ತನ್ನ ಬೆಕ್ಕಿನ ಜತೆ ಪಕ್ಕದ ಮನೆಯ ನಾಯಿ ಆಟ, ನಾಯಿಯ ಮೇಲೆ ಆಸಿಡ್ ಚೆಲ್ಲಿ ವಿಕೃತಿ ಮೆರೆದ ಮಹಿಳೆ