Home latest Kodagu: ಆರೋಗ್ಯ ತಪಾಸಣೆಗೆ ಮನೆಗೆ ಹೋದ ಸಂದರ್ಭ ಆರೋಗ್ಯಾಧಿಕಾರಿ ಮೇಲೆ ಸಾಕು ನಾಯಿ ದಾಳಿ: ಮಾಲೀಕನ...

Kodagu: ಆರೋಗ್ಯ ತಪಾಸಣೆಗೆ ಮನೆಗೆ ಹೋದ ಸಂದರ್ಭ ಆರೋಗ್ಯಾಧಿಕಾರಿ ಮೇಲೆ ಸಾಕು ನಾಯಿ ದಾಳಿ: ಮಾಲೀಕನ ಮೇಲೆ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

Kodagu: ಕೊಡಗು (Kodagu)ಜಿಲ್ಲೆಯ ಮಡಿಕೇರಿ(Madikeri )ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ಬಾಣಂತಿಯನ್ನು ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ನಡೆದಿದೆ.

ಪಾರಾಣೆ ಕಮ್ಯುನಿಟಿ ಹೆಲ್ತ್ ಆಫೀಸರ್ ಕೆ‌ ಕೆ ಭವ್ಯ ಅವರು ಪಾರಾಣೆ ಗ್ರಾಮದ ಮಾಚಯ್ಯ ಎಂಬುವವರ ಮನೆಗೆ ತೆರಳಿದ್ದಾರೆ. ಮಡಿಕೇರಿ ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ಬಾಣಂತಿ ವಿಚಾರಿಸಲು ಹೋದ ಆರೋಗ್ಯ ಇಲಾಖೆ( Health Officer)ಸಿಬ್ಬಂದಿ ಮೇಲೆ ನಾಯಿ ದಾಳಿ (Dog Bite)ನಡೆಸಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ, ಡೆಲಿವರಿ ಆಗಿದ್ದ ಮಗು ಮತ್ತು ತಾಯಿಯ ಆರೋಗ್ಯ ವಿಚಾರಣೆಗೆ ಭವ್ಯ ಹೋಗಿದ್ದರು.

ಬಾಣಂತಿಯ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದ ಸಂದರ್ಭ ಭವ್ಯ ಅವರ ಮೇಲೆ ಏಕಾಏಕಿ ನಾಯಿ ದಾಳಿ ನಡೆಸಿದ್ದು, ಭವ್ಯ ಅವರ ದೇಹದ ಹಲವು ಭಾಗಗಳಿಗೆ ಬಲವಾಗಿ ನಾಯಿ ಕಚ್ಚಿದ್ದು, ಭವ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕರ ಮೇಲೆ ಸಾಕು ನಾಯಿ ದಾಳಿ ಮಾಡಿದ್ದಲ್ಲಿ ಮಾಲೀಕನಿಗೆ ನಾಯಿ ಕಚ್ಚಿದ ಆರೋಪದ ಮೇರೆಗೆ ಗಂಭೀರವಾದ ಗಾಯವಾಗಿದ್ದರೆ 6 ತಿಂಗಳಿನಿಂದ 10ವರ್ಷಗಳವರೆಗೂ ಶಿಕ್ಷೆ ವಿಧಿಸಬಹುದು. ಸದ್ಯ, ನಾಯಿ ಕಚ್ಚಿದ ವಿಚಾರ ತಿಳಿದು ನಾಪೋಕ್ಲು ಪೊಲೀಸ್ ಇಲಾಖೆ ಸಾಕುನಾಯಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ