Home latest Dharwad News: ಸ್ತಬ್ಧ ಹೃದಯ ಸ್ಮಶಾನದಲ್ಲಿ ಬಡಿಯಿತು: ವೈದ್ಯರು ಘೋಷಿಸಿದ್ದರೂ ಸಾವು ಗೆದ್ದ ಪುಟಾಣಿ !

Dharwad News: ಸ್ತಬ್ಧ ಹೃದಯ ಸ್ಮಶಾನದಲ್ಲಿ ಬಡಿಯಿತು: ವೈದ್ಯರು ಘೋಷಿಸಿದ್ದರೂ ಸಾವು ಗೆದ್ದ ಪುಟಾಣಿ !

Hindu neighbor gifts plot of land

Hindu neighbour gifts land to Muslim journalist

Boy from death bed : ಪವಾಡ ಅಂದರೆ ಇದೇ ಇರಬೇಕೇನೋ!! ಸಾವಿನ ದವಡೆಗೆ ಸಿಲುಕಿ ಪವಾಡ ಸದೃಢ ರೀತಿಯಲ್ಲಿ ಮಗುವೊಂದು( Boy from death bed)ಪಾರಾದ ಘಟನೆ ವರದಿಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಬಸಾಪುರದಲ್ಲಿ ಪವಾಡ ಸದೃಶ ರೀತಿಯಲ್ಲಿ ಮಗು ಪಾರಾದ ಘಟನೆ ನಡೆದಿದೆ.

ಬಸಾಪೂರ ಗ್ರಾಮದ ಬಸವರಾಜ ಪೂಜಾರ ಎಂಬುವವರ ಒಂದೂವರೆ ವರ್ಷದ ಮಗು ಆಕಾಶ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳಿಂದ ವೈದ್ಯರು ಮಗುವಿನ ಆರೈಕೆ ಮಾಡಿದ ವೈದ್ಯರು(Doctors) ಗುರುವಾರ ಸಂಜೆ ಮಗುವಿನ ಹೃದಯ ಬಡಿತ (Child Heart Beat)ಕಡಿಮೆ ಪ್ರಮಾಣದಲ್ಲಿದೆ ಎಂದು ತಿಳಿಸಿದ್ದಾರೆ. ಗುರುವಾರ ಮಗುವಿನ ಅನಾರೋಗ್ಯದಲ್ಲಿ ತೀವ್ರ ಏರಿಳಿತ ಕಂಡು ಬಂದು ‘ಮಗುವಿನ ಹೃದಯ ಬಡಿತ ನಿಂತಿದ್ದು, ಮಗು ಬದುಕುಳಿದಿಲ್ಲ’ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ತಮ್ಮ ಅಸಹಾಯಕತೆಯನ್ನು ಹೊರ ಹಾಕಿದ್ದರು. ಗುರುವಾರ ಸಂಜೆ 7.3೦ರ ವೇಳೆಗೆ ಮಗು ಮೃತಪಟ್ಟಿದೆ ಎಂದು ಹೇಳಿ ಪಾಲಕರಿಂದ ಸಹಿ ಪಡೆದು ಮಗುವಿನ ದೇಹವನ್ನು ಹಸ್ತಾಂತರ ಮಾಡಿದ್ದರಂತೆ.

ಹೃದಯ ಸಮಸ್ಯೆಯಿಂದ(Heart Problems)ಮೃತಪಟ್ಟಿದೆ(Death )ಎಂದು ವೈದ್ಯರೇ ಘೋಷಿಸಿದ ಮಗು ಅಂತ್ಯಕ್ರಿಯೆ ವೇಳೆ ಬದುಕುಳಿದ ಅಚ್ಚರಿಯ ಘಟನೆ ನಡೆದಿದೆ. ಜವರಾಯನಿಗೂ ಕೂಡ ಈ ಮಗುವಿನ ಮೇಲೆ ಅನುಕಂಪವಾಯಿತೇನೋ!! ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆದಿದ್ದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎನ್ನುವುದನ್ನು ವೈದ್ಯರು ಘೋಷಿಸಿದ ಬಳಿಕ ಮಗುವಿನ ಕುಟುಂಬಸ್ಥರು ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನಡೆಸಿ ಇನ್ನೇನು ಮಣ್ಣು ಮಾಡಬೇಕು ಎನ್ನುವಷ್ಟರಲ್ಲಿ ಮಗುವಿನ ದೇಹದಲ್ಲಿ ಉಸಿರಾಟ ಕಂಡುಬಂದಿದೆ. ಹೌದು!! ಪೋಷಕರು ಅಂತಿಮ ವಿಧಿ ವಿಧಾನಗಳನ್ನು ನಡೆಸುತ್ತಾ ನೀರು ಹಾಕುವಾಗ ಮಗು ತಕ್ಷಣವೇ ಉಸಿರಾಟ ಆರಂಭಿಸಿ, ಕೈಕಾಲು ಬಡಿದುಕೊಂಡಿದ್ದು, ಸತ್ತಿದೆ ಎಂದುಕೊಂಡ ಮಗು ಉಸಿರಾಡಿಸುತ್ತಿರುವುದು ಎಲ್ಲರಿಗೂ ಅಚ್ಚರಿಯ ಜೊತೆಗೆ ಸಂತಸ ಮೂಡಿಸಿದೆ. ಒಟ್ಟಿನಲ್ಲಿ ಶೋಕ ಸಾಗರದಲ್ಲಿ ಮುಳುಗಿದ್ದ ಕುಟುಂಬಕ್ಕೆ ಮಗುವಿನ ಜೀವ ಮರಳಿ ಬಂದದ್ದು, ಅತೀವ ಆನಂದಕ್ಕೆ ಕಾರಣವಾಗಿದೆ.