Thalapathy Vijay: ನಟ ವಿಜಯ್ ಬಾಳಲ್ಲಿ ಇನ್ನೊಬ್ಬ ನಟಿಯ ಎಂಟ್ರಿ? ಡಿವೋರ್ಸ್ ವಿಷಯ ನಿಜನಾ??

Cinema news Kollywood news actor thalapathy Vijay with Trisha from Norway goes viral

Share the Article

Thalapathy Vijay: ತಮಿಳಿನ ಬಹುನಿರೀಕ್ಷಿತ ಸಿನಿಮಾ ‘ಲಿಯೋ’ದಲ್ಲಿ ದಳಪತಿ ವಿಜಯ್ (Thalapathy Vijay) ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ತ್ರಿಶಾ ಕೃಷ್ಣನ್ ನಟಿಸಿದ್ದಾರೆ. ಇದು ಪ್ಯಾನ್-ಇಂಡಿಯನ್ ಸಿನಿಮಾ ಆಗಿದೆ. 15 ವರ್ಷಗಳ ಗ್ಯಾಪ್ ಬಳಿಕ ವಿಜಯ್ ಮತ್ತು ತ್ರಿಶಾ ಚಿತ್ರದಲ್ಲಿ ಒಂದಾಗಿದ್ದಾರೆ. ಈ ಮಧ್ಯೆ ವಿಜಯ್ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದಾರೆ. ತ್ರಿಶಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ‌ ಎಂಬ ಸುದ್ದಿ ಹರಿದಾಡುತ್ತಿದೆ.

ತ್ರಿಶಾ ಮತ್ತು ವಿಜಯ್ ಶಾಪಿಂಗ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರಿಬ್ಬರೂ ನಾರ್ವೆಯಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಲಿಯೋ ಚಿತ್ರದ ಚಿತ್ರೀಕರಣ ಮುಗಿಸಿದ ವಿಜಯ್ ಸ್ವಲ್ಪ ವಿರಾಮಕ್ಕೆಂದು ನಾರ್ವೆಗೆ ಹೋಗಿರುವುದು ತಿಳಿದಿತ್ತು. ನಾರ್ವೆಯಲ್ಲಿ ಈ ಜೋಡಿ ಒಟ್ಟಿಗೆ ಶಾಪಿಂಗ್ ಮಾಡುತ್ತಿರುವ ಫೋಟೊ ವೈರಲ್ ಆಗುತ್ತಿದಂತೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಅಲ್ಲದೆ, ತ್ರಿಶಾ ಯುರೋಪ್ ಪ್ರವಾಸದಲ್ಲಿದ್ದ ವೇಳೆ ಯಾರದ್ದೋ ಕೈಗಳನ್ನು ಹಿಡಿದಿರುವುದನ್ನು ಈ ಹಿಂದೆ ಫೋಟೊ ಪೋಸ್ಟ್ ಮಾಡಿಕೊಂಡಿದ್ದರು. ಕೈ ಹಿಡಿದಿರುವ ವ್ಯಕ್ತಿ ವಿಜಯ್ ಅವರೇ ಇರಬಹುದು ಎನ್ನಲಾಗುತ್ತಿದೆ. ಅಂದಹಾಗೆ 1999ರಲ್ಲಿ ನಟ ವಿಜಯ್ ಹಾಗೂ ಸಂಗೀತಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇತ್ತೀಚೆಗೆ ಪತ್ನಿ ಸಂಗೀತಾ ಪತಿಯಿಂದ ದೂರಾಗಿ ಇಬ್ಬರು ಮಕ್ಕಳ ಜತೆ ಲಂಡನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Actor Upendra: ‘ಬುದ್ಧಿವಂತ’ ನಿಗೆ ಹೈಕೋರ್ಟ್ ನಿಂದ ರಿಲೀಫ್ ! FIR ಗೆ ತಡೆ!!!

Comments are closed.