Saniya Iyer: ಬಿಗ್ ಬಾಸ್ ಸಾನ್ಯ ಇನ್ನು ಮುಂದೆ ದೊಡ್ಡ ಪರದೆಮೇಲೆ! ಪುಟ್ಟಗೌರಿಯ ಹೀರೋ ಈತನೇ ನೋಡಿ!!!

Sandalwood news Saniya Iyer enters Kannada cinema industry

Saniya Iyer: ‘ಪುಟ್ಟಗೌರಿ ಮದುವೆ’ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡು, ನಂತರ ವಿವಿಧ ರಂಗಗಳಲ್ಲಿ ತನ್ನ ಹವಾ ಎಬ್ಬಿಸಿದ ಸಾನ್ಯಾ ಅಯ್ಯರ್ (Saniya Iyer) , ನಂತರ ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಿ ಜನಪ್ರಿಯ ಸ್ಪರ್ಧಿಯಾಗಿ ಹೊರಹೊಮ್ಮಿದರು. ಅಲ್ಲದೆ, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿದರು.

 

Saniya Iyer

ಇದೀಗ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಅವರ ಪುತ್ರ ಸಮರ್ಜಿತ್ ಲಂಕೇಶ್ ನಟಿಸುತ್ತಿದ್ದು, ಇವರೊಂದಿಗೆ ನಟಿ ಸಾನ್ಯಾ ಅಯ್ಯರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ದೊರೆತಿದೆ.

ಹೌದು, ಸ್ಯಾಂಡಲ್‌ವುಡ್‌ನಲ್ಲಿ ನಟನೆ ಮತ್ತು ನಿರ್ದೇಶನದ ಮೂಲಕ ಗುರುತಿಸಿಕೊಂಡಿರುವ ಇಂದ್ರಜಿತ್‌ ಲಂಕೇಶ್‌, ಈಗಲೂ ತೆರೆಮರೆಯಲ್ಲಿಯೇ ಬಣ್ಣದ ಲೋಕದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಇದೇ ಇಂದ್ರಜಿತ್‌ ಲಂಕೇಶ್‌ ಪುತ್ರ ಸಹ ಸಿನಿಮಾ ಕ್ಷೇತ್ರಕ್ಕೆ ಬರುವ ತಯಾರಿಯಲ್ಲಿದ್ದಾರೆ.

Saniya Iyer

ಮುಖ್ಯವಾಗಿ ಇಂದ್ರಜಿತ್‌ ಲಂಕೇಶ್‌ ಪುತ್ರನ ಜೊತೆಗೆ ಚಿತ್ರರಂಗಕ್ಕೆ ಸಾನ್ಯಾ ಅವರ ಪ್ರವೇಶದಿಂದ ನಿರೀಕ್ಷೆಗಳು ಹೆಚ್ಚುತ್ತಿದ್ದು, ಒಳ್ಳೆಯ ಚಿತ್ರತಂಡದೊಂದಿಗೆ ಅವರು ಲಾಂಚ್ ಆಗುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸೆಪ್ಟೆಂಬರ್ 4ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಕಾಯಲಾಗುತ್ತಿದೆ.

ಇನ್ನು ವಿದ್ಯಾಭ್ಯಾಸ ಮುಗಿಸಿ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಸಿದ್ಧತೆ ಮಾಡಿಕೊಂಡಿರೋ ಸಮರ್ಜಿತ್ ಲಂಕೇಶ್, ಸಿನಿಮಾಕ್ಕೆ ಬೇಕಾಗುವ ಎಲ್ಲವನ್ನೂ ಕರಗತಗೊಳಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸಿನಿಮಾರಂಗಕ್ಕೆ ಕಾಲಿಡುವ ಮುನ್ನವೇ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಮರ್ಜಿತ್ ಲಂಕೇಶ್ ಬಿಜಿಯಾಗಿದ್ದಾರೆ. ನೂಯಾರ್ಕ್‌ನಲ್ಲಿ ನಟನಾ ತರಬೇತಿ ಪಡೆದು ನಟನೆಯಲ್ಲಿಯೇ ಪದವಿ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಿಮ್ಮ ಸ್ಥನ ಕೂಡಾ ಈ ರೀತಿ ಇದೆಯಾ ? ಹಾಗಿದ್ರೆ ನಿಮಗೆ ಕ್ಯಾನ್ಸರ್ ಬರೋ ಸಾಧ್ಯತೆ ಅತ್ಯಧಿಕವಂತೆ !

Comments are closed.