ಶಾಲಾ ಶಿಕ್ಷಕರಿಗೂ ಸಮವಸ್ತ್ರ: ಮಕ್ಕಳಂತೆ ಶಿಕ್ಷಕರೂ ಸಮವಸ್ತ್ರದಲ್ಲಿ ಬರೋದು ಎಲ್ಲಿ ?
Chhattisgarh news teachers comes dressed as uniform like school children in this school
School Teacher: ಮಕ್ಕಳೊಂದಿಗಿನ ತನ್ನ ಒಡನಾಟವನ್ನು ಸುಧಾರಿಸಲು ಛತ್ತೀಸ್‌ಗಢದ ರಾಯ್‌ಪುರ್‌ದಲ್ಲಿರುವ ಗೋಕುಲರಾಮ್ ವರ್ಮಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೋರ್ವರು (School Teacher) ಹೊಸ ಪ್ರಯತ್ನ ಒಂದನ್ನು ಮಾಡಿದ್ದಾರೆ.
ಹೌದು, ಗೋಕುಲರಾಮ್ ವರ್ಮಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಾಹ್ನವಿ (Jahnavi) ಅವರು ಪ್ರತಿ ಶನಿವಾರ ಮಕ್ಕಳಂತೆ ಶಾಲಾ ಸಮವಸ್ತ್ರ ಧರಿಸಿ ಬಂದು ಪಾಠ ಮಾಡುತ್ತಾರೆ. ದೇಶದಲ್ಲಿ ಇಂಥದ್ದೊಂದು ಅಪರೂಪದ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಸಮವಸ್ತ್ರವನ್ನು ಚೆನ್ನಾಗಿ ಮತ್ತು ಸರಿಯಾಗಿ ಧರಿಸುವುದನ್ನು ಪ್ರೇರೇಪಿಸಲು, ಮಕ್ಕಳೊಂದಿಗಿನ ತನ್ನ ಒಡನಾಟವನ್ನು ಸುಧಾರಿಸಲು ಶಿಕ್ಷಕಿ ಜಾಹ್ನವಿ ಯದು ಎಂಬುವವರು ಪ್ರತಿ ಶನಿವಾರ ಸಮವಸ್ತ್ರ ಧರಿಸಿಯೇ ಶಾಲೆಗೆ ಬರುತ್ತಾರೆ.
ಈ ಬಗ್ಗೆ ಮಾತನಾಡಿರುವ ಶಿಕ್ಷಕಿ ಜಾಹ್ನವಿ (Jahnavi) ‘ಹಲವು ಬಡ ವಿದ್ಯಾರ್ಥಿಗಳು ಶಾಲೆಗಳಿಗೆ ಸಾಮಾನ್ಯವಾಗಿ ಕೊಳೆಯಾದ ಸಮವಸ್ತ್ರ ಧರಿಸಿ ಬರುತ್ತಾರೆ. ಇದನ್ನು ಸರಿಪಡಿಸಲು ಸೂಕ್ಷ್ಮ ಮತ್ತು ಸ್ನೇಹಪರ ಪರಿಹಾರ ಕಾಣಲು ಈ ಹೊಸ ಪ್ರಯತ್ನ ಎಂದಿದ್ದಾರೆ. ಮಕ್ಕಳು ಉತ್ತಮವಾದ ಸಮವಸ್ತ್ರ (Uniform) ಧರಿಸುವುದನ್ನು ಪ್ರೇರೇಪಿಸಲು ಈ ಶೈಕ್ಷಣಿಕ ವರ್ಷದಿಂದ ಪ್ರತಿ ಶನಿವಾರ ಸಮವಸ್ತ್ರ ಧರಿಸಿ ಶಾಲೆಗೆ ಬರಲು ಪ್ರಾರಂಭಿಸಿದ್ದೇನೆ’ ಎಂದರು.
ಮೊದಲ ಬಾರಿ ನಾನು ಸಮವಸ್ತ್ರ ಧರಿಸಿ ಬಂದ ದಿನ ಮರೆಯಲು ಸಾಧ್ಯವಿಲ್ಲ. ಮಕ್ಕಳು ಆ ದಿನ ರೋಮಾಂಚನಗೊಂಡು ನನ್ನನ್ನು ತಬ್ಬಿಕೊಂಡರು. ನಾವೆಲ್ಲ ಸೇರಿ ಸರಿಯಾಗಿ ಸಮವಸ್ತ್ರ ಧರಿಸಿದರೆ ಎಷ್ಟು ಚೆನ್ನಾಗಿರುತ್ತದೆ ನೋಡಿ ಎಂದೆ. ಅಂದಿನಿಂದ ಮಕ್ಕಳಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆಗಳಾಗಿದೆ. ಮಕ್ಕಳು ಈಗ ನನ್ನನ್ನು ಅವರ ಸ್ನೇಹಿತೆಯಂತೆ ಕಾಣುತ್ತಾರೆ ಎಂದು ಜಾಹ್ನವಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಶಾಲೆಯ ಮುಖ್ಯೋಪಾಧ್ಯಾಯ ಎಂ.ಗುರುನಾಥ್ (M. Gurunath) ಜಾಹ್ನವಿ ಟೀಚರ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಮಕ್ಕಳಲ್ಲೀಗ ಆತ್ಮವಿಶ್ವಾಸ ಹೆಚ್ಚಾಗಿದೆ. ಓದುವಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದಿದ್ದಾರೆ. ಇನ್ನು ಸ್ಥಳೀಯ ವಾರ್ಡ್ ಕಾರ್ಪೋರೇಟರ್ ಭೋಲಾರಾಮ್ ಸಾಹು ಕೂಡ ಜಾಹ್ನವಿ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಇಂತಹ ಬದಲಾವಣೆ ಮತ್ತು ಬೆಳವಣಿಗೆ ಯನ್ನು ಪೋಷಕರು ಕೂಡ ಮೆಚ್ಚಿದ್ದಾರೆ.
ಇದನ್ನೂ ಓದಿ: ಇನ್ನೊಂದು ಮೆಡಿಕಲ್ ಕಾಲೇಜಿನಲ್ಲಿ ಉಡುಪಿ ರೀತಿ ಟಾಯ್ಲೆಟ್‌ನಲ್ಲಿ ವಿಡಿಯೋ: ಮುಸ್ಲಿಂ ವಿದ್ಯಾರ್ಥಿ- ವಿದ್ಯಾರ್ಥಿನಿ ಬಂಧನ
Comments are closed.