Home Business Interest Rates Hike: ಗ್ರಾಹಕರೇ ಇನ್ನು ಮುಂದೆ ಕಾಂಚಾಣ ನಿಮ್ಮ ಕೈಯಲ್ಲಿ! ಎಫ್‌ಡಿ ಬಡ್ಡಿ ದರ...

Interest Rates Hike: ಗ್ರಾಹಕರೇ ಇನ್ನು ಮುಂದೆ ಕಾಂಚಾಣ ನಿಮ್ಮ ಕೈಯಲ್ಲಿ! ಎಫ್‌ಡಿ ಬಡ್ಡಿ ದರ ಹೆಚ್ಚಳ!!

Interest Rates Hike
Image source: The economic times

Hindu neighbor gifts plot of land

Hindu neighbour gifts land to Muslim journalist

Interest Rates Hike: ನಾವು ದುಡಿಮೆಯ ಒಂದು ಪಾಲು ಉಳಿತಾಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಕೆಲವರಿಗೆ ಠೇವಣಿಗಳ ಹೇಗೆ ಎಲ್ಲಿ ಇಡಬೇಕು , ಎಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎನ್ನುವುದು ತಿಳಿದಿಲ್ಲ. ಇದೀಗ ನಿಮ್ಮ ಗ್ರಾಹಕರು ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಹೆಚ್ಚಿನ ಬಡ್ಡಿದರಗಳ (Interest Rates Hike) ಲಾಭವನ್ನು ಪಡೆಯಬಹುದಾಗಿದೆ.

ಹೌದು, ಸಣ್ಣ ಹಣಕಾಸು ಬ್ಯಾಂಕ್‌ಗಳು ನೀಡುವ ಎಫ್‌ಡಿ ದರಗಳು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ನಂತಹ ಅನೇಕ ಹೂಡಿಕೆ ಯೋಜನೆಗಳಿಗಿಂತ ಹೆಚ್ಚು ಬಡ್ಡಿ ಇಲ್ಲಿ ಪಡೆಯಬಹುದು ಪಡೆಯಬಹುದು.

ಮುಖ್ಯವಾಗಿ ಗ್ರಾಹಕರು ಯೂನಿಟಿ ಮತ್ತು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳಲ್ಲಿ FD ಗಳ ಮೇಲೆ ಶೇಕಡಾ 9 ಕ್ಕಿಂತ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಳ ಸಾಮಾನ್ಯ ಗ್ರಾಹಕರಿಗೆ , ಇದು 4.5% ರಿಂದ 9% ರವರೆಗಿನ ಬಡ್ಡಿದರಗಳನ್ನು ನೀಡುತ್ತದೆ. ಇದು ಪ್ರಸ್ತುತ ಹಿರಿಯ ನಾಗರಿಕರಿಗೆ 1001 ಸತತ ದಿನಗಳವರೆಗೆ ಹೂಡಿಕೆ ಮಾಡಿದ FD ಗಳ ಮೇಲೆ ವಾರ್ಷಿಕ 9.5% ಬಡ್ಡಿದರವನ್ನು ನೀಡುತ್ತದೆ.

ಹೂಡಿಕೆದಾರರು ಅದೇ ನಿಯಮಗಳಿಗೆ 9% ಪಡೆಯುತ್ತಾರೆ. ಏಳು ದಿನಗಳಿಂದ 10 ವರ್ಷಗಳವರೆಗೆ ಆಗುವ ಠೇವಣಿಗಳ ಮೇಲೆ ಹಿರಿಯ ನಾಗರಿಕರು 4.5% ರಿಂದ 9.5% ವರೆಗಿನ ಬಡ್ಡಿದರಗಳನ್ನು ಪಡೆಯುತ್ತಾರೆ. ಠೇವಣಿ ಬಡ್ಡಿ ದರವು ಜೂನ್ 14, 2023 ರಿಂದ ಜಾರಿಗೆ ಬರಲಿದೆ. 1001 ದಿನಗಳ ಅವಧಿಗೆ ಗರಿಷ್ಠ ಬಡ್ಡಿ ದರವು 9% ಆಗಿದೆ.

ಇನ್ನು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಈಗ ಸಾಮಾನ್ಯ ಗ್ರಾಹಕರಿಗೆ FD ಗಳ ಮೇಲಿನ ಬಡ್ಡಿದರಗಳನ್ನು 4% ರಿಂದ 9.1% ವರೆಗೆ ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ನೀಡುತ್ತದೆ.

ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಹಿರಿಯ ನಾಗರಿಕರು 4.5% ರಿಂದ 9.6% ವರೆಗೆ ಬಡ್ಡಿದರಗಳನ್ನು ಪಡೆಯುತ್ತಾರೆ. ಐದು ವರ್ಷಗಳ ಅವಧಿಗೆ ಗರಿಷ್ಠ ಬಡ್ಡಿ ದರವು 9.1% ಆಗಿದೆ. ಈ ದರಗಳು 5ನೇ ಜುಲೈ 2023 ರಿಂದ ಅನ್ವಯವಾಗಿವೆ.

ಸಾಮಾನ್ಯ ಗ್ರಾಹಕರು ಈಗ 5 ವರ್ಷಗಳ ಠೇವಣಿಗಳ ಮೇಲೆ 9.10% ಬಡ್ಡಿದರವನ್ನು ಪಡೆಯಬಹುದು. ಹಿರಿಯ ನಾಗರಿಕರು 9.60% ಬಡ್ಡಿಯನ್ನು ಪಡೆಯಬಹುದು ಎಂದು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮಾಹಿತಿ ನೀಡಿದೆ.

ಇದನ್ನೂ ಓದಿ: Good News: ಹೊಸ ಬ್ಯುಸಿನೆಸ್‌ ಆರಂಭಿಸೋಕೆ ಸರ್ಕಾರ ಕೊಡಲಿದೆ 25 ಲಕ್ಷ ಬಂಡವಾಳ! ಇಲ್ಲಿದೆ ಫುಲ್ ಡಿಟೇಲ್ಸ್