Rice Prices Rise: ಗೋಧಿ, ಅಕ್ಕಿ ಬೆಲೆಯ ಕುರಿತು ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ! ಬೆಲೆ ಏರಿಕೆಯೋ? ಇಳಿಕೆಯೋ?

Rice price hike inflation sale of more rice wheat in market Central Government moves to control prices

Rice Prices hike: ಈ ಹಿಂದೆ ಟೊಮೆಟೋ ಬೆಲೆ (tomato price) ಭಾರೀ ಏರಿಕೆಯಾಗಿತ್ತು. ಇದೀಗ ಗೋಧಿ ಹಾಗೂ ಅಕ್ಕಿ (Rice Prices hike) ದರಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ. ಸದ್ಯ ಈ ಎರಡೂ ಆಹಾರ ಧಾನ್ಯಗಳ ಬೆಲೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮುಕ್ತ ಮಾರುಕಟ್ಟೆಗೆ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿಯ ಬೆಲೆಯನ್ನು ಇಳಿಸಿ ಕೆ.ಜಿಗೆ 29 ರೂಪಾಯಿಯಂತೆ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಗೋಧಿ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆಯ ಕುರಿತು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇಕಡಾ 6.77 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 7.37 ರಷ್ಟು ಏರಿಕೆಯಾಗಿದೆ. ಅದೇ ರೀತಿ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ 10.63 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇ 11.12ರಷ್ಟು ಏರಿಕೆಯಾಗಿದೆ.

ಸರ್ಕಾರವು ನೀಡಿದ ಒಟ್ಟು 5 ಲಕ್ಷ ಟನ್ ಅಕ್ಕಿಯಲ್ಲಿ ಕೇವಲ 0.38 ಪ್ರತಿಶತದಷ್ಟು (19,000 ಟನ್‌ಗಳು) ಅಕ್ಕಿಯನ್ನು ಮಾರಾಟ ಮಾಡಲಾಗಿದೆ. ಒಎಂಎಸ್‌ಎಸ್‌ ಮೂಲಕ ನೀಡಲಾಗುವ ಒಟ್ಟು 55 ಪ್ರತಿಶತದಷ್ಟು ಗೋಧಿಯನ್ನು ಮಾರಾಟ ಮಾಡಲಾಗಿದೆ. ಜೂನ್ 23 ರಂದು ನೀಡಲಾದ 15 ಲಕ್ಷ ಟನ್ ಗೋಧಿಯಲ್ಲಿ ಇದುವರೆಗೆ ನಡೆದ ಏಳು ಇ-ಹರಾಜುಗಳಲ್ಲಿ 8.2 ಲಕ್ಷ ಟನ್ ಮಾರಾಟವಾಗಿದೆ.

ಇದನ್ನೂ ಓದಿ: ಬೆಳ್ಳಾರೆ ಪೊಲೀಸ್ ಠಾಣಾ ಎಸೈ ಸುಹಾಸ್ ಆರ್ ವರ್ಗಾವಣೆ ,ನೂತನ ಎಸೈ ಆಗಿ ಸಂತೋಷ್ ಬಿ.ಪಿ

Comments are closed.