Home Entertainment Olle Huduga Pratham: ದಿನಕ್ಕೆ 10 ಗಂಟೆ ನಿದ್ದೆ ಮತ್ತು ಸುರಕ್ಷತಾ ಲೈಂಗಿಕತೆ ಮಾಡಿ: ಹೃದಯಾಘಾತ...

Olle Huduga Pratham: ದಿನಕ್ಕೆ 10 ಗಂಟೆ ನಿದ್ದೆ ಮತ್ತು ಸುರಕ್ಷತಾ ಲೈಂಗಿಕತೆ ಮಾಡಿ: ಹೃದಯಾಘಾತ ತಡೆಗೆ ಪ್ರಥಮ್ ನೀಡಿದ ಒಳ್ಳೆ ಸಲಹೆ !

Image Credit Source: News bugs

Hindu neighbor gifts plot of land

Hindu neighbour gifts land to Muslim journalist

Olle Huduga pratham: ಬಿಗ್‌ ಬಾಸ್‌ ವಿನ್ನರ್‌ ಒಳ್ಳೆ ಹುಡುಗ ಪ್ರಥಮ್‌ (Olle Huduga pratham) , ಜಿಮ್‌-ಡಯಟ್‌ ಎನ್ನುವವರಿಗೆ ಸಲಹೆ ನೀಡಿ ಟ್ವೀಟ್‌ ಮಾಡಿರುವ ವಿಚಾರ ಇದೀಗ ಸಕತ್ ಸುದ್ದಿಯಾಗಿದೆ. ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನೊಂದಿಗೆ ಮತ್ತೊಮ್ಮೆ ಎಲ್ಲರಿಗೂ ಜಿಮ್‌-ಡಯಟ್‌ ಎನ್ನುವ ವಿಚಾರದ ಮೇಲೆ ಅನುಮಾನ ಬರಲು ಆರಂಭವಾಗಿದೆ. ಈ ವಿಚಾರದ ಬಗ್ಗೆ ಪ್ರಥಮ್ ಲಾಂಗ್ ಕಾಮೆಂಟ್ ನೀಡಿದ್ದಾರೆ ನೋಡಿ.

ಪ್ರಥಮ್ ಪ್ರಕಾರ ಸ್ಪಂದನ ಅಗಲುವಿಕೆ ‘ನಮಗೆ ಇಷ್ಟು ದುಃಖವಾಗಿದೆ. ಇನ್ನು ವಿಜಯಣ್ಣರಿಗೆ ಹೇಗಾಗಿರಬೇಡ? ಇವತ್ತಿಗೂ ನನಗೆ ಸ್ಫೂರ್ತಿದಾಯಕ ದಂಪತಿಗಳಲ್ಲಿ ಇವರೂ ಕೂಡ. ಮತ್ತೆ ಇನ್ಯಾವಗಲೂ ಈ ರೀತಿ ನೋಡೋಕಾಗಲ್ಲ ಅನ್ನೋದನ್ನ ನೆನೆಸಿಕೊಂಡರೆ ತೀವ್ರ ಬೇಸರವಾಗುತ್ತದೆ. ನಿಮ್ಮ ಆತ್ಮಕ್ಕೆ ಈಶ್ವರ ಮುಕ್ತಿ ನೀಡಲಿ..ನಮ್ಮ ವಿಜಯ್_ರಾಗಣ್ಣ ನಿಗೆ ದುಃಖ ತಡೆದುಕೊಳ್ಳೋ ಶಕ್ತಿ ಚಾಮುಂಡೇಶ್ವರಿ ಕರುಣಿಸಲಿ’ ಎಂದು ವಿಜಯ್‌ ರಾಘವೇಂದ್ರ ದಂಪತಿಗಳ ಜೊತೆಗಿನ ಫೋಟೋವನ್ನು ಪ್ರಥಮ್‌ ಹಂಚಿಕೊಂಡಿದ್ದಾರೆ.

ಅದರ ಬೆನ್ನಲ್ಲಿಯೇ ಸಲಹೆ ಎನ್ನುವ ರೀತಿಯಲ್ಲಿ ಪ್ರಥಮ್‌ ಇನ್ನೊಂದು ಪೋಸ್ಟ್‌ ಮಾಡಿದ್ದಾರೆ. ದಯವಿಟ್ಟು ‘ಬೇಗ ಸ್ಲಿಮ್‌ ಆಗ್ಬೇಕು ಅಂತ ಅತಿಯಾಗಿ ಜಿಮ್‌ ಹೋದ್ರೆ ಹೃದಯ ಡಮಾರ್ ಅನ್ನಬಹುದು. ಚೆನ್ನಾಗಿ ವಾಕ್‌ ಮಾಡಿ. ವ್ಯಾಯಾಮ ಮಾಡಿ. ನಿದ್ರೆ ಸರಿಯಾಗಿ ಮಾಡಿ. ಸಾಧ್ಯವಾದಷ್ಟು ಮನೆ ಊಟ ಸೇವಿಸಿ 10 ಗಂಟೆ ನಿದ್ರೆ ಮಾಡಿ; ಮನಸಿನ ಆರೋಗ್ಯಕ್ಕೆ ಧ್ಯಾನ ಮಾಡಿ. ಸುಮ್ನೆ ಅತಿಯಾದ ಡಯಟ್‌ ಬೇಡ. ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಅದರ ಬೆನ್ನಲ್ಲಿಯೇ ಮತ್ತೊಂದು ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನಾನು ಜನರಿಗೆ ಒಳ್ಳೇದನ್ನೇ ಹೇಳೋದು. ಜಾಸ್ತಿ ನೀರು ಕುಡಿಯಿರಿ. ನಿದ್ರೆ ಮಾಡಿ. ಮದುವೆಯಾಗಿದ್ರೆ ಆರೋಗ್ಯಕರ ಲೈಂಗಿಕ ಕ್ರಿಯೆ ಮಾಡಿ. ಎಣ್ಣೆ ಪದಾರ್ಥ ಹೆಚ್ಚಾಗಿ ತಿನ್ನಬೇಡಿ. ಇದಿಷ್ಟು ಮಾಡಿದ್ರೆ ಆರೋಗ್ಯವಂತರಾಗಿ ಚೆನ್ನಾಗಿರ್ತೀರಾ. ಫಿಟ್‌ ಆಗಿ ಇರ್ಬೇಕು ಅಂತ ಪ್ರೋಟೀನ್ಸ್‌ ಕಾಸ್ಟ್ಲಿ ಆಹಾರ ವಿಧಾನ ಯಾವುದು ಬೇಡ…ಸುಮ್ನೆ ಯಾರದೋ ಬಾಡಿ ನೋಡ್ಕೊಂಡು ನಾನು ಆಗ್ತೀನಿ ಅಂತಾ ಹಗಲು ಕನಸು ಕಂಡು, ನಿಮ್ಮ ಆಹಾರ ಪ್ರಕ್ರಿಯೆ ಬದಲಿಸಿಕೊಳ್ಳಬೇಡಿ…ನನ್ನ ಮಾತನ್ನ ಕೇಳಿ…; ಆರೋಗ್ಯವಂತರಾಗಿ ಇರ್ತೀರಾ.. ಅತೀಯಾದ ಎನರ್ಜಿ ಡ್ರಿಂಕ್‌, ಪ್ರೋಟೀನ್ಸ್‌ ಅಂತ ಹೋದ್ರೆ ಸತ್ಯವಾಗಲು ನಿಮಗೆ ಕಷ್ಟ’ ಎಂದು ಬರೆದುಕೊಂಡಿದ್ದಾರೆ.

ಆದರೆ ಪ್ರಥಮ್‌ ಪೋಸ್ಟ್‌ಗೆ ಸುಧಿ ಆಚಾರ್ಯ ಎನ್ನುವವರು ” ಸಾವು ಮೊದಲೇ ಬರೆದ ಅಧ್ಯಾಯ…. ಹೇಗೆ, ಎಲ್ಲಿ, ಯಾವಾಗ ಯಾವೂದೂ ಯಾರಿಗೂ ತಿಳಿದಿಲ್ಲ…ಇಷ್ಟೊಂದು ಬುದ್ದಿ ಮಾತು ಹೇಳಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದೆಲ್ಲವೂ ಸರಿಯಾಗಿದೆ..ಬಟ್ ಯಾರಿಗೆ ಗೊತ್ತು….ಹೃದಯಾಘಾತದ ಬಗ್ಗೆ ಇಷ್ಟೆಲ್ಲಾ ವಿಷಯ ಜ್ಞಾನ ಇರುವ ನಿಮ್ಮನ್ನೂ, ಮತ್ತು ಏನೂ ತಿಳಿಯದ ಈ ಅಮಾಯಕರನ್ನೂ ಆ ಭಗವಂತ ಮುಂದಕ್ಕೆ ಒಂದು ದಿನ ಈ ನೆಪದಲ್ಲೇ ತನ್ನತ್ತ ಕರೆದುಕೊಳ್ಳಬಹುದಲ್ವಾ?’ ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಮಾಡಿರುವ ಪ್ರಥಮ್‌, ‘ಹಾಗಂತ ಎಚ್ಚರಿಕೆ ತಗೆದುಕೊಳ್ಳೋದು ತಪ್ಪೇನಪ್ಪ?ಎಚ್ಚರಿಸೋದು ತಪ್ಪಾ? ಹುಟ್ಟಿದ ಮನುಷ್ಯ ಸಾಯ್ತಾನೆ ಅಂತ ಸ್ಮಶಾನದಲ್ಲಿ ಮನೆ ಕಟ್ಟೋ ಕಾಗುತ್ತಾ? ಹುಟ್ಟಿದಮೇಲೆ ಸಾಯ್ತೀವಿ ಅಂತ ಗೊತ್ತಿದ್ಮೇಲೆ ಡಾಕ್ಟರ್ ಹತ್ತಿರ ಹೋಗೋದ್ಯಾಕೆ? ಒಳ್ಳೇದನ್ನ ಮಾಡಿ ಅಂತ ಹೇಳಿದ್ರೂ ಅತೀ ಬುದ್ಧಿವಂತಿಕೆ,ಅದರಲ್ಲೂ ಕೊಂಕ ಇಟ್ಕೊಂಡು ಬಂದ್ರೆ ನಾನ್ ಸುಮ್ನೆ ಇರ್ತೀನೇನಪ್ಪ?? ನಿಮ್ಮ‌ಮಾತಿನ ಪ್ರಕಾರ ನಿಮಗೆ ಬೇಕಿದ್ರೆ ಹೃದಯಾಘಾತ ಆಗ್ಲಿ, ಬೇರೆಯವರ ಹಣೆಬರಹದ ಚಿಂತೆ ನಿಮಗ್ಯಾಕಪ್ಪ ಮಾತಿನ ವೀರ…ಒಳ್ಳೇದನ್ನಷ್ಟೇ ನೋಡು. ಅತೀ ಬುದ್ಧಿವಂತಿಕೆ,ವ್ಯಂಗ್ಯ,ಕೊಂಕ ಇದೆಲ್ಲಾ ಬೇಡ… ನಾನು ನಮ್ಮ ಜನರನ್ನ ಎಚ್ಚರಿಸಬೇಕು.ಎಚ್ಚರಿಸಿದ್ದೀನಿ. ಸೈಲೆಂಟ್‌ ಆಗಿ ಮಲ್ಕೋಳಪ್ಪ…’ ಎಂದು ಪ್ರಥಮ್‌ ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ.