Home Education SSLC ವಿದ್ಯಾರ್ಥಿಗಳಿಗೆ ಶಾಕ್, ಇನ್ಮುಂದೆ ನಿಮ್ಮೂರಲ್ಲಿ ನಡೆಯಲ್ಲ ಎಕ್ಸಾಂ, ಸರ್ಕಾರದ ಹೊಸ ಆದೇಶ !

SSLC ವಿದ್ಯಾರ್ಥಿಗಳಿಗೆ ಶಾಕ್, ಇನ್ಮುಂದೆ ನಿಮ್ಮೂರಲ್ಲಿ ನಡೆಯಲ್ಲ ಎಕ್ಸಾಂ, ಸರ್ಕಾರದ ಹೊಸ ಆದೇಶ !

Image source: the live nagpur

Hindu neighbor gifts plot of land

Hindu neighbour gifts land to Muslim journalist

SSLC Exam: SSLC ವಿದ್ಯಾರ್ಥಿಗಳಿಗೆ (Students) ಬಹುಮುಖ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿ ವಿದ್ಯಾರ್ಥಿಗಳಿಗೆ ಶಾಕಿಂಗ್ ಮಾಹಿತಿ ಎಂದರೆ ತಪ್ಪಾಗಲಾರದು. ಹೌದು, ಇನ್ಮುಂದೆ ನಿಮ್ಮೂರಲ್ಲಿ ಎಗ್ಸಾಂ‌ ನಡೆಯಲ್ಲ. ಸರ್ಕಾರ (Government) ಹೊಸ ಆದೇಶ ಹೊರಡಿಸಿದೆ. ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇನ್ಮುಂದೆ ಗ್ರಾಮೀಣ ಪ್ರದೇಶದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam) ನಡೆಸದಂತೆ ಸೂಚನೆ ನೀಡಿದೆ.

ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಪ್ರಕರಣಗಳು ಕಂಡುಬಂದಿದ್ದು, ಇದಕ್ಕೆ ಪೋಷಕರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಲಾಗಿದೆ. ನಕಲು ತಡೆಗಟ್ಟಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024 ರ ಮಾರ್ಚ್/ಏಪ್ರಿಲ್ ನಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸದಂತೆ ಸೂಚನೆ ನೀಡಿದೆ.

ಕಳೆದ ವರ್ಷ ರಾಜ್ಯದ 724 ಜಿಲ್ಲಾ 755 ತಾಲೂಕು, 604 ಹೋಬಳಿ ಮತ್ತು 1,222 ಗ್ರಾಮೀಣ ಪ್ರದೇಶದ ಕೇಂದ್ರಗಳು ಸೇರಿ ರಾಜ್ಯಾದ್ಯಂತ ಒಟ್ಟಾರೆ 3,305 ಕೇಂದ್ರಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುವುದಿಲ್ಲ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.