Home Breaking Entertainment News Kannada Spandana Vijay Raghavendra: ನಟ ವಿಜಯ್‌ ರಾಘವೇಂದ್ರ ಪತ್ನಿಯ ಮೃತದೇಹ ಬೆಂಗಳೂರಿಗೆ ಬರುವ ಸಮಯವೇನು? ಅಂತ್ಯಕ್ರಿಯೆ...

Spandana Vijay Raghavendra: ನಟ ವಿಜಯ್‌ ರಾಘವೇಂದ್ರ ಪತ್ನಿಯ ಮೃತದೇಹ ಬೆಂಗಳೂರಿಗೆ ಬರುವ ಸಮಯವೇನು? ಅಂತ್ಯಕ್ರಿಯೆ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ

Spandana Vijay Raghavendra
Image source: Trivedi tech

Hindu neighbor gifts plot of land

Hindu neighbour gifts land to Muslim journalist

Spandana Vijay Raghavendra: ಬಿಕೆ ಶಿವರಾಂ ಅವರ ಪುತ್ರಿ, ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra)ಅವರು 2023 ಆಗಸ್ಟ್ 7 ಬ್ಯಾಂಕಾಕ್‌ನಲ್ಲಿ ಪ್ರವಾಸದ ವೇಳೆ ಹೃದಯಾಘಾತವಾಗಿ ಮೃತ ಹೊಂದಿದ್ದು, ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನೇನು ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಸಿದ್ಧತೆ ಆಗಿದೆ.

ಇಂದು ಥೈಲ್ಯಾಂಡ್‌ನಿಂದ ಬೆಂಗಳೂರಿಗೆ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಕರೆತರಲಾಗುತ್ತಿದ್ದು, ಇಂದು ಮಧ್ಯಾಹ್ನ 2.30 ಒಳಗಡೆ ಕಾನೂನು ಪ್ರಕ್ರಿಯೆ ಮುಗಿದರೆ ಇಂದು ರಾತ್ರಿ 9.30ರ ಫ್ಲೈಟ್‌ನಲ್ಲಿ ಅಲ್ಲಿಂದ ಹೊರಟರೆ, ಮಧ್ಯರಾತ್ರಿ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ತಲುಪಲಿದೆ.

ಸದ್ಯ ಮಧ್ಯಾಹ್ನ 2 ಗಂಟೆ ನಂತರವೇ ಥಾಯ್ ಏರ್‌ಲೈನ್ಸ್ ಲಭ್ಯವಿದ್ದು, ಇಂಡಿಗೋ ಫ್ಯಾಸೆಂಜರ್‌ ಫ್ಲೈಟ್‌ನಲ್ಲಿ ಸ್ಪಂದನಾ ಅವರ ಮೃತದೇಹ ತರಲು ಅವಕಾಶ ಕೊಡಲಾಗಿದೆ ಎಂಬ ಮಾಹಿತಿ ದೊರೆತಿದೆ.

ಸ್ಪಂದನಾ ಅವರು ಮೂಲತಃ ಮಂಗಳೂರಿನ ಬೆಳ್ತಂಗಡಿಯವರು. ಪತಿ ವಿಜಯ್ ರಾಘವೇಂದ್ರ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಹೀಗಾಗಿ ನಾಳೆ ಬೆಂಗಳೂರು ಅಥವಾ ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ ನಡೆಯುವುದು ಎನ್ನಲಾಗುತ್ತಿದೆ.

ಸ್ಪಂದನಾ ಪತಿ ವಿಜಯ್ ರಾಘವೇಂದ್ರ ಸೇರಿ ಕೆಲ ಕುಟುಂಬಸ್ಥರು ಥಾಯ್ಲೆಂಡ್‌ನಲ್ಲಿಯೇ ಇದ್ದು, ಸ್ಪಂದನಾ ಮೃತದೇಹ ಬೆಂಗಳೂರಿಗೆ ಬಂದ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಎನ್ನಲಾಗುತ್ತಿದೆ. ಇನ್ನು ಬೆಂಗಳೂರಿನ ಮಲ್ಲೇಶ್ವರಂನ ಗ್ರೌಂಡ್‌ನಲ್ಲಿ ಸ್ಪಂದನಾ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Dakshina kannada News: ಕಾಲುಬಾಯಿ ಜ್ವರ; ಗಡಿಭಾಗದಲ್ಲಿ ಜಾನುವಾರು ಸಾಗಾಟ ನಿಷೇಧ- ಜಿಲ್ಲಾಧಿಕಾರಿ ಆದೇಶ!!!