Home Jobs India Post Recruitment: ಭಾರತೀಯ ಅಂಚೆ ಇಲಾಖೆಯಲ್ಲಿ 30,000 ಕ್ಕೂ ಅಧಿಕ ಉದ್ಯೋಗಾವಕಾಶ, ಅರ್ಜಿ ಸಲ್ಲಿಕೆಯ...

India Post Recruitment: ಭಾರತೀಯ ಅಂಚೆ ಇಲಾಖೆಯಲ್ಲಿ 30,000 ಕ್ಕೂ ಅಧಿಕ ಉದ್ಯೋಗಾವಕಾಶ, ಅರ್ಜಿ ಸಲ್ಲಿಕೆಯ ಪೂರ್ತಿ ವಿವರ

India Post Recruitment
Image source: Career power

Hindu neighbor gifts plot of land

Hindu neighbour gifts land to Muslim journalist

India Post Recruitment: ಅಂಚೆ ಇಲಾಖೆ ವತಿಯಿಂದ (India Post Recruitment) , ಹತ್ತನೇ ತರಗತಿ ಪೂರೈಸಿ ಉದ್ಯೋಗ ಹುಡುಕುವವರಿಗೆ ಸಿಹಿ ಸುದ್ದಿ ಒಂದನ್ನು ನೀಡಲಾಗಿದೆ. ಹೌದು, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 30,041 ಗ್ರಾಮೀಣ ಡಾಕ್ ಸೇವಕ್ (Gram Dak Sevak – GDS) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸದ್ಯ ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ಕುರಿತು ಅಧಿಸೂಚನೆಯನ್ನು ಹೊರಡಿಸಿರುವ ಭಾರತೀಯ ಅಂಚೆ ಇಲಾಖೆ, ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆಗಸ್ಟ್ 3 ರಿಂದ ಪ್ರಾರಂಭಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 23 ರವರೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.

ಅರ್ಹತೆ:
10ನೇ ತರಗತಿ ಪಾಸಾಗಿರಬೇಕು. ಮತ್ತು ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಮಾತೃ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.

ಶುಲ್ಕ:
ಪುರುಷ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ನೂರು ರೂಪಾಯಿ ಪಾವತಿಸಬೇಕಾಗುತ್ತದೆ. ಎಲ್ಲಾ ಮಹಿಳೆಯರು, ತೃತೀಯ ಲಿಂಗಿಗಳು ಮತ್ತು ಎಸ್​​ಸಿ -ಎಸ್​ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಗೆ ಆರಂಭ ದಿನಾಂಕ: 03-08-2023

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 23-08-2023

ವೇತನ: 10,000 ರೂಪಾಯಿಯಿಂದ 24,470 ರೂ.

ಅರ್ಜಿ ಸಲ್ಲಿಸುವ ಕ್ರಮ :
ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapostgdsonline.gov.in ಗೆ ಭೇಟಿ ನೀಡಿ.
ನಂತರ ಹೋಂ ಪೇಜ್​ ಓಪನ್​ ಮಾಡಿ. ನೋಂದಣಿ/ರಿಜಿಸ್ಟ್ರೇಷನ್​ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಕೇಳಿರುವ ಅಗತ್ಯ ಮಾಹಿತಿ ಒದಗಿಸಿ ನೋಂದಾಯಿಸಿ.
ನಂತರ ಅರ್ಜಿ ಶುಲ್ಕವನ್ನು ಪಾವತಿಸಿ.
ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ, ಪ್ರಿಂಟ್ ತೆಗೆದುಕೊಳ್ಳಿ.

ಮುಖ್ಯವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿ ತಮ್ಮ ಅರ್ಜಿಯಲ್ಲಿ ದಾಖಲೆ ಏನಾದರೂ ತಪ್ಪಾಗಿ ನಮೂದಿಸಿದ್ದರೆ ಆಗಸ್ಟ್ 24 ರಿಂದ ಆಗಸ್ಟ್ 26 ರವರೆಗೆ ಅಭ್ಯರ್ಥಿಗಳು ತಿದ್ದುಪಡಿ/ಎಡಿಟ್​ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

 

ಇದನ್ನು ಓದಿ: UPI payment: ಗೂಗಲ್ ಪೇ, ಫೋನ್ ಪೇ ಬಳಕೆದಾರರೇ ನಿಮ್ಮ ದುಡ್ಡಿಗೆ ನೀವೇ ಜವಾಬ್ದಾರಿ!! RBI ನೀಡಿದೆ ಇಂತದ್ದೊಂದು ಮಹತ್ವದ ಸಂದೇಶ !