Baby Mute Mask: ಇನ್ಮುಂದೆ ಮಗು ಅಳುತ್ತೆ ಅಂತ ಚಿಂತೆ ಬೇಡ, ಟಿವಿ ಸೌಂಡ್ ಥರ ಭಾವನೆ ಮ್ಯೂಟ್ ಮಾಡೋ ಮಶೀನ್ ಬಂದಿದೆ

Latest news Baby Mute Mask Mute machine for baby crying

Baby Mute Mask: ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಉಪಕಾರಣಗಳನ್ನು ಆವಿಷ್ಕಾರ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಚಿಕ್ಕ ಮಕ್ಕಳನ್ನು ಕೆಲವೊಮ್ಮೆ ಸಮಾಧಾನ ಮಾಡಲು ಹರಸಾಹಸ ಮಾಡಿದರು ವ್ಯರ್ಥವಾಗುತ್ತದೆ. ಯಾವುದೇ ರೀತಿ ಸಮಾಧಾನ ಮಾಡಿದರೂ ಅಳು ನಿಲ್ಲಿಸುವುದಿಲ್ಲ.

ಇವತ್ತಿನ ಕಾಲದಲ್ಲಿ ಪೇರೆಂಟಿಂಗ್ ಅನ್ನೋದು ಹಲವರ ಪಾಲಿಗೆ ಸವಾಲಿನ ಕೆಲಸ. ಮಕ್ಕಳನ್ನು ನೋಡಿಕೊಳ್ಳಲು ಎಲ್ಲರಿಗೂ ಬರುವುದಿಲ್ಲ. ಅದರಲ್ಲೂ ಅಳುವ ಮಗುವನ್ನು ಸಾಂತ್ವನಗೊಳಿಸುವುದಂತೂ ಎಲ್ಲರಿಗೂ ಸಾಧ್ಯವಾಗದ ಮಾತು. ಆದರೆ ಮಕ್ಕಳು ಸಮಯ, ಸಂದರ್ಭದ ಪರಿವೆಯಿಲ್ಲದೆ ಅಳುತ್ತಲೇ ಇರುತ್ತಾರೆ. ಸಭೆ, ಸಮಾರಂಭ, ಟ್ರೈನ್‌, ಬಸ್‌ಗಳಲ್ಲಿ ಮಕ್ಕಳು ಅಳುವಾಗ ಪೋಷಕರು (Parents) ಸಹ ಮುಜುಗರಕ್ಕೆ ಒಳಗಾಗುತ್ತಾರೆ. ಆದ್ರೆ ಇನ್ಮುಂದೆ ಆ ಸಮಸ್ಯೆ ಇರಲ್ಲ. ಮಕ್ಕಳು ಅಳ್ತಿದ್ರೆ ಅಳುವನ್ನು ಮ್ಯೂಟ್ ಮಾಡಿ ಬಿಡ್ಬೋದು.

ಪುಟ್ಟ ಮಕ್ಕಳು (Toddler) ಸಾಮಾನ್ಯವಾಗಿ ರಚ್ಚೆ ಹಿಡಿದು ಅಳುವುದು (Crying) ಸಾಮಾನ್ಯ. ಯಾವುದೇ ರೀತಿ ಸಮಾಧಾನ ಮಾಡಿದರೂ ಅಳು ನಿಲ್ಲಿಸುವುದಿಲ್ಲ. ಇದು ಕೆಲವೊಮ್ಮೆ ಸುತ್ತಮುತ್ತಲಿದ್ದವರಿಗೆ ಕಿರಿಕಿರಿಯಾಗಿ ಪರಿಣಮಿಸುವುದೂ ಇದೆ. ಆದ್ರೆ ಬೇಬಿ ಮ್ಯೂಟ್ ಮಾಸ್ಕ್ (Baby Mute Mask) ಹಾಕಿದ್ರೆ ಸಾಕು ಮಗು ಅಳೋದನ್ನು ನಿಲ್ಸುತ್ತೆ.

ಹೌದು, ಪೋಷಕರ ಸಮಸ್ಯೆಯನ್ನು ಬಗೆಹರಿಸಲು ಕಂಪನಿಯೊಂದು ‘ಬೇಬಿ ಮ್ಯೂಟ್ ಮಾಸ್ಕ್’ನ್ನು ಅಭಿವೃದ್ಧಿಪಡಿಸಿದೆ. ಈ ಮಾಸ್ಕ್‌ ಅಳುವ ಮಗುವನ್ನು ಶಾಂತಗೊಳಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ.

ಮುಖ್ಯವಾಗಿ ಕಂಪನಿ, ಮಕ್ಕಳನ್ನು ಕರೆದುಕೊಂಡು ಪ್ರಯಾಣಿಸುವಾಗ ಅಥವಾ ಚಲನಚಿತ್ರಗಳನ್ನು ನೋಡುವಾಗ ಶಿಶುಗಳನ್ನು ಶಾಂತವಾಗಿರಿಸಲು ಈ ಮಾಸ್ಕ್‌ ಪರಿಹಾರವಾಗಿದೆ ಎಂದು ಹೇಳಿದೆ.

“ಮಾಸ್ಕ್ ಅನ್ನು ನಿಮ್ಮ ಮಗುವಿನ ಬಾಯಿ ಮತ್ತು ಮೂಗನ್ನು ನಿಧಾನವಾಗಿ ಮುಚ್ಚಲು ವಿನ್ಯಾಸಗೊಳಿಸಲಾಗಿದೆ, ಅವರ ಅಳುವ ಶಬ್ದವನ್ನು ಶೇಕಡಾ 87 ರಷ್ಟು ಕಡಿಮೆ ಮಾಡುತ್ತದೆ.” ಎಂದು ಕಂಪನಿ ತಿಳಿಸಿದೆ.

ಮಕ್ಕಳ ಈ ‘ಬೇಬಿ ಮ್ಯೂಟ್ ಮಾಸ್ಕ್‌’ ಕುರಿತಾಗಿ #ChildsVoiceMatters ಮತ್ತು #ParentingResponsibly ನಂತಹ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗುತ್ತಿವೆ. ಆದರೆ ಪೋಷಕರು ಮತ್ತು ವಕೀಲರು ಮಾಸ್ಕ್‌ನ ಬಿಡುಗಡೆಯನ್ನು ಮರುಪರಿಶೀಲಿಸುವಂತೆ ಕಂಪನಿಗೆ ಕರೆ ನೀಡಿದ್ದಾರೆ.

ಇನ್ನು ಕೆಲವು ಪೋಷಕರು ಈ ಮಾಸ್ಕ್‌ನ್ನು ಉತ್ತಮ ಪರಿಹಾರ ಎಂದು ಅಂದುಕೊಂಡರೆ, ಇನ್ನು ಕೆಲವರು ‘ಬೇಬಿ ಮ್ಯೂಟ್ ಮಾಸ್ಕ್’ ಮಗುವಿನ ಮಾನಸಿಕ (Mental) ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ಪ್ರಭಾವ (Impact) ಬೀರಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಅದಲ್ಲದೆ, ಶಿಶುಗಳು ಸೂಕ್ಷ್ಮವಾದ ಉಸಿರಾಟದ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಮಾಸ್ಕ್‌ ಬಳಕೆಯಿಂದ ಅವರ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವುದರಿಂದ ಉಸಿರಾಟದ ತೊಂದರೆ ಅಥವಾ ಉಸಿರುಗಟ್ಟುವಿಕೆಯ ಸಮಸ್ಯೆ ಉಂಟಾಗಬಹುದು ಇನ್ನು ಕೆಲವರು ತಿಳಿಸಿದ್ದಾರೆ.

 

ಇದನ್ನು ಓದಿ: CM Siddaramaiah: ತನ್ನ ಹುಟ್ಟುಹಬ್ಬದಂದೇ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ | ಅಂಬಾರಿ ಹೊತ್ತ ಆನೆಯ ಪುತ್ಥಳಿ ನೀಡಿ ಪಿ.ಎಂ. ಗೌರವಿಸಿದ ಸಿ.ಎಂ. 

Comments are closed.