PM Kisan Yojana: PM ಕಿಸಾನ್ ದುಡ್ಡು ಜಮೆ ಆಗಿಲ್ವಾ ? ಯಾರಿಗೆ, ಎಲ್ಲಿ, ಹೇಗೆ ದೂರು ನೀಡಬಹುದು ಎಂದು ತಿಳ್ಕೋಬೇಕಾ ?

Latest national news if you don't receive the money of PM Kisan money where to complain here is complete details

PM Kisan money: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ. (PM Kisan Scheme Latest News) ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ಒದಗಿಸುತ್ತಿದ್ದು, ಕೇಂದ್ರ ಸರ್ಕಾರ ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಹಣವನ್ನು ರೈತರಿಗೆ ನೀಡಿದೆ. 14ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಪಿಎಂ ಕಿಸಾನ್‌ (PM Kisan Yojana) 14ನೇ ಕಂತಿನ ಹಣ(PM Kisan money) ಇನ್ನೂ ಖಾತೆಗೆ ಬಂದಿಲ್ಲದಿದ್ದರೆ ನೀವು ದೂರು ನೀಡಬಹುದು. ಹೇಗೆ ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ಇದಕ್ಕಾಗಿ, ನೀವು ಮೊದಲು ನೋಂದಾಯಿಸಿಕೊಳ್ಳಬೇಕು, ನಂತರ ಇ-ಕೆವೈಸಿ ಕೂಡ ಮಾಡಬೇಕು. ನಂತರ ಫಲಾನುಭವಿಗಳ ಪಟ್ಟಿಗೆ ಹೋಗಿ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.

PM ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

• ಮೊದಲನೆಯದಾಗಿ, ನೀವು ಪ್ರಧಾನಿಯವರ ಸಮ್ಮಾನ್ ನಿಧಿಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.
• ಇಲ್ಲಿ ಮುಖಪುಟದಲ್ಲಿ ಕಾಣುವ ‘ಫಾರ್ಮರ್ ಕಾರ್ನರ್ (Farmers Corner)’ ಬಟನ್‌ ಮೇಲೆ ಕ್ಲಿಕ್ ಮಾಡಿ.
• Farmers Corner ವಿಭಾಗದಲ್ಲಿ ‘ಫಲಾನುಭವಿಗಳ ಪಟ್ಟಿ’ಯನ್ನು ಆಯ್ಕೆಯನ್ನು ಕ್ಲಿಕ್ ಮಾಡಿ.
• ಮುಂದಿನ ಪುಟದಲ್ಲಿ, ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್, ಗ್ರಾಮ ಮುಂತಾದ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.
• ಈಗ Get Report (ವರದಿ ಪಡೆಯಿರಿ) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ, ಪರದೆಯ ಮೇಲೆ ನಿಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ .

ಫಲಾನುಭವಿಗಳು ಹಣ ಪಡೆಯಲು ಐಕೆವಿ ಮಾಡುವುದು ಕಡ್ಡಾಯವಾಗಿದ್ದು, ಇಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ರೂ. 2 ಸಾವಿರ ಲಭ್ಯವಾಗಲಿದೆ. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ KYC ಅನ್ನು (PM Kisan 14th Instalment) ಪೂರ್ಣಗೊಳಿಸಲು ಅವಕಾಶವಿದೆ.

ದೂರು ನೀಡುವುದು ಹೇಗೆ ?!

ನಿಮ್ಮ ವಿವರಗಳು ತಪ್ಪಾಗಿದ್ದರೂ ಅಥವಾ ಬೇರೆ ಯಾವುದೇ ಸಹಾಯದ ಅಗತ್ಯವಿದೆಯೇ ಎಂದು ನೀವು ಆನ್‌ಲೈನ್‌ನಲ್ಲಿ ದೂರು ನೀಡಬಹುದು. ಅಥವಾ ನೀವು ಕರೆ ಮಾಡಬಹುದು. 155261 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಅಥವಾ ನೀವು 1800 1155 26 ಗೆ ಕರೆ ಮಾಡಬಹುದು. 011 23381092 ಸಂಖ್ಯೆಯೂ ಲಭ್ಯವಿದೆ. ನೀವು ಇಮೇಲ್ ಕೂಡ ಮಾಡಬಹುದು. ನೀವು pmkisan-ict@gov.in ಗೆ ಮೇಲ್ ಕಳುಹಿಸಬಹುದು.

ಇದನ್ನೂ ಓದಿ: Chetan Ahimsa: ಸೌಜನ್ಯ ಸಪೋರ್ಟ್ ಗೆ 3 ನೇ ನಟ ; ಧರ್ಮಸ್ಥಳದ ಶಕ್ತಿಗಳು ಮೌನ ಆಗಿರೋದ್ಯಾಕೆ ಎಂದು ಪ್ರಶ್ನಿಸಿದ ಚೇತನ್ !

Comments are closed.