Teachers Recruitment: ಇಲ್ಲಿನ ಸರಕಾರ ತಂದಿದೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ! ಈಗಿನ ಆಯೋಗ ವಿಸರ್ಜನೆ, ಶಿಕ್ಷಕರ ನೇಮಕ ಹೇಗೆ?

The government here has brought a change in the recruitment process of teachers

Teachers Recruitment : ಉತ್ತರ ಪ್ರದೇಶದಲ್ಲಿ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಆಯೋಗ ರಚನೆಯಾಗಲಿದೆ. ಈ ಆಯೋಗದ ಅಡಿಯಲ್ಲಿ ರಾಜ್ಯದ ಉನ್ನತ, ಪ್ರೌಢ ಮತ್ತು ಮೂಲ ಶಿಕ್ಷಣ ಇಲಾಖೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಜ್ಯ ಸಚಿವ ಸಂಪುಟವು ಆಗಸ್ಟ್ 1 ರಂದು ಉತ್ತರ ಪ್ರದೇಶ ಶಿಕ್ಷಣ ಸೇವಾ ಆಯ್ಕೆ( Teachers Recruitment) ಆಯೋಗದ ಮಸೂದೆ 2023 ರ ಕರಡನ್ನು ಅನುಮೋದಿಸಿದೆ. ಈಗ ಶೀಘ್ರದಲ್ಲೇ ಈ ಹೊಸ ಆಯೋಗ ರಚನೆಯಾಗಲಿದೆ.

ಪ್ರಸ್ತಾವಿತ ಉತ್ತರ ಪ್ರದೇಶ ಶಿಕ್ಷಣ ಸೇವಾ ಆಯ್ಕೆ ಆಯೋಗವು ಉನ್ನತ ಶಿಕ್ಷಣ, ಪ್ರೌಢ ಶಿಕ್ಷಣ, ಮೂಲ ಶಿಕ್ಷಣ, ವೃತ್ತಿಪರ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಸರಕಾರ ಈ ಕ್ರಮದಿಂದ ಶಿಕ್ಷಕರ ಆಯ್ಕೆಯಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುತ್ತದೆ ಎಂದು ಹೇಳಿದೆ. ನಿಗದಿತ ಸಮಯದಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಈ ಆರೋಗವು ಅಧ್ಯಕ್ಷರು ಮತ್ತು ಹನ್ನೆರಡು ಸದಸ್ಯರನ್ನು ಹೊಂದಿರುತ್ತದೆ ಎಂದು ಹೇಳಿದೆ. ಇದರ ಪ್ರಧಾನ ಕಚೇರಿ ಪ್ರಯಾಗ್‌ರಾಜ್‌ನಲ್ಲಿರುತ್ತದೆ. ಉತ್ತರ ಪ್ರದೇಶ ಶಿಕ್ಷಣ ಸೇವಾ ಆಯ್ಕೆ ಆಯೋಗದ ರಚನೆ ಮತ್ತು ಪ್ರಾರಂಭದ ನಂತರ ಯುಪಿ ಉನ್ನತ ಶಿಕ್ಷಣ ಸೇವಾ ಆಯೋಗ ಮತ್ತು ಯುಪಿ ಮಾಧ್ಯಮಿಕ ಶಿಕ್ಷಣ ಸೇವಾ ಆಯ್ಕೆ ಮಂಡಳಿಯಂತಹ ನೇಮಕಾತಿ ಆಯೋಗಗಳು ವಿಸರ್ಜನೆಯಾಗುತ್ತವೆ. ಹೊಸ ಆಯೋಗವು ವಿವಿಧ ಶಿಕ್ಷಕರ ಆಯ್ಕೆ ಆಯೋಗಗಳು ಮತ್ತು ಮಂಡಳಿಗಳ ಸಮಗ್ರ ರೂಪವಾಗಿರುತ್ತದೆ.

ಈಗ, ಮಾಧ್ಯಮಿಕ ಶಿಕ್ಷಕರ ನೇಮಕಾತಿಯನ್ನು ರಾಜ್ಯದಲ್ಲಿ ಯುಪಿ ಸೆಕೆಂಡರಿ ಸೇವೆಗಳ ಆಯ್ಕೆ ಮಂಡಳಿಯಿಂದ ಮಾಡಲಾಗುತ್ತದೆ. ಇನ್ನೊಂದು ಕಡೆ, ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿಯು ಯುಪಿ ಉನ್ನತ ಶಿಕ್ಷಣ ಸೇವಾ ಆಯೋಗದಿಂದ ನಡೆಸಲಾಗುತ್ತದೆ. ಮದರಸಾಗಳಲ್ಲಿ ಶಿಕ್ಷಕರ ನೇಮಕಾತಿ ಮದರಸಾ ಮಂಡಳಿ ಮೂಲಕ ಆಗುತ್ತದೆ. ಈಗ ಹೊಸ ಬೋರ್ಡ್‌ ಪ್ರಕ್ರಿಯೆ ಬಂದ ನಂತರ, ರಾಜ್ಯದ ಎಲ್ಲಾ ಶಿಕ್ಷಕರ ನೇಮಕಾತಿಯನ್ನು ಈ ಆಯೋಗ ಮಾತ್ರ ಮಾಡುತ್ತದೆ. ಅದೇ ಆಯೋಗ ಶಿಕ್ಷಕರ ನೇಮಕಾತಿಗೆ ಜಾಹೀರಾತು ಕೂಡಾ ನೀಡುತ್ತದೆ.

ಇದನ್ನೂ ಓದಿ: ನಾಗರ ಪಂಚಮಿ: ಈ ಬಾರಿಯ ನಾಗರ ಪಂಚಮಿ ಯಾವಾಗ? ಎಷ್ಟು ಹಾವುಗಳ ಪೂಜೆ ನಡೆಯುತ್ತೆ ಗೊತ್ತಾ? ಈ ವಿಷ್ಯ ಕೇಳಿದ್ರೆ ಅಚ್ಚರಿ ಪಡ್ತೀರಾ!!

Comments are closed.