Home News Congress: ಪ್ರೈಮ್ ಮಿನಿಸ್ಟರ್ Vs ಕ್ರೈಮ್ ಮಿನಿಸ್ಟರ್ – ಪ್ರಧಾನಿ ಮೋದಿ ಟೀಕಿಸಿ ವ್ಯಂಗ್ಯವಾಡಿದ ಕಾಂಗ್ರೆಸ್...

Congress: ಪ್ರೈಮ್ ಮಿನಿಸ್ಟರ್ Vs ಕ್ರೈಮ್ ಮಿನಿಸ್ಟರ್ – ಪ್ರಧಾನಿ ಮೋದಿ ಟೀಕಿಸಿ ವ್ಯಂಗ್ಯವಾಡಿದ ಕಾಂಗ್ರೆಸ್ !

Congress
image source: India posts english

Hindu neighbor gifts plot of land

Hindu neighbour gifts land to Muslim journalist

Congress: ಪ್ರಧಾನಿ ನರೇಂದ್ರ ಮೋದಿ (Narendra modi) ಪುಣೆಗೆ ಭೇಟಿ ನೀಡುವ ಮುನ್ನವೇ ಕಾಂಗ್ರೆಸ್ ಕಾರ್ಯಕರ್ತರು ಮೋದಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದಾರೆ. ಲೋಕಮಾನ್ಯ ಬಾಲ ಗಂಗಾಧರ ತಿಲಕ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಮಹಾರಾಷ್ಟ್ರದ ಪುಣೆಗೆ ಆಗಮಿಸಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ (Congress) ಪೋಸ್ಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಮಣಿಪುರದಲ್ಲಿ (Manipur) ನಡೆದ ಹಿಂಸಾಚಾರ ಸೇರಿದಂತೆ ಹಲವು ವಿಷಯಗಳ ವಿರುದ್ಧ ಪ್ರತಿಭಟಿಸಲು ಪುಣೆಯಾದ್ಯಂತ ಪೋಸ್ಟರ್‌ಗಳನ್ನು ಹಾಕಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಪುಣೆ ನಗರದಾದ್ಯಂತ ‘ಗೋ ಬ್ಯಾಕ್ ಮಿಸ್ಟರ್ ಕ್ರೈಮ್ ಮಿನಿಸ್ಟರ್’ ಸ್ಲೋಗನ್ ಇರುವ ಪೋಸ್ಟರ್‌ಗಳನ್ನು ಹಾಕಿ ಪ್ರತಿಭಟಿಸಿದ್ದಾರೆ. ಹಾಗೇ ಇನ್ನೊಂದು ಪೋಸ್ಟರ್‍ನಲ್ಲಿ ‘ಮಿಸ್ಟರ್ ಪ್ರೈಮ್ ಮಿನಿಸ್ಟರ್, ಮಣಿಪುರಕ್ಕೆ ಹೋಗಿ, ಸಂಸತ್ತಿನತ್ತ ಮುಖ ಮಾಡಿ’ ಎಂದು ಬರೆದು ಮೋದಿ ವಿರುದ್ಧ ಟೀಕಿಸಲಾಗಿದೆ.

ಸದ್ಯ ಈ ಅನಧಿಕೃತ ಪೋಸ್ಟರ್‌ಗಳನ್ನು ತೆಗೆದುಹಾಕಲು ಹೇಳಲಾಗಿದೆ.
ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳು, ಮಣಿಪುರದ ಹಿಂಸಾಚಾರ, ನಿರುದ್ಯೋಗ ಮತ್ತು ಇತರ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಪ್ರಧಾನಿ ಮೋದಿಯವರ ಭೇಟಿಯನ್ನು ವಿರೋಧಿಸಿ ವಿರೋಧ ಪಕ್ಷದವರು ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: ಮಂಗಳೂರಿಗೆ, ಕರ್ನಾಟಕಕ್ಕೆ ಎಲ್ಲೆಲ್ಲಿ ಯಾವಾಗ ಬರುತ್ತೆ ‘ವಂದೇ ಭಾರತ್ ‘ ರೈಲು; ಸಚಿವರು ನೀಡಿದ್ರು ಬಿಗ್ ಅಪ್ಡೇಟ್