Home News Bihar: ಹನಿಮೂನ್ ಕನಸಲ್ಲಿದ್ದ ಗಂಡ, ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಕಾಣೆಯಾದ ನವವಧು! ಅಷ್ಟಕ್ಕೂ ಆಕೆ ಹೋಗಿದೆಲ್ಲಿ?

Bihar: ಹನಿಮೂನ್ ಕನಸಲ್ಲಿದ್ದ ಗಂಡ, ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಕಾಣೆಯಾದ ನವವಧು! ಅಷ್ಟಕ್ಕೂ ಆಕೆ ಹೋಗಿದೆಲ್ಲಿ?

Bihar
image source: Vijayavani

Hindu neighbor gifts plot of land

Hindu neighbour gifts land to Muslim journalist

Bihar: ಪತಿಯ ಜೊತೆಗೆ ಹನಿಮೂನ್ ಗೆ (Honeymoon) ತೆರಳಿದ್ದ ಪತ್ನಿ ನಾಪತ್ತೆಯಾದ ಘಟನೆ ಬಿಹಾರದ (Bihar) ಕಿಶನ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಕಾಜಲ್ ಕುಮಾರಿ ಎನ್ನಲಾಗಿದೆ. ಆಕೆಯ ಪತಿ ಮುಜಾಫರ್‌ಪುರದ ವಿದ್ಯುತ್ ಇಲಾಖೆಯ ಉದ್ಯೋಗಿ.

ಈತ ಕಾಜಲ್ ಕುಮಾರಿಯನ್ನು ಆರು ತಿಂಗಳ ಹಿಂದೆಯೇ ಮದುವೆಯಾಗಿದ್ದ. ಆದರೆ, ಕೌಟುಂಬಿಕ ಸಮಸ್ಯೆಯಿಂದ ಮದುವೆಯಾದ ಕೂಡಲೇ ದಂಪತಿ ಹನಿಮೂನ್‌ಗೆ ತೆರಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇದೀಗ ತೆರಳಿದ್ದರು.

ಜುಲೈ 28 ರಂದು ಕಾಜಲ್ ಕುಮಾರಿ ತನ್ನ ಪತಿಯೊಂದಿಗೆ ಹನಿಮೂನ್ ಟ್ರಿಪ್‌ಗಾಗಿ ನವದೆಹಲಿ-ಹೊಸ ಜಲಪೈಗುರಿ ಸೂಪರ್‌ಫಾಸ್ಟ್ ರೈಲಿನಲ್ಲಿ ಡಾರ್ಜಿಲಿಂಗ್‌ಗೆ ತೆರಳುತ್ತಿದ್ದರು. ದಂಪತಿಗಳು ಬಿಹಾರದ ಮುಜಾಫರ್‌ಪುರದಿಂದ ರೈಲು ಹತ್ತಿದ್ದರು.

ರೈಲು (train) ಕಿಶನ್‌ಗಂಜ್ ರೈಲು ನಿಲ್ದಾಣವನ್ನು ತಲುಪಿದಾಗ, ಕಾಜಲ್ ಶೌಚಾಲಯಕ್ಕೆಂದು ಹೋಗಿದ್ದಾಳೆ ಆದರೆ, ವಾಪಸ್ ಬರಲೇ ಇಲ್ಲ. ಅಷ್ಟೊತ್ತಿಗಾಗಲೇ ರೈಲು ಚಲಿಸಲು ಪ್ರಾರಂಭಿಸಿತು. ತುಂಬಾ ಹೊತ್ತಾದರೂ ಪತ್ನಿ ಬಾರದಿದ್ದಾಗ ಆಕೆಯ ಪತಿ ರೈಲಿನ ಪ್ರತಿ ಕೋಚ್ ನಲ್ಲಿ ಹುಡುಕಿದ್ದಾರೆ. ಆದರೆ ಆಕೆ ಸಿಗಲಿಲ್ಲ.

ಪತ್ನಿಯೇ ಇಲ್ಲದ ಮೇಲೆ ಹನಿಮೂನ್ ಗೆ ಹೋಗೋದೇಕೆ. ಗಾಬರಿಯಿಂದ ಆತ ಮುಜಾಫರ್‌ಪುರಕ್ಕೆ ಹಿಂತಿರುಗಿ ಘಟನೆಯ ಬಗ್ಗೆ ಜಿಆರ್‌ಪಿ ಕಿಶನ್‌ಗಂಜ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನ ಪತ್ನಿಗೆ ಅಕ್ರಮ ಸಂಬಂಧ ಇಲ್ಲ. ಆಕೆಯನ್ನು ಮಾದಕ ವ್ಯಸನದ ತಂಡ ಅಪಹರಿಸಿರಬಹುದು ಎಂದು ಪತಿ ಶಂಕಿಸಿದ್ದಾರೆ. ದೂರಿನನ್ವಯ
ಜಿಆರ್‌ಪಿ ಅಧಿಕಾರಿಗಳು ಕಿಶನ್‌ಗಂಜ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಆದರೂ ಆಕೆ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

 

ಇದನ್ನು ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ : ಲಷ್ಕರ್–ಎ–ತಯಬಾ’ ನಂಟು