Home News Mangalore beach: ಮಂಗಳೂರು ಬೀಚ್‌ಗೆ ಹೋಗುವವರಿಗೆ ಮಹತ್ವದ ಸೂಚನೆ! ಜಿಲ್ಲಾಡಳಿತ ನೀಡಿದೆ ಪ್ರಕಟಣೆ!!

Mangalore beach: ಮಂಗಳೂರು ಬೀಚ್‌ಗೆ ಹೋಗುವವರಿಗೆ ಮಹತ್ವದ ಸೂಚನೆ! ಜಿಲ್ಲಾಡಳಿತ ನೀಡಿದೆ ಪ್ರಕಟಣೆ!!

Mangalore beach
Image source: Mangala Travels

Hindu neighbor gifts plot of land

Hindu neighbour gifts land to Muslim journalist

Mangalore beach: ಈಗಾಗಲೇ
ರಾಜ್ಯದಲ್ಲಿ ಮಳೆಯ ಆರ್ಭಟ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಭಾರೀ ಮಳೆಯಿಂದ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ ಕರಾವಳಿ ಭಾಗದಲ್ಲಿ ಕಡಲಬ್ಬರ ಜೋರಾಗಿದ್ದು, ಈ ಪರಿಣಾಮ ಮಂಗಳೂರಿನ  ಬೀಚ್‍ಗಳಿಗೆ (Mangalore beach) ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಹೌದು, ಮಳೆ ಕಡಿಮೆಯಾದ್ರೂ ಕರಾವಳಿ ಭಾಗದಲ್ಲಿ ಕಡಲಬ್ಬರ ಜೋರಾಗಿದೆ. ಆದ್ದರಿಂದ ಮಂಗಳೂರಿನ ಎಂಟು ಬೀಚ್‍ಗಳಿಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ.

ಪ್ರವಾಸಿಗರ ಹಿತದೃಷ್ಟಿಯಿಂದ ಯಾರು ಬೀಚ್‍ಗೆ ಪ್ರವೇಶ ಮಾಡಬೇಡಿ ಎಂದು ಮನವಿ ಮಾಡಿ, ನಿರ್ಬಂಧ ಹೇರಿದ್ದಾರೆ. ಆದರೆ ಕೆಲ ಪ್ರವಾಸಿಗರು ಪಣಂಬೂರು ಬೀಚ್ ಸಮುದ್ರ ತೀರಕ್ಕೆ ಆಗಮಿಸುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಎಂಟು ಬೀಚ್ ಗಳಲ್ಲಿ 24 ಜನ ಹೋಂ ಗಾರ್ಡ್ಸ್ ನೇಮಕ ಮಾಡಲಾಗಿದೆ.

ಅಲ್ಲದೇ ಅಪಾಯಕಾರಿ ಸ್ಥಳದಲ್ಲಿ ಫೋಟೋ, ರೀಲ್ಸ್ ನಿಷೇಧಿಸಲಾಗಿದೆ. ಕಾನೂನು ಕ್ರಮ ಮೀರಿದವರಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಗಂಡ-ಹೆಂಡತಿ ತಿಂಗಳಿಗೆ ಎಷ್ಟು ಬಾರಿ ಕೂಡಿದ್ರೆ ಒಳ್ಳೆಯದು..! ಇದರ ಹಿಂದಿನ ಕಾರಣವೇನು?