ಈ ಸ್ಮಾರ್ಟ್‌ಫೋನ್ ಆಗಸ್ಟ್ 1 ರಿಂದ ನಿಷ್ಕ್ರಿಯವಾಗಲಿದೆ! ನಿಮ್ಮ ಫೋನ್ ಏನಾದರೂ ಈ ಲಿಸ್ಟ್ ನಲ್ಲಿದೆಯಾ ನೋಡಿ!!!
Latest news Android Phone This smartphone will be inactive from August 1
Android Phone: ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ನಿಮಗೊಂದು ಶಾಕಿಂಗ್ ಮಾಹಿತಿ ಇಲ್ಲಿದೆ. ಹೌದು, ಆಗಸ್ಟ್ 1 ರಿಂದ ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಕಾರ್ಯನಿರ್ವಹಿಸಲ್ಲ ಎಂದು ಗೂಗಲ್ ತಿಳಿಸಿದೆ.
ಮುಖ್ಯವಾಗಿ Google ಸಪೋರ್ಟ್ ಮಾಡದೇ ಹೋದರೆ ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ನಿಮ್ಮ ಡೇಟಾದ ಸುರಕ್ಷತೆಯು ಸಹ ಅಪಾಯಕ್ಕೆ ಸಿಲುಕಬಹುದು. ಹಾಗಿದ್ದರೆ ಯಾವ ಫೋನ್ ಗಳಲ್ಲಿ ಇನ್ನು ಮುಂದೆ ಗೂಗಲ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಇಲ್ಲಿ ತಿಳಿಯಿರಿ.
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ. ಕಿಟ್ ಕ್ಯಾಟ್ ಆಂಡ್ರಾಯ್ಡ್ ಆವೃತ್ತಿಯನ್ನು 2013 ರಲ್ಲಿ ಬಿಡುಗಡೆ ಮಾಡಲಾಯಿತು. ಇದರರ್ಥ ನಿಮ್ಮ ಸ್ಮಾರ್ಟ್ ಫೋನ್ ಕಿಟ್ ಕ್ಯಾಟ್ ಅಥವಾ ಹಿಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿದ್ದರೆ, ಗೂಗಲ್ ತನ್ನ ಬೆಂಬಲವನ್ನು ಕೊನೆಗೊಳಿಸುತ್ತಿದೆ.
ಅಂದರೆ ಗೂಗಲ್ ವ್ಯವಸ್ಥೆಯು 10 ವರ್ಷ ಹಳೆಯ ಸ್ಮಾರ್ಟ್ ಫೋನ್ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ವರದಿಗಳ ಪ್ರಕಾರ, ಆಗಸ್ಟ್ 1 ರಿಂದ ದೇಶಾದ್ಯಂತ ಗೂಗಲ್ ಬೆಂಬಲವನ್ನು ಮುಚ್ಚಬಹುದು.
ವರದಿಗಳ ಪ್ರಕಾರ, ಕೇವಲ 1% ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳು ಪ್ರಸ್ತುತ ಆಂಡ್ರಾಯ್ಡ್ ಕಿಟ್ ಕ್ಯಾಟ್ ಆಂಡ್ರಾಯ್ಡ್ ಸಿಸ್ಟಮ್ ಅನ್ನು ಆಧರಿಸಿವೆ. ಈ ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಪ್ಲೇ ಸೇವೆಯನ್ನು ಬೆಂಬಲಿಸಲಾಗುವುದಿಲ್ಲ.
ಮುಖ್ಯವಾಗಿ Google Play ಕೆಲಸ ಮಾಡದೇ ಇದ್ದಾಗ ಆಪರೇಟಿಂಗ್ ಸಿಸ್ಟಮ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆ ಕ್ಷಣದಿಂದ ನಿಮ್ಮ ಫೋನ್ ಸುರಕ್ಷಿತವಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅನ್ನು ಬದಲಾಯಿಸುವುದು ಒಂದೇ ನಿಮ್ಮ ಮುಂದೆ ಇರುವ ಆಯ್ಕೆಯಾಗಿರುತ್ತದೆ.
ಇದನ್ನು ಓದಿ: Daily horoscope: ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತೆ ಇಂದು ಈ ರಾಶಿಯವರಿಗೆ!!!